ETV Bharat / bharat

ಚಂದ್ರಬಾಬು ನಾಯ್ಡು ಅವರ ಬಂಧನವೇ ಜಗನ್​ ಅವನತಿಗೆ ಕಾರಣವಾಯಿತಾ? - Chandrababu arrest is the downfall of Jagan

author img

By ETV Bharat Karnataka Team

Published : Jun 5, 2024, 1:38 PM IST

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳೆರಡರಲ್ಲೂ ಆಡಳಿತ ಪಕ್ಷ ವೈಎಸ್​ಆರ್​ಸಿಪಿ ಹೀನಾಯ ಸೋಲು ಕಂಡಿದ್ದು, ಚಂದ್ರಬಾಬು ನಾಯ್ಡು ಅವರ ಟಿಡಿಪಿ ಅದ್ಧೂರಿ ಗೆಲುವು ಸಾಧಿಸಿದೆ.

Chandra Babu Naidu and wife Bhuvaneshwari
ಚಂದ್ರಬಾಬು ನಾಯ್ಡು ಹಾಗೂ ಪತ್ನಿ ಭುವನೇಶ್ವರಿ (ETV Bharat)

ಅಮರಾವತಿ, ಆಂಧ್ರಪ್ರದೇಶ: ಲೋಕಸಭಾ ಚುನಾವಣಾ ಫಲಿತಾಂಶದ ಜೊತೆಗೆ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶವೂ ಪ್ರಕಟಗೊಂಡಿದ್ದು, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಿಜಯ ಪತಾಕೆ ಹಾರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದರೆ ವೈಎಸ್​ಆರ್​ಸಿಪಿ ನಾಲ್ಕು ಸ್ಥಾನಗಳನ್ನಷ್ಟೇ ಪಡೆದಿದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ 175 ಕ್ಷೇತ್ರಗಳ ಪೈಕಿ ಟಿಡಿಪಿ 135 ಕ್ಷೇತ್ರಗಳಲ್ಲಿ, ಮಿತ್ರಪಕ್ಷಗಳಾದ ಜನಸೇನಾ ಪಕ್ಷ 21 ಹಾಗೂ ಬಿಜೆಪಿ 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಇದೀಗ ಟಿಡಿಪಿಯ ಅದ್ಧೂರಿ ಗೆಲುವು ಹಾಗೂ ವೈಎಸ್​ಆರ್​ಸಿಪಿಯ ಹೀನಾಯ ಸೋಲಿನ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅಧಿಕಾರದ ದುರುಪಯೋಗ ಹಾಗೂ ಸುಳ್ಳು ಆರೋಪಗಳ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದೇ ಜಗನ್ ಮೋಹನ್​ ರೆಡ್ಡಿ​ ಅವರ ಅವನತಿ ಹಾಗೂ ವೈಎಸ್​ಆರ್​ಸಿಪಿ ಸರ್ಕಾರದ ಪತನಕ್ಕೆ ಕಾರಣ. ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಬಂಧನ ಆಂಧ್ರಪ್ರದೇಶದಾದ್ಯಂತ ಜನರನ್ನು ಕೆರಳಿಸಿತ್ತು. ಹಲವಾರು ಬೃಹತ್​ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಈ ಎಲ್ಲವೂ ವೈಎಸ್​ಆರ್​ಸಿಪಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇದೀಗ ಲೋಕಸಭಾ ಹಾಗೂ ವಿಧಾನಸಭೆ ಚುನಾಚಣೆಗಳಲ್ಲಿ ಜನರು ತೋರಿಸಿರುವ ಫಲಿತಾಂಶವೇ, ಚಂದ್ರಬಾಬು ನಾಯ್ಡು ಅವರ ವಿರುದ್ಧ ವೈಎಸ್​ಆರ್​ಸಿಪಿ ಸರ್ಕಾರ ದಾಖಲಿಸಿರುವ ಪ್ರಕರಣಗಳಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಿವೆ. ಚಂದ್ರಬಾಬು ನಾಯ್ಡು ಅವರ ಬಂಧನದ ಸಮಯದಲ್ಲಿ ಆಂಧ್ರಪ್ರದೇಶ ಮಾತ್ರವಲ್ಲದೇ ನೆರೆಯ ರಾಜ್ಯಗಳ ಹೈದರಾಬಾದ್​, ಬೆಂಗಳೂರು ಹಾಗೂ ಚೆನ್ನೈನಂತಹ ನಗರಗಳಲ್ಲಿ ರ‍್ಯಾಲಿ, ಪ್ರತಿಭಟನೆಗಳನ್ನು ನಡೆಸಿದ್ದರು.

ಸಾವಿರಾರು ಕೋಟಿ ಮೌಲ್ಯದ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಜಗನ್​ ಮೋಹನ್​ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದಿದ್ದರು. ನಂತರದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರತಿಷ್ಠೆಗೆ ಮಸಿ ಬಳಿಯುವಂತಹ ಕೆಲಸಕ್ಕೆ ಪ್ರಯತ್ನಿಸಿದರು. ಇದಿರಂದಾಗಿ 2023ರ ಸೆಪ್ಟೆಂಬರ್​ 9 ರಂದು ಬೆಳಗ್ಗೆ 6 ಗಂಟೆಗೆ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್​ ಜಿಲ್ಲೆಯಲ್ಲಿ ಅತ್ಯಂತ ಅವಮಾನಕರ ರೀತಿಯಲ್ಲಿ ಬಂಧಿಸಿದ್ದರು. ವಿಜಯವಾಡದ ದಾರಿಯ ಮೂಲಕ ಅವರನ್ನು ಕರೆದೊಯ್ಯಲಾಗಿತ್ತು. ಬಂಧನದ ವಿಷಯ ತಿಳಿಯುತ್ತಿದ್ದಂತೆ ಟಿಡಿಪಿ ಕಾರ್ಯಕರ್ತರು ಬೃಹತ್​ ಸಂಖ್ಯೆಯಲ್ಲಿ ಬೀದಿಗಿಳಿದು ಪೊಲೀಸ್​ ಬೆಂಗಾವಲು ಪಡೆಯನ್ನು ತಡೆಯಲು ಪ್ರಯತ್ನಿಸಿದ್ದರು.

ಚಂದ್ರಬಾಬು ನಾಯ್ಡು ಅವರು ಬಿಡುಗಡೆಯಾಗುವವರೆಗೆ 52 ದಿನಗಳ ಕಾಲ ರಾಜ್ಯಾದ್ಯಂತ ಬೃಹತ್​ ಪ್ರತಿಭಟನೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ಹಲವು ಸಾವು ನೋವುಗಳು ಕೂಡ ಸಂಭವಿಸಿದ್ದವು. ಆಗ ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ಅವರು "ಸತ್ಯ ಜಯಿಸಬೇಕು" ಎಂಬ ಅಭಿಯಾನದಡಿ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಜೊತೆಗೆ ತಾವಿದ್ದೇವೆ ಎನ್ನುವ ಬೆಂಬಲವನ್ನೂ ನೀಡಿದರು.

ಮಹಿಳೆಯರಿಂದ ಅಭೂತಪೂರ್ವ ಬೆಂಬಲ: ಚಂದ್ರಬಾಬು ನಾಯ್ಡು ಅವರ ಬಂಧನ ಮನೆಯೊಳಗಿದ್ದ ಮಹಿಳೆಯರನ್ನೂ ಕೂಡ ಬೀದಿಗಿಳಿಯುವಂತೆ ಮಾಡಿತ್ತು. ವೈಎಸ್​ಆರ್​ಸಿಪಿ ಸರ್ಕಾರದ ನಿರಂಕುಶಾಧಿಕಾರದ ವಿರುದ್ಧ ಪ್ರತಿಭಟಿಸುವಂತೆ ಮಾಡಿತ್ತು. ವಿಜಯವಾಡದ ಬೆಂಜ್​ ಸರ್ಕಲ್​ ಮತ್ತು ಗುಂಟೂರಿನ ಬೃಂದಾವನ ಗಾರ್ಡನ್​ಗಳಲ್ಲಿ ಮಹಿಳೆಯರು ಬೃಹತ್​ ಪ್ರತಿಭಟನೆ ನಡೆಸಿದ್ದರು. ಗುಜ್ಜನಗುಂಡ್ಲದಿಂದ ಲಾಡ್ಜ್​ ಸೆಂಟರ್​ವರೆಗೆ ಹಲವು ಕಿಲೋಮೀಟರ್​ ಮೆರವಣಿಗೆ ನಡೆಸಿ, ಪ್ರತಿಭಟಿಸಿದ್ದರು.

ಪೊಲೀಸ್​ ನಿರ್ಬಂಧ, ಬಂಧನದ ನಡುವೆಯೂ ಮಹಿಳೆಯರು ಚಂದ್ರಬಾಬು ನಾಯ್ಡು ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಶ್ರೀಕಾಕುಳಂ ಜಿಲ್ಲೆಯ ಜಿ.ಸಿಗಡಂ ಮಂಡಲದಲ್ಲಿರುವ ಗೆದ್ದಾ ಕಂಚಾರಂ ಎಂಬ ಹಳ್ಳಿಯಲ್ಲಿ ಚಂದ್ರಬಾಬು ನಾಯ್ಡು ಅವರ ಬಿಡುಗಡೆಗೆ ವ್ಯಾಪಕವಾದ ಸಾರ್ವಜನಿಕ ಬೆಂಬಲವನ್ನು ಸಂಕೇತಿಸುವ ಮೂಲಕ 2000 ಮಹಿಳೆಯರು ಮೆರವಣಿಗೆ ನಡೆಸಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ್ದರು. ವಿಜಯವಾಡ, ಗುಂಟೂರು ಹಾಗೂ ಇತರ ಪ್ರದೇಶಗಳಲ್ಲಿ ಅಂದು ನಡೆದಿದ್ದ ಇಂತಹ ಮೆರವಣಿಗೆ, ಪ್ರತಿಭಟನೆಗಳು ಅಂದೇ ಜಗನ್​ ಅವರ ಸೋಲಿನ ಸ್ಪಷ್ಟ ಸೂಚನೆಯನ್ನು ನೀಡಿದ್ದವು.

ಈ ಬಾರಿ ಚುನಾವಣೆ ಸಂದರ್ಭದಲ್ಲೂ ಇತರ ರಾಜ್ಯಗಳಲ್ಲಿ ವಾಸಿಸುತ್ತಿರುವಂತಹ ಮಾತ್ರವಲ್ಲದೇ ವಿದೇಶಗಳಲ್ಲಿ ವಾಸಿಸುತ್ತಿರುವಂತಹ ಆಂಧ್ರಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚು ಖರ್ಚು ಮಾಡಿ, ಮತದಾನ ಮಾಡಲು ಬಂದಿದ್ದರು. ಈ ಎಲ್ಲವೂ ಈ ಬಾರಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಚಂದ್ರಬಾಬು ನಾಯ್ಡು ಅವರ ಗೆಲುವಿಗೆ ಕಾರಣವಾಯಿತು. ಮತ್ತು ಮತ್ತೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಭಾಗ್ಯ ಚಂದ್ರಬಾಬು ನಾಯ್ಡು ಅವರ ಪಾಲಿಗಾಯಿತು.

ಇದನ್ನೂ ಓದಿ: ನಾವು ಎನ್​​ಡಿಎ ಜತೆಗೆ ಇದ್ದೇವೆ, ಇಂದಿನ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ: ಚಂದ್ರಬಾಬು ನಾಯ್ಡು - Chandrababu Naidu statement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.