ರಾಮನಗರ(ಉತ್ತರಾಖಂಡ): ಚಾಲಕನ ನಿಯಂತ್ರಣ ತಪ್ಪಿದ ಬಸ್ ಆಳ ಕಂದಕಕ್ಕೆ ಉರುಳಿಬಿದ್ದು 36 ಪ್ರಯಾಣಿಕರು ಮೃತಪಟ್ಟ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಲ್ಲಿನ ಸುಲ್ಟ್ ತಹಸಿಲ್‌ನ ಮಾರ್ಚುಲಾ ಕುಪಿ ಗ್ರಾಮದ ಬಳಿ ದುರಂತ ಸಂಭವಿಸಿತು. ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೂರ್ಣ ವಿವರ: ಸೋಮವಾರ ಬೆಳಗ್ಗೆ ಬಸ್ ರಾಮನಗರದಿಂದ ರಾಣಿಖೇತ್ ಕಡೆಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಹಠಾತ್ ನಿಯಂತ್ರಣ ಕಳೆದುಕೊಂಡ ಬಸ್, 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಸ್ಥಳಕ್ಕೆ ಧಾವಿಸಿದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆ ನಡೆಸಿತು.
ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ: ಘಟನೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ''ಅಲ್ಮೋರಾ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ ಸುದ್ದಿ ಕೇಳಿ ಬಹಳ ನೋವಾಯಿತು. ಗಾಯಾಗಳು ರಕ್ಷಣೆಗೆ ಕಾರ್ಯಾಚರಣೆ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಸ್‌ಡಿಆರ್‌ಎಫ್ ತಂಡ ಗಾಯಾಳುಗಳ ರಕ್ಷಣೆ ಮಾಡುತ್ತಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಏರ್ ಲಿಫ್ಟ್ ಮಾಡವಂತೆಯೂ ಸೂಚಿಸಲಾಗಿದೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಲಾಗಿದ್ದು, ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
जनपद अल्मोड़ा के मार्चुला में हुई हृदयविदारक बस दुर्घटना में अपनी जान गंवाने वाले यात्रियों के परिजनों के प्रति हमारी गहरी संवेदनाएं हैं, दुख की इस घड़ी में हम उनके साथ खड़े हैं। ईश्वर से घायलों के शीघ्र स्वास्थ्य लाभ और दिवंगतों की आत्मा को श्रीचरणों में स्थान प्रदान करने के लिए… pic.twitter.com/VeFrEmVGxA
— Pushkar Singh Dhami (@pushkardhami) November 4, 2024
"ದೀಪಾವಳಿ ಹಬ್ಬಕ್ಕೆ ತಮ್ಮ ಗ್ರಾಮಕ್ಕೆ ಬಂದವರು ಮರಳಿ ಕೆಲಸಕ್ಕೆ ತೆರಳುತ್ತಿದ್ದರು. ಬಸ್‌ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಆದರೆ, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ" ಎಂದು ಸಾಲ್ಟ್ ಸಂಸ್ಥೆಯ ಮಾಜಿ ಮುಖ್ಯಸ್ಥ ಗೋಪಾಲ್ ಸಿಂಗ್ ರಾವತ್ ಹೇಳಿದರು.
#WATCH | Uttarakhand: A Garwal Motors Users' bus fell into a gorge near Kupi in Ramnagar at Pauri-Almora border. Deaths and injuries feared. Search and rescue operation underway. Details awaited.
— ANI (@ANI) November 4, 2024
(Video: SDRF) pic.twitter.com/dzSgKw6tkF
ಇದನ್ನೂ ಓದಿ: ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಬೆಂಕಿ; ಕಿಟಕಿಯಿಂದ ಹಾರಿ ಪ್ರಯಾಣಿಕರು ಬಚಾವ್