ETV Bharat / bharat

ಕ್ಷುಲಕ ವಿಚಾರಕ್ಕೆ ಸಹಪಾಠಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ 9ನೇ ತರಗತಿ ವಿದ್ಯಾರ್ಥಿ - student attacked his classmate - STUDENT ATTACKED HIS CLASSMATE

ನೀರು ಚೆಲ್ಲಿದ ಎಂಬ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಇದರಿಂದ ಕುಪಿತಗೊಂಡು ಸಿಟ್ಟಿಗೆದ್ದ ವಿದ್ಯಾರ್ಥಿ ಕುಡುಗೋಲಿನಿಂದ ಸಹಪಾಠಿ ಮೇಲೆ ಹಲ್ಲೆ ನಡೆಸಿದ್ದಾನೆ.

class 9 student attacked his classmate with a sickle  After Fighting Over Split Water
ಕ್ಷುಲಕ ವಿಚಾರಕ್ಕೆ ಸಹಪಾಠಿ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ 9ನೇ ತರಗತಿ ವಿದ್ಯಾರ್ಥಿ (IANS ಸಾಂದರ್ಭಿಕ ಚಿತ್ರ)
author img

By IANS

Published : Aug 3, 2024, 10:38 AM IST

ಚೆನ್ನೈ, ತಮಿಳುನಾಡು: ನೀರಿನ ವಿಷಯಕ್ಕೆ ಸಹಪಾಠಿಯೊಡನೆ ಜಗಳವಾಡಿದ 9ನೇ ತರಗತಿ ವಿದ್ಯಾರ್ಥಿ ಕುಡುಗೋಲಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.

ಇಬ್ಬರು ಬಾಲಕ ಕೇಂದ್ರೀಯ ವಿದ್ಯಾಲಯದಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆಗಸ್ಟ್​ 1ರಂದು ನೀರು ಚೆಲ್ಲಿದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಮರುದಿನ ಆಗಸ್ಟ್​ 2ರಂದು ಈ ಘಟನೆ ನಡೆದಿದೆ. ಪರಾರಿಯಾದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.

ಗಾಯಗೊಂಡ ಬಾಲಕನನ್ನು ತಿರುನಲ್ವೇಲಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಂತ್ರಸ್ತ ಬಾಲಕ ಮೂಲಕರೈಪಟ್ಟಿ ಮೂಲದನಾಗಿದ್ದರೆ, ಹಲ್ಲೆ ನಡೆಸಿದ ಬಾಲಕ ನಂಗುನೇರಿ ಮೂಲದವನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆಗಸ್ಟ್​ 1ರಂದು ಹಲ್ಲೆಗಳಗಾದ ಬಾಲಕ ಊಟದ ಬ್ಯಾಗ್​ನಿಂದ ಬಾಟಲ್​ ತೆಗೆಯುವಾಗ ಆಕಸ್ಮಿಕವಾಗಿ ನೀರನ್ನು ಚೆಲ್ಲಿದ್ದಾನೆ. ಈ ಕ್ಷುಲಕ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ಘಟನೆಯಿಂದ ಸಿಟ್ಟಿಗೆದ್ದ ಬಾಲಕ ಸಣ್ಣ ಕುಡುಗೋಲಿನಿಂದ ವಿದ್ಯಾರ್ಥಿ ತಲೆ ಮೇಲೆ ಹಲ್ಲೆ ನಡೆಸಿದ್ದಾನೆ.

ಘಟನೆ ತಿಳಿದ ವಿಜಯ ನಾರಾಯಣ ಪೊಲೀಸರು ಆರೋಪಿ ಬಾಲಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಬಾಲಕನನ್ನು ಪಳಯಂಕೊಟ್ಟೈನಲ್ಲಿರುವ ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸುವಂತೆ ಎಂದು ಬಾಲ ನ್ಯಾಯ ಮಂಡಳಿ ಆದೇಶಿಸಿದೆ. ಆಗಸ್ಟ್​ 1ರಂದು ಪಾಲಯಂಕೊಟ್ಟೈನಲ್ಲಿ ಕಾಲೇಜು ವಿದ್ಯಾರ್ಥಿ ಕೊಲೆ ಮಾಡಲು ನಾಲ್ವರು ಗ್ಯಾಂಗ್​ ಸದಸ್ಯರು ಮುಂದಾಗಿದ್ದರು. ಈ ಪ್ರಕರಣದಲ್ಲೂ ಆರೋಪಿಗಳ ಬಂಧಿಸುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ತಮ್ಮ ಸಹಪಾಠಿಗಳ ಮೇಲೆ ಹರಿತ ಆಯುಧಗಳಿಂದ ದಾಳಿ ನಡೆಸುವ ಪ್ರಕರಣಗಳ ನಿರಂತರವಾಗಿ ಹೆಚ್ಚುತ್ತಿದ್ದು, ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಇವು ಮಕ್ಕಳ ಮಾನಸಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ. ಮಕ್ಕಳು ಸುಲಭವಾಗಿ ಕಿರಿಕಿರಿ, ಹತಾಶೆಯಂತಹ ಪರಿಸ್ಥಿತಿಗೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ.

ಈ ಕುರಿತು ಸಲಹೆ ನೀಡಿರುವ ಮನೋವೈದ್ಯರು, ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ಜಾಗರೂಕರಾಗಿರಬೇಕು. ಬದುಕಿನಲ್ಲಿನ ತ್ಯಾಗ ಮತ್ತು ಹೊಂದಾಣಿಕೆಯ ಮಹತ್ವವನ್ನು ಅರ್ಥಮಾಡಿಸುವ ಯತ್ನ ನಡೆಸಬೇಕಿದೆ. ಜೊತೆಗೆ ಮಕ್ಕಳಿಗೆ ದಯೆ, ಸಹೋದರತ್ವದ ಗುಣಗಳನ್ನು ತಿಳಿಸುವ, ಶಾಂತಿಯುತ ಅರ್ಥಪೂರ್ಣ ಜೀವನದ ಮಹತ್ವ ಸಾರಬೇಕಿದೆ ಎಂದರು.

ಇದನ್ನು ಓದಿ: ಸಹಪಾಠಿಯನ್ನು ಮೂರನೇ ಮಹಡಿಯಿಂದ ತಳ್ಳಿದ ಎಂಬಿಬಿಎಸ್​ ವಿದ್ಯಾರ್ಥಿ; ಯುವತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.