ETV Bharat / bharat

ಇಡಿ ಅಧಿಕಾರಿಗಳ ಮೇಲೆ ದಾಳಿ: ಸಂದೇಶ್‌ಖಾಲಿ ಡಾನ್ ಷಹಜಹಾನ್ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ ಸಿಬಿಐ - CBI CHARGE SHEET

author img

By ETV Bharat Karnataka Team

Published : May 28, 2024, 10:53 PM IST

ಪಶ್ಚಿಮ ಬಂಗಾಳದ ಬಹುಕೋಟಿ ಪಡಿತರ ಹಂಚಿಕೆ ಹಗರಣದ ತನಿಖೆಗೆ ತೆರಳಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ಸೇರಿ ಇತರರ ವಿರುದ್ಧ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ.

Shahjahan Sheikh
ಷಹಜಹಾನ್ ಶೇಖ್ (ETV Bharat)

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಜಾರಿ ನಿರ್ದೇಶನಾಲಯದ (ಇಡಿ) ತಂಡದ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಅಮಾನತುಗೊಂಡಿರುವ ಟಿಎಂಸಿ ನಾಯಕ ಷಹಜಹಾನ್ ಶೇಖ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನ ಆರೋಪ ಹೊರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಬಹುಕೋಟಿ ಪಡಿತರ ಹಂಚಿಕೆ ಹಗರಣದ ಆರೋಪ ಕೇಳಿ ಬಂದಿದೆ. ಈ ಪ್ರಕರಣದ ತನಿಖೆಗಾಗಿ ಷಹಜಹಾನ್ ಶೇಖ್ ಮನೆ ಮೇಲೆ ಜನವರಿ 5ರಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗಾಗಲೇ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಆಹಾರ ಸಚಿವ ಜ್ಯೋತಿ ಪ್ರಿಯಾ ಮಲ್ಲಿಕ್ ಅವರೊಂದಿಗೆ ಶೇಖ್ ನಂಟು ಹೊಂದಿದ್ದಾರೆ ಎಂದು ಆರೋಪಿಸಿ ಈ ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಸುಮಾರು 1,000 ಜನರ ಗುಂಪು ತನಿಖಾಧಿಕಾರಿಗಳ ಮೇಲೆ ದಾಳಿಯೇ ನಡೆಸಿತ್ತು.

ಈ ಪ್ರಕರಣ ಸಂಬಂಧ ಕೇಂದ್ರ ತನಿಖಾ ಸಂಸ್ಥೆಯು ಸೋಮವಾರ ಬಸಿರ್ಹತ್ ವಿಶೇಷ ನ್ಯಾಯಾಲಯದಲ್ಲಿ ತನ್ನ ಮೊದಲ ಚಾರ್ಜ್ ಶೀಟ್ ಸಲ್ಲಿಸಿದೆ. ಷಹಜಹಾನ್ ಶೇಖ್, ಆತನ ಸಹೋದರ ಅಲಂಗೀರ್ ಮತ್ತು ಸಹಚರರಾದ ಜಿಯಾವುದ್ದೀನ್ ಮೊಲ್ಲಾ, ಮಫುಜರ್ ಮೊಲ್ಲಾ ಮತ್ತು ದಿದರ್ಬಕ್ಷ್ ಮೊಲ್ಲಾ ಸೇರಿದಂತೆ ಏಳು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಷಹಜಹಾನ್ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ 120-ಬಿ (ಕ್ರಿಮಿನಲ್​ ಪಿತೂರಿ) ಮತ್ತು 307 (ಕೊಲೆಯ ಯತ್ನ) ಸೇರಿದಂತೆ ಗಲಭೆ ಮತ್ತು ಕಾನೂನುಬಾಹಿರ ಸಭೆ ಸೇರಿ ವಿವಿಧ ಸೆಕ್ಷನ್​ಗಳಡಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜನವರಿ 5ರಂದು ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ. ವಸತಿ ಮತ್ತು ಅಧಿಕೃತ ಆವರಣದಲ್ಲಿ ಶೋಧ ನಡೆಸಲು ಹೋದಾಗ ಇಡಿ ತನಿಖಾಧಿಕಾರಿಗಳ ಮೇಲಿನ ದಾಳಿಯ ಹಿಂದಿನ ಪ್ರಮುಖ ಸಂಚುಕೋರನೇ ಶಹಜಹಾನ್ ಶೇಖ್ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ವಕ್ತಾರರು ವಿವರಿಸಿದ್ದಾರೆ.

ಫೆಬ್ರವರಿ 29ರಂದು ಪಶ್ಚಿಮ ಬಂಗಾಳ ಪೊಲೀಸರು ಷಹಜಹಾನ್​ ಶೇಖ್​ನನ್ನು ಬಂಧಿಸಿದ್ದರು. ಮಾರ್ಚ್ 6ರಂದು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಸಂದೇಶಖಾಲಿ ಗ್ರಾಮದಲ್ಲಿ ಷಹಜಹಾನ್ ಶೇಖ್ ಮತ್ತು ಈತನ ಸಹಚರರು ವಿರುದ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಸಹ ಕೇಳಿ ಬಂದಿದೆ.

ಇದನ್ನೂ ಓದಿ: ಸಂದೇಶ್​ಖಾಲಿ ಮಹಿಳೆಯರಲ್ಲಿ ಕೊನೆಗೂ ಕ್ಷಮೆಯಾಚಿಸಿದ ಸಿಎಂ ಮಮತಾ, ಶೀಘ್ರವೇ ಭೇಟಿ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.