ETV Bharat / bharat

ಆಡಳಿತ ಸ್ವಚ್ಛತೆಗಾಗಿ ವಿಶೇಷ ಅಭಿಯಾನ 4.0 ಆರಂಭಿಸಿದ ನಾಗರಿಕ ವಿಮಾನಯಾನ ಸಚಿವಾಲಯ - Clearing the Skies and the Files - CLEARING THE SKIES AND THE FILES

ಸರ್ಕಾರಿ ಕಚೇರಿಗಳಾದ್ಯಂತ ಸ್ವಚ್ಛತಾ ಪ್ರಚಾರದ ಮೂಲಕ ವಿಲೇವಾರಿಯಾಗದೇ ಬಾಕಿ ಉಳಿದಿರುವ ಕಡತ ಮತ್ತು ಕೆಲಸಗಳಿಗೆ ವೇಗಗೊಳಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ.

Civil Aviation Ministry Takes Off with Special Campaign 4.0 for Clean Governance
ನಾಗರಿಕ ವಿಮಾನಯಾನ ಸಚಿವಾಲಯದ ಸಭೆ (ಈಟಿವಿ ಭಾರತ್​)
author img

By ETV Bharat Karnataka Team

Published : Sep 28, 2024, 5:15 PM IST

ನವದೆಹಲಿ: ಗಾಂಧಿ ಜಯಂತಿ ಅಂಗವಾಗಿ ನಡೆಯುವ ಆಡಳಿತಾತ್ಮಕ ದಕ್ಷತೆ ಮತ್ತು ಸ್ವಚ್ಛತೆಗಾಗಿ ನಡೆಯುವ ಭಾರತ ಸರ್ಕಾರದ ವಿಶೇಷ ಅಭಿಯಾನ 4.0ನಲ್ಲಿ ತಾನು ಕೂಡ ಸಕ್ರಿಯವಾಗಿ ಭಾಗವಹಿಸುವುದಾಗಿ ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಿಸಿದೆ. ಸರ್ಕಾರಿ ಕಚೇರಿಗಳಾದ್ಯಂತ ಸ್ವಚ್ಛತಾ ಪ್ರಚಾರದ ಮೂಲಕ ವಿಲೇವಾರಿಯಾಗದೆ ಬಾಕಿ ಉಳಿದಿರುವ ಕಡತ ಮತ್ತು ಕೆಲಸಗಳಿಗೆ ವೇಗಗೊಳಿಸುವ ಗುರಿಯನ್ನು ಈ ಉಪಕ್ರಮವೂ ಹೊಂದಿದೆ.

ಈ ಅಭಿಯಾನದಲ್ಲಿ ಸಚಿವಾಲಯವೂ ಭಾಗಿಯಾಗುವ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ. ಈ ಅಭಿಯಾನದ ಅಂಗವಾಗಿ, ಸೆಪ್ಟೆಂಬರ್ 27 ರಂದು ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಪರಿಶೀಲನಾ ಸಭೆ ನಡೆಸಲಾಗಿದೆ. ಉತ್ತಮ ಆಡಳಿತಕ್ಕೆ ಸರ್ಕಾರದ ಬದ್ಧತೆಯ ಗುರಿಯೊಂದಿಗೆ ಸುಧಾರಣೆ ಮತ್ತು ಆಡಳಿತದ ದಕ್ಷತೆ ಹೆಚ್ಚಿಸುವುದನ್ನು ಈ ಉಪಕ್ರಮವು ಹೊಂದಿದೆ ಎಂದಿದ್ದಾರೆ.

ಪೂರ್ವಸಿದ್ಧತಾ ಹಂತದಲ್ಲಿ, ಹಲವಾರು ಕೆಲಸಗಳು ಬಾಕಿ ಉಳಿದಿರುವ ಕಾರ್ಯಗಳನ್ನು ಸಚಿವಾಲಯವು ಗುರುತಿಸಿದೆ. 16,580 ಫೈಲ್‌ಗಳು ಮತ್ತು 2,093 ಎಲೆಕ್ಟ್ರಾನಿಕ್ ಫೈಲ್‌ಗಳನ್ನು ಪರಿಶೀಲನೆ ನಡೆಸಬೇಕಿದೆ. ಜೊತೆಗೆ ಸಚಿವಾಲಯವು 283 ಸಾರ್ವಜನಿಕ ಕುಂದುಕೊರತೆಗಳನ್ನು ಮತ್ತು 100 ಸಾರ್ವಜನಿಕ ಕುಂದುಕೊರತೆ ಮನವಿಗಳನ್ನು ಪರಿಹರಿಸಲು ಬದ್ಧವಾಗಿದೆ. ಕಚೇರಿ 678 ಸೈಟ್‌ಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಸ್ವಚ್ಛತೆಯಲ್ಲಿ ಗುರುತಿಸಿದೆ.

ಈ ಪರಿಶೀಲನೆ ಸಭೆಯಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಅನೇಕ ಸಂಘಟನೆಯ ಮುಖ್ಯಸ್ಥರು ಭಾಗಿಯಾಗಿದ್ದು, ಅಭಿಯಾನದ ಯಶಸ್ಸನ್ನು ಖಾತ್ರಿ ಪಡೆಸಲು ಅನೇಕ ತಂತ್ರಗಳ ಕುರಿತು ಚರ್ಚಿಸಿದರು. ಈ ಅಭಿಯಾನವೂ ಪಾರದರ್ಶಕತೆ ಮತ್ತು ಕಾರ್ಯಾಚರಣೆಯ ದಕ್ಷತೆ ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ವಿಶೇಷ ಅಭಿಯಾನವವು 4.0 ನಾಗರಿಕ ವಿಮಾನಯಾನ ಸಚಿವಾಲಯವು ಕೆಲಸದ ಸ್ಥಳ ಸ್ವಚ್ಛತೆ ಮತ್ತು ಸುವ್ಯವಸ್ಥಿತ ಆಡಳಿತದ ಗುರಿಗಳನ್ನು ಹೆಚ್ಚಿಸಲಿದೆ. ಹೆಚ್ಚು ಪಾರದರ್ಶಕ ಮತ್ತು ದಕ್ಷ ಆಡಳಿತಕ್ಕೆ ತನ್ನ ಬದ್ಧತೆಯನ್ನು ಇದು ಬಲಪಡಿಸುತ್ತದೆ.

ಇದನ್ನೂ ಓದಿ: ಕೆಲಸ ಬಿಟ್ಟು ರೈಲ್ವೆ ಹಳಿ ಮೇಲೆ ಮೊಬೈಲ್​ನಲ್ಲಿ ಲುಡೋ ಗೇಮ್​ ಆಡಿದ ನಾಲ್ವರು ಮಹಿಳಾ ಸಿಬ್ಬಂದಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.