ETV Bharat / bharat

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಮುಖ್ಯ ಅರ್ಚಕ ಇನ್ನಿಲ್ಲ.. - CHIEF PRIEST OF RAM TEMPLE NO MORE

author img

By PTI

Published : Jun 22, 2024, 3:55 PM IST

ಪಂಡಿತರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ. ಭಾರತದ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಗೆ ಅವರು ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದ್ದಾರೆ.

chief-priest-of-ram-temple-consecration-ceremony-dies
ಆಚಾರ್ಯ ಲಕ್ಷ್ಮೀಕಾಂತ್​ ದೀಕ್ಷಿತ್ (ಈಟಿವಿ ಭಾರತ್​​)

ವಾರಾಣಸಿ (ಉತ್ತರ ಪ್ರದೇಶ) : ಅಯೋಧ್ಯೆಯ ರಾಮ ಮಂದಿರ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಮುಖ್ಯ ಅರ್ಚಕರಾದ ಆಚಾರ್ಯ ಲಕ್ಷ್ಮೀಕಾಂತ್​ ದೀಕ್ಷಿತ್​​​ ಅವರು ಇಂದು ನಿಧನರಾಗಿದ್ದಾರೆ. 86 ವರ್ಷದ ಅರ್ಚಕರ ಆರೋಗ್ಯವು ಕಳೆದ ಕೆಲವು ದಿನಗಳಿಂದ ಹದಗೆಟ್ಟಿತ್ತು. ಅವರ ಅಂತ್ಯಕ್ರಿಯೆಯನ್ನು ಮಣಿಕರ್ಣಿಕ ಘಾಟ್​ನಲ್ಲಿ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತ್ತು. ಈ ಆಧ್ಯಾತ್ಮಿಕ ಸಮಾರಂಭದಲ್ಲಿ ವಾರಾಣಸಿಯ ಹಿರಿಯ ಆರ್ಚಕರಾಗಿದ್ದ ದೀಕ್ಷಿತ್​ ಭಾಗಿಯಾಗಿದ್ದರು. ದೀಕ್ಷಿತ್​ ಅವರು ಮಹಾರಾಷ್ಟ್ರದ ಸೋಲಾಪುರ್​​ ಜಿಲ್ಲೆಯ ಮೂಲದವರಾಗಿದ್ದು, ಅನೇಕ ಪೀಳಿಗೆಯಿಂದ ವಾರಾಣಸಿಯಲ್ಲಿ ನೆಲೆಸಿದ್ದರು.

ದೀಕ್ಷಿತ್​ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ಆಚಾರ್ಯ ಲಕ್ಷ್ಮೀಕಾಂತ್​ ದೀಕ್ಷಿತ್​ ಅವರು ಕಾಶಿಯ ದೊಡ್ಡ ಜ್ಞಾನಿಗಳಾಗಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ಅರ್ಚಕರಾಗಿದ್ದವರು. ಅವರ ನಿಧನವು ಆಧ್ಯಾತ್ಮಿಕ ಮತ್ತು ಸಾಹಿತ್ಯಕ ಕ್ಷೇತ್ರಕ್ಕೆ ನಷ್ಟ ಉಂಟು ಮಾಡಿದೆ. ಭಾರತದ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಗೆ ಅವರು ಸಲ್ಲಿಸಿರುವ ಸೇವೆಯಿಂದಾಗಿ ಅವರು ಚಿರಸ್ಮರಣೆಯಾಗಿರಲಿದ್ದಾರೆ ಎಂದಿದ್ದಾರೆ.

ಅವರ ಆತ್ಮಕ್ಕೆ ಭಗವಾನ್​ ಶ್ರೀರಾಮ್​ನಲ್ಲಿ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ತಮ್ಮ ಸೋದರಮಾವ ಗಣೇಶ್​ ದೀಕ್ಷಿತ್​​ ವೇದ ಮತ್ತು ಸಂಸ್ಕೃತಿಗಳಿಂದ ಪ್ರೇರಣೆ ಪಡೆದು, ಪಾಂಡಿತ್ಯವನ್ನು ಪಡೆದಿದ್ದರು. ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ದಿನ ಇವರ ಮುಖ್ಯಸ್ಥಿಕೆಯಲ್ಲಿ 121 ಅರ್ಚಕರ ತಂಡ ಯಜುರ್ವೇದ ಪಠಣೆ ನಡೆಸಿದ್ದರು.

ಇದನ್ನೂ ಓದಿ: ರಾಮ ನಗರಿ ಅಯೋಧ್ಯೆಯಲ್ಲಿ ಎನ್​ಎಸ್​ಜಿ ಕೇಂದ್ರ ಆರಂಭಕ್ಕೆ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.