ETV Bharat / bharat

ಟಿಫಿನ್ ಸೆಂಟರ್‌ಗೆ ಬಸ್‌ ನುಗ್ಗಿ ಮತ ಹಾಕಲು ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸಾವು - Telangana Bus Accident - TELANGANA BUS ACCIDENT

ಮತ ಹಾಕಲು ತಮ್ಮೂರಿಗೆ ಹೋಗುತ್ತಿದ್ದ ಕುಟುಂಬದ ಖುಷಿ ಕ್ಷಣಾರ್ಧದಲ್ಲೇ ಕುಸಿದು ಹೋಯಿತು. ರಸ್ತೆ ಅಪಘಾತದಲ್ಲಿ ಸಂಭವಿಸಿದ ಸಾವು ಕುಟುಂಬವನ್ನು ದುಃಖದಲ್ಲಿ ಮುಳುಗಿಸಿದೆ. ಹೈದರಾಬಾದ್-ವಾರಂಗಲ್ ರಾಷ್ಟ್ರೀಯ ಹೆದ್ದಾರಿಯ ಜನಗಾಮ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ.

BUS RAMMED  TIFFIN CENTER  PEOPLE DIED  SAME FAMILY
ತೆಲಂಗಾಣದಲ್ಲಿ ಭೀಕರ ಬಸ್ ಅಪಘಾತ (ETV Bharat)
author img

By ETV Bharat Karnataka Team

Published : May 14, 2024, 7:34 AM IST

ಜನಗಾಮ(ತೆಲಂಗಾಣ): ಮತ ಚಲಾಯಿಸಲು ಊರಿಗೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್-ವಾರಂಗಲ್ ರಾಷ್ಟ್ರೀಯ ಹೆದ್ದಾರಿಯ ರಘುನಾಥಪಲ್ಲಿ ಗ್ರಾಮದಲ್ಲಿ ಸೋಮವಾರ ನಡೆಯಿತು. ರಸ್ತೆ ಬದಿಯಲ್ಲಿ ಪತಿ-ಪತ್ನಿ ತಮ್ಮ ಮಗನೊಂದಿಗೆ ಟಿಫಿನ್ ಸೇವಿಸುತ್ತಿದ್ದಾಗ ಟಿಫಿನ್ ಗಾಡಿಗೆ ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದೆ.

ಘಟನೆಯ ಸಂಪೂರ್ಣ ವಿವರ: ಸ್ಥಳೀಯ ಪೊಲೀಸರು ನೀಡಿರುವ ವಿವರಗಳಂತೆ, ವಾರಂಗಲ್ ಎಸ್‌ಆರ್‌ಆರ್ ಫಾರ್ಮ್‌ನ ತೆಲುಕಲಪಲ್ಲಿ ರವೀಂದರ್ (38) ಎಂಬವರು ಜೀವನೋಪಾಯಕ್ಕಾಗಿ ಬಿಬಿ ನಗರಕ್ಕೆ ವಲಸೆ ಬಂದು ಅಲ್ಲಿ ಹಳೆಯ ಸಾಮಗ್ರಿ ವ್ಯವಹಾರ ನಡೆಸುತ್ತಿದ್ದರು. ಇವರ ಪೋಷಕರು ಚಿನ್ನ ಸಮ್ಮಯ್ಯ ಮತ್ತು ಭಾಗ್ಯಮ್ಮ ವಾರಂಗಲ್‌ನಲ್ಲಿ ವಾಸಿಸುತ್ತಿದ್ದಾರೆ. ರವೀಂದರ್ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಶಾಲೆಗೆ ರಜೆ ಇದ್ದ ಕಾರಣ ಹಿರಿಯ ಮಗ ಪಾರ್ಥ್ (12)ನನ್ನು ಅವರ ಬಳಿಗೆ ಕಳುಹಿಸಲಾಗಿತ್ತು. ಮತ ಚಲಾಯಿಸಿ ಮಗನನ್ನು ಮನೆಗೆ ಕರೆತರಲು ಪತ್ನಿ ಹಾಗೂ ಪುಟ್ಟ ಮಗನೊಂದಿಗೆ ಸ್ಕೂಟಿಯಲ್ಲಿ ಬಿಬಿ ನಗರದಿಂದ ವಾರಂಗಲ್‌ಗೆ ತೆರಳುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಬಂಕ್ ಪಕ್ಕದ ಟಿಫಿನ್ ಸೆಂಟರ್​ನಲ್ಲಿ ಕುಳಿತು ತಿಂಡಿ ಸೇವಿಸುತ್ತಿದ್ದರು.

ಇದೇ ಸಮಯಕ್ಕೆ ಎದುರುಗಡೆಯಿಂದ ಹೋಗುತ್ತಿದ್ದ ವಾರಂಗಲ್ ಆರ್​ಟಿಸಿ ಡಿಪೋ-1ರ ರಾಜಧಾನಿ ಎಕ್ಸ್‌ಪ್ರೆಸ್ ಬಸ್ ಎದುರಿನ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟಿಫಿನ್ ಸೆಂಟರ್​ಗೆ ಗುದ್ದಿದೆ. ರವೀಂದರ್ ಪತ್ನಿ ಜ್ಯೋತಿ (32) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರವೀಂದರ್ ಮತ್ತು ಅವರ ಕಿರಿ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯಿಂದ ಹಿರಿಯ ಮಗ ಪಾರ್ಥ್​ ಪೋಷಕರಿಲ್ಲದೆ ಅನಾಥನಾಗಿದ್ದಾನೆ. ಈ ಅಪಘಾತದಲ್ಲಿ ಟಿಫಿನ್ ಸೆಂಟರ್ ಮ್ಯಾನೇಜರ್ ಡ್ರಾವತ್ ನವೀನ್, ಶ್ರೀಕಾಂತ್, ರಾಕೇಶ್ ಅವರ ಕುಟುಂಬಸ್ಥರು ಹಾಗೂ ವಾಹನದ ಚಾಲಕ ಕೇತಾವತ್ ಗಣೇಶ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಕಾರಣರಾದ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಐ ನರೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೋರ್ಡಿಂಗ್ ಕುಸಿದು 12 ಮಂದಿ ದಾರುಣ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ: ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ ಘೋಷಣೆ - Hoarding Collapse At Ghatkopar

ETV Bharat Logo

Copyright © 2025 Ushodaya Enterprises Pvt. Ltd., All Rights Reserved.