ರೇವಾ (ಮಧ್ಯಪ್ರದೇಶ): ಅಶ್ಲೀಲ ವಿಡಿಯೋ ನೋಡಿ ಉದ್ರೇಕಿತನಾದ ಬಾಲಕ ತನ್ನ ತಂಗಿಯನ್ನೇ ರೇಪ್ ಮಾಡಿದ್ದಾನೆ. ತಂದೆಗೆ ತಿಳಿಸುವುದಾಗಿ ಸಂತ್ರಸ್ತೆ ಹೇಳಿದಾಗ, ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಈ ಬಗ್ಗೆ ಪುತ್ರ ಮಹಾಶಯ ತಾಯಿಗೆ ತಿಳಿಸಿದ್ದು, ಆಕೆ ಹೆತ್ತ ಮಗುವನ್ನು ಮತ್ತೆ ಕತ್ತು ಹಿಸುಕಿ ಪ್ರಾಣ ಹೋಗುವಂತೆ ಮಾಡಿದ್ದಾಳೆ. ಇದನ್ನು ಪಕ್ಕದಲ್ಲೇ ಇದ್ದ ಇಬ್ಬರು ಅಕ್ಕಂದಿರು ಇದನ್ನು ಕಂಡಿದ್ದರೂ ಪ್ರಕರಣ ಬಯಲಾಗದಂತೆ ತಮ್ಮನಿಗೆ ನೆರವು ನೀಡಿದ್ದಾರೆ.
ಮಧ್ಯಪ್ರದೇಶದ ರೇವಾ ನಗರದಲ್ಲಿ ಏಪ್ರಿಲ್ 24 ರಂದು ಈ ಹೇಯ ಕೃತ್ಯ ನಡೆದಿದೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ, ಪೊಲೀಸರು ಇದೀಗ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬಾಲಕಿ ವಿಷಯುಕ್ತ ಪದಾರ್ಥ ತಿಂದು ಸಾವನ್ನಪ್ಪಿದ್ದಾಳೆ ಎಂದು ಬಿಂಬಿತವಾಗಿದ್ದ ಕೇಸ್, ರೇಪ್ ಅಂಡ್ ಮರ್ಡರ್ ಎಂಬುದು ಬಯಲಾಗಿದೆ. ಸಂತ್ರಸ್ತೆಯ 13 ವರ್ಷದ ಸಹೋದರ, ಆತನ ತಾಯಿ, 17 ಮತ್ತು 18 ವರ್ಷದ ಸಹೋದರಿಯರನ್ನು ಬಂಧಿಸಲಾಗಿದೆ.
ಪ್ರಕರಣದ ವಿವರ: ಏಪ್ರಿಲ್ 24 ರಂದು ರಾತ್ರಿ ವೇಳೆ ಮಲಗಿದ್ದಾಗ 13 ವರ್ಷದ ಬಾಲಕ ಮೊಬೈಲ್ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾನೆ. ಬಳಿಕ ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಬಾಲಕಿ ಈ ಬಗ್ಗೆ ತಂದೆಗೆ ತಿಳಿಸುವುದಾಗಿ ಹೇಳಿದಾಗ, ಆರೋಪಿ ಬಾಲಕ ಆಕೆಯ ಕತ್ತು ಹಿಸುಕಿದ್ದಾನೆ. ಆಕೆ ಮೂರ್ಛೆ ಹೋದ ಬಳಿಕ ಅಲ್ಲಿಯೇ ಇದ್ದ ತಾಯಿಗೆ ವಿಷಯ ತಿಳಿಸಿದ್ದಾನೆ. ಮಗುವನ್ನು ಪರಿಶೀಲಿಸಿದಾಗ ಆಕೆ ಇನ್ನೂ ಉಸಿರಾಡುತ್ತಿರುವುದು ಕಂಡು ಬಂದಿದೆ.
ಬಳಿಕ ತಾಯಿಯು ನಡೆದ ವೃತ್ತಾಂತದ ಬಗ್ಗೆ ತಿಳಿದುಕೊಂಡು ಹೆತ್ತ ಕರುಳೂ ಎಂದು ನೋಡದೇ ಆಕೆಯೂ ಬಾಲಕಿಯ ಕತ್ತನ್ನು ಹಿಸುಕಿ ಉಸಿರು ನಿಲ್ಲಿಸಿದ್ದಾಳೆ. ಇದೆಲ್ಲ ನಡೆಯುವಷ್ಟರಲ್ಲಿ ಇಬ್ಬರು ಅಕ್ಕಂದಿರು ಎಚ್ಚರಗೊಂಡಿದ್ದಾರೆ. ವಿಷಯ ತಿಳಿದಾಗ, ಅವರು ತಮ್ಮನ ಕೃತ್ಯದ ಬಗ್ಗೆ ಯಾರಿಗೂ ತಿಳಿಯಬಾರದು ಎಂದು ತಾವು ಮಲಗಿದ್ದ ಸ್ಥಳವನ್ನು ಬದಲಿಸಿದ್ದಾರೆ. ಬಾಲಕಿಯನ್ನು ಮನೆಯಿಂದ ಹೊರಗೆ ತಂದಿದ್ದಾರೆ. ಆಕೆ ವಿಷಪೂರಿತ ವಸ್ತುವನ್ನು ತಿಂದು ಸತ್ತಿದ್ದಾಳೆ ಎಂದು ಬಿಂಬಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರಣೆಯಲ್ಲಿ ಸತ್ಯ ಬಯಲು: ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದ್ದಾರೆ. ಆದರೆ, ಮನೆಗೆ ಹೊಸಬರು ಯಾರೂ ಬಂದಿರಲಿಲ್ಲ. ರಾತ್ರಿ ವೇಳೆ ಈ ಘಟನೆ ನಡೆದಿದ್ದರ ಬಗ್ಗೆ ಅನುಮಾನ ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಸಾಯಿಸಲಾಗಿದೆ ಎಂಬುದು ತಿಳಿದುಬಂದಿದೆ. ಪೊಲೀಸರು ಕುಟುಂಬಸ್ಥರನ್ನೇ ವಿಚಾರಣೆ ನಡೆಸಿದ್ದಾರೆ. ಎಲ್ಲರ ನಡುವಿನ ಉತ್ತರಗಳು ಅನುಮಾನಾಸ್ಪದವಾಗಿ ಕಂಡುಬಂದಿವೆ.
ಬಳಿಕ ಎಲ್ಲರನ್ನೂ ಗಂಭೀರವಾಗಿ ವಿಚಾರಿಸಿದಾಗ ಮಾಡಿದ ಪಾಪವನ್ನು ಬಾಯಿಬಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಪುರಾವೆಗಳೂ ಪೊಲೀಸರ ಕೈವಶವಾಗಿವೆ. ಬಳಿಕ ಆರೋಪಿ ಬಾಲಕ, ತಾಯಿ ಮತ್ತು ಇಬ್ಬರು ಅಕ್ಕಂದಿರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಪಿಜಿ ಯುವತಿ ಕೊಲೆ ಪ್ರಕರಣ: ಆರೋಪಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ - PG Woman Murder Case