ETV Bharat / bharat

ಕೇರಳ ಬಂಪರ್‌ ಲಾಟರಿ: ₹20 ಕೋಟಿ ಗೆದ್ದ ವ್ಯಕ್ತಿ ನಾಪತ್ತೆ! - ಕೇರಳ ಲಾಟರಿ ಮೊತ್ತ

ಕೇರಳ ಸರ್ಕಾರ ನಡೆಸುವ ಈ ಲಾಟರಿ ಈ ವರ್ಷ ಬಂಪರ್​ ಮೊತ್ತ ಹೊಂದಿತ್ತು.

Christmas New Year Bumper Kerala lottery results out

author img

By ETV Bharat Karnataka Team

Published : Jan 25, 2024, 11:57 AM IST

ತಿರುವನಂತಪುರ: ಕ್ರಿಸ್ಮಸ್​ ಮತ್ತು ಹೊಸ ವರ್ಷದ ಬಂಪರ್ ಕೇರಳ ಲಾಟರಿಯ ಫಲಿತಾಂಶ ಪ್ರಕಟವಾಗಿದೆ. ಮೊದಲ ಬಹುಮಾನ 20 ಕೋಟಿ ರೂಪಾಯಿ ಆಗಿದ್ದು, ತಿರುವನಂತಪುರಂ ನಿವಾರಿ ದುರೈರಾಜ್​ ಗೆದ್ದಿದ್ದಾರೆ. ಇವರ ಲಾಟರಿ ಟಿಕೆಟ್​ ನಂಬರ್​ X​ 224091 ಆಗಿದೆ. ಈ ಟಿಕೆಟ್​ ಅನ್ನು ತಿರುವನಂತಪುರನ ಈಸ್ಟ್​ ಫೋರ್ಟ್​​​ ಲಕ್ಷ್ಮಿ ಲಕ್ಕಿ ಸೆಂಟರ್​​ನಲ್ಲಿ ಮಾರಾಟ ಮಾಡಲಾಗಿತ್ತು. ದುರೈರಾಜ್​ ಪಲ್ಲಕ್ಕಡ್​ನ ಸ್ಥಳೀಯ ಶಹಜಹಾನ್​ ಎಂಬ ಎಜೆಂಟರಿಂದ ಟಿಕೆಟ್​ ಪಡೆದಿದ್ದರು. ಆದರೆ, ಇಷ್ಟು ದೊಡ್ಡ ಮೊತ್ತದ ಬಹುಮಾನ ಗೆದ್ದ ಅದೃಷ್ಟಶಾಲಿ ವಿಜೇತ ಪತ್ತೆಯಾಗಿಲ್ಲ. ಎರಡನೇ ಬಹುಮಾನ ಒಂದು ಕೋಟಿ ರೂಪಾಯಿ ಆಗಿದ್ದು, 20 ಅದೃಷ್ಟಶಾಲಿಗಳು ತಮ್ಮದಾಗಿಸಿಕೊಂಡಿದ್ದಾರೆ.

ಬಂಪರ್​ ಡ್ರಾ: ಭಾರಿ ಮೊತ್ತದ ಬಂಪರ್‌ ಲಾಟರಿ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಟಿಕೆಟ್​ ಮಾರಾಟವಾಗಿತ್ತು. ಈ ಮೂಲಕ ಕಳೆದ ವರ್ಷದ ದಾಖಲೆಯೂ ಮುರಿದಿತ್ತು. ರಾಜ್ಯದ ಇತರೆ ಲಾಟರಿಗಳಿಗೆ ಹೋಲಿಸಿದರೆ, ರಾಜ್ಯ ಸರ್ಕಾರದಿಂದಲೇ ಸಂಪೂರ್ಣವಾಗಿ ಈ ಲಾಟರಿ ಪ್ರಕ್ರಿಯೆಯನ್ನು ನಿರ್ವಹಿಸಲಾಗುತ್ತಿದೆ. ಟಿಕೆಟ್​ ಪ್ರಿಂಟ್​ ಮಾಡುವುದರಿಂದ ಡ್ರಾವರೆಗೆ ಎಲ್ಲಾ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕೇರಳ ಲಾಟರಿ ನಿರ್ದೇಶನಾಲಯ ನಿರ್ದೇಶಕ ಐಆರ್​ಎಸ್ ಅಧಿಕಾರಿ ಅಬ್ರಹಾಂ ರೆನ್​ ತಿಳಿಸಿದರು.

ಇದೀಗ ಕೇರಳದ ಲಾಟರಿಯನ್ನು ಹೆಚ್ಚಾಗಿ ಕೇರಳೇತ್ತರ ಜನರೂ ಕೊಳ್ಳುತ್ತಿದ್ದಾರೆ. ಶಬರಿಮಲೆಯ ಯಾತ್ರಾ ಸಮಯವೂ ಕೂಡ ಟಿಕೆಟ್​ ಮಾರಾಟಕ್ಕೆ ಸಹಾಯ ಮಾಡಿದೆ. ಈ ವರ್ಷ 45 ಲಕ್ಷ ಟಿಕೆಟ್​​ಗಳು ಮಾರಾಟವಾಗಿವೆ. ಅದರಲ್ಲಿ ಪಾಲಕ್ಕಾಡ್​ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್​ ಮಾರಾಟವಾದರೆ, ಎರಡನೇ ಸ್ಥಾನದಲ್ಲಿ ಎರ್ನಾಕುಲಂ ಮತ್ತು ಮೂರನೇ ಸ್ಥಾನದಲ್ಲಿ ತ್ರಿಶೂರ್​ ಇದೆ ಎಂದು ಮಾಹಿತಿ ನೀಡಿದರು.

ಸುಲಭ ಹಣ ಹಂಚಿಕೆಗೆ ಕ್ರಮ: ಕೇರಳ ಸರ್ಕಾರ ಲಾಟರಿ ಗೆದ್ದವರ ಅನುಕೂಲಕ್ಕಾಗಿ ಬಹುಮಾನದ ರಚನೆಯನ್ನು ಸುಧಾರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೊದಲ ಬಹುಮಾನ ಗೆದ್ದವರಿಗೆ ಹಣ ಹಂಚಲು ಯಾವುದೇ ವಿಳಂಬ ಮಾಡದೇ ನೇರವಾಗಿ ಅವರ ಕೈಗೆ ಹಣ ನೀಡುವ ಇಲ್ಲವೇ ರಾಷ್ಟ್ರೀಕೃತ ಬ್ಯಾಂಕ್​ ಮೂಲಕ ಅಥವಾ ಅಗತ್ಯ ದಾಖಲಾತಿಗಳನ್ನು ನಿರ್ದೇಶನಾಲಯವೇ ಮಾಡುತ್ತಿದೆ.

ಕೇರಳೇತರರು ಈ ಬಹುಮಾನದ ಹಣ ಗೆದ್ದಲ್ಲಿ ಕೂಡ ಯಾವುದೇ ನಿರ್ಬಂಧವಿಲ್ಲದೇ ಹಣವನ್ನು ಪಡೆಯಬಹುದು. ಇದಕ್ಕೆ ಅಗತ್ಯ ದಾಖಲಾತಿ ಪ್ರಸ್ತುತಪಡಿಸುವುದು ಅಗತ್ಯ. ಕೇರಳದ ದೊಡ್ಡ ವಲಸಿಗ ಸಮುದಾಯ ಈ ಟಿಕೆಟ್​​ ಖರೀದಿಸುವಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. ಕೇರಳ ಲಾಟರಿ ನಿಯಮದ ಪ್ರಕಾರ, ಟಿಕೆಟ್​ ಅನ್ನು ರಾಜ್ಯದಿಂದ ಹೊರಗೆ ಖರೀದಿಸುವಂತಿಲ್ಲ. ರಾಜ್ಯದ ಮಿತಿಯೊಳಗೆ ಅವರು ಖರೀದಿಸಬೇಕು.

ಇದನ್ನೂ ಓದಿ: ಮಣ್ಣು ಅಗೆಯುವಾಗ ಮೊಘಲ್ ಕಾಲದ ಚಿನ್ನ- ಬೆಳ್ಳಿ ನಾಣ್ಯಗಳು ಪತ್ತೆ: ನಿಧಿಯೊಂದಿಗೆ ಗುತ್ತಿಗೆದಾರ ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.