ETV Bharat / bharat

ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಿದ ಉತ್ತರಾಖಂಡ ಸಿಎಂ ಧಾಮಿ

CM Dhami introduced UCC Bill 2024: ಉತ್ತರಾಖಂಡ ವಿಧಾನಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ- 2024 ಅನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಡಿಸಿದರು. ಮಸೂದೆ ಮಂಡನೆಯಾದ ತಕ್ಷಣವೇ ಪ್ರತಿಪಕ್ಷಗಳು ಗದ್ದಲ ಸೃಷ್ಟಿಸಿದವು. ಇದರಿಂದ ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

M Dhami introduced UCC  UCC Bill 2024  ಏಕರೂಪ ನಾಗರಿಕ ಸಂಹಿತೆ ಮಸೂದೆ  ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ  ಯುಸಿಸಿ ಮಸೂದೆ 2024
ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡಿಸಿದ ಉತ್ತರಾಖಂಡ ಸಿಎಂ ಧಾಮಿ
author img

By ETV Bharat Karnataka Team

Published : Feb 6, 2024, 1:15 PM IST

ಡೆಹ್ರಾಡೂನ್ (ಉತ್ತರಾಖಂಡ): ಧಾಮಿ ಸರ್ಕಾರದ ಬಹು ನಿರೀಕ್ಷಿತ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಇಂದು (ಮಂಗಳವಾರ) ವಿಧಾನಸಭೆಯಲ್ಲಿ ಮಂಡಿಸಲಾಯಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯುಸಿಸಿ ಮಸೂದೆ 2024 ಅನ್ನು ಸದನದಲ್ಲಿ ಮಂಡಿಸಿದರು. ಸಿಎಂ ಧಾಮಿ ಯುಸಿಸಿ ಮಸೂದೆ 2024 ಅನ್ನು ಪರಿಚಯಿಸಿದ ತಕ್ಷಣವೇ ಪ್ರತಿಪಕ್ಷಗಳು ಸದನದಲ್ಲಿ ಗದ್ದಲವನ್ನು ಸೃಷ್ಟಿಸಿದವು. ಭಾರಿ ಗದ್ದಲದ ಹಿನ್ನೆಲೆಯಲ್ಲಿ ಸ್ಪೀಕರ್ ರಿತು ಖಂಡೂರಿ ಅವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಯುಸಿಸಿ ಬಿಲ್ ಮಂಡಿಸಿದ ಸಿಎಂ ಧಾಮಿ: ಸಿಎಂ ಧಾಮಿ ಯುಸಿಸಿ ಬಿಲ್ 2024 ಅನ್ನು ಮಂಡಿಸಿದರು. ಈ ವೇಳೆ, ವಂದೇ ಮಾತರಂನ ಘೋಷಣೆಗಳು ಸದನದಲ್ಲಿ ಪ್ರತಿಧ್ವನಿಸಿದವು. ಮತ್ತೊಂದೆಡೆ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಲು ಆರಂಭಿಸಿದವು. ಬಳಿಕ ವಿಧಾನಸಭಾಧ್ಯಕ್ಷ ಮುಂದೂಡಿಕೆ ಮಾಡಿದರು. ಇದರೊಂದಿಗೆ ಯುಸಿಸಿ ವಿಧೇಯಕವನ್ನು ಓದಲು ಶಾಸಕರಿಗೆ ಮಧ್ಯಾಹ್ನ 2 ಗಂಟೆಗೆ ಸಮಯಾವಕಾಶ ನೀಡಲಾಯಿತು.

ಇದಕ್ಕೂ ಮುನ್ನ ಸದನದ ಕಲಾಪ ಆರಂಭವಾಗುವ ಮುನ್ನವೇ ವಿರೋಧ ಪಕ್ಷದ ಶಾಸಕರು ಸದನದ ಹೊರಗೆ ಮೆಟ್ಟಿಲುಗಳ ಮೇಲೆ ತಮ್ಮ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂತು. ಸದನದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡನೆಯಾದಾಗ ವಿಪಕ್ಷಗಳ ಶಾಸಕರು ಯುಸಿಸಿ ವಿಧೇಯಕವನ್ನು ಅಧ್ಯಯನ ಮಾಡಲು ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಬಿಜೆಪಿ ಸರಕಾರ ಸಂಖ್ಯಾಬಲದ ಆಧಾರದಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ವಿರೋಧ ಪಕ್ಷದ ಶಾಸಕರು ಸರಕಾರವನ್ನು ದೂರಿದರು.

ಧರಣಿ ನಿರತ ವಿಪಕ್ಷ ನಾಯಕರು ಆರೋಪವೇನು?: ಇದೇ ವೇಳೆ ಧರಣಿ ನಿರತ ವಿಪಕ್ಷ ನಾಯಕರು, ''ವಿಧಾನಸಭೆ ಅಧಿವೇಶನದ ಕುರಿತು ಜ.25ರಂದು ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಫೆ.6ರ ವರೆಗೆ ಎಲ್ಲ ಸದಸ್ಯರು ಮುಂದೂಡಿಕೆ ನಿರ್ಣಯ ನೀಡಲಿದ್ದಾರೆ ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ, ಇದೀಗ ಸರ್ಕಾರ ವಿಶೇಷ ಅಧಿವೇಶನ ಕರೆಯುವ ಮುಂದೂಡಿಕೆ ನಿರ್ಣಯವನ್ನು ರದ್ದುಗೊಳಿಸಿದೆ. ಫೆ.6ರಂದು ಮಾತ್ರವಲ್ಲದೆ ವಿಧಾನಸಭೆ ಅಧಿವೇಶನದ ಎರಡನೇ ದಿನವೂ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಶಾಸಕರ ಮೇಜಿನ ಮೇಲೆ ಇಟ್ಟು ಚರ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯುಸಿಸಿ ಮಸೂದೆಯನ್ನು ಅಧ್ಯಯನ ಮಾಡಲು ಸಮಯ ನೀಡುವುದು ಮಾತ್ರವಲ್ಲದೆ, ಅದನ್ನು ಉತ್ತಮ ರೀತಿಯಲ್ಲಿ ಚರ್ಚಿಸಬೇಕು ಎಂದು ಪ್ರತಿಪಕ್ಷಗಳು ಸದನದೊಳಗೆ ಆಗ್ರಹಿಸಿವೆ.

ಏಕರೂಪ ನಾಗರಿಕ ಸಂಹಿತೆ ವಿಧೇಯಕ 2024 ಅನ್ನು ಸದನದಲ್ಲಿ ಮಂಡಿಸಿದ ನಂತರ, ಚರ್ಚೆಯಲ್ಲಿ ಭಾಗವಹಿಸಲು ನಾಯಕರಿಗೆ ಅಧ್ಯಯನ ಮಾಡಲು ಸಮಯ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಕಳ್ಳನನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟ ಗೂಗಲ್​ ಮ್ಯಾಪ್​; ಹೇಗಿತ್ತು ಗೊತ್ತಾ ಆ ಕಾರ್ಯಾಚರಣೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.