ETV Bharat / bharat

ಹೋಟೆಲ್​ ಉದ್ಯಮಿ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್​ಗೆ ಜಾಮೀನು ಮಂಜೂರು - GANGSTER CHHOTA IN RAJAN GETS BAIL

ಹೋಟೆಲ್​ ಉದ್ಯಮಿ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್​ ಜಾಮೀನು ಪಡೆದರೂ, ಇತರ ಕ್ರಿಮಿನಲ್​ ಪ್ರಕರಣದಲ್ಲಿ ಅವರು ಜೈಲಿನಲ್ಲಿಯೇ ಇರಲಿದ್ದಾರೆ.

Bombay High Court suspended the life sentence of gangster Chhota Rajan  in  hotelier Jaya Shetty  case
ಬಾಂಬೆ ಹೈ ಕೋರ್ಟ್​ (ಐಎಎನ್​ಎಸ್​)
author img

By ETV Bharat Karnataka Team

Published : Oct 23, 2024, 12:35 PM IST

ಮುಂಬೈ: 2001ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಛೋಟಾ ರಾಜನ್​ಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್​ ಅಮಾನತು ಮಾಡಿ, ಜಾಮೀನು ನೀಡಿದೆ. 2001 ರಲ್ಲಿ ಹೋಟೆಲ್​ ಉದ್ಯಮಿ ಜಯ ಶೆಟ್ಟಿ ಕೊಲೆ ಪ್ರಕರಣ ವಿಚಾರಣೆ ನಡೆಸಿದ ದ್ವಿ ಸದಸ್ಯ ಪೀಠ ಒಂದು ಲಕ್ಷ ಬಾಂಡ್​ನೊಂದಿಗೆ ಜಾಮೀನು ನೀಡಿದೆ.

ನ್ಯಾ. ರೇವತಿ ಮೊಹಿತೆ ದೆರೆ ಮತ್ತು ನ್ಯಾ ಪೃಥ್ವಿರಾಜ್​ ಚೌಹಣ್ ಅವರ ಪೀಠ ಈ ಆದೇಶ ನೀಡಿದೆ. ಹೋಟೆಲ್​ ಉದ್ಯಮಿ ಕೊಲೆ ಪ್ರಕರಣದಲ್ಲಿ ಛೋಟಾ ರಾಜನ್​ ಜಾಮೀನು ಪಡೆದರೂ, ಇತರ ಕ್ರಿಮಿನಲ್​ ಪ್ರಕರಣದಲ್ಲಿ ಅವರು ಜೈಲಿನಲ್ಲಿಯೇ ಇರಲಿದ್ದಾರೆ. ಜೀವಾವಧಿ ಶಿಕ್ಷೆ ರದ್ದು ಮಾಡಬೇಕು ಮತ್ತು ಮಧ್ಯಂತರ ಜಾಮೀನು ನೀಡುವಂತೆ ಕೋರಿ ರಾಜನ್​ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಸೆಂಟ್ರಲ್​ ಮುಂಬೈನಲ್ಲಿನ ಗಮ್ದೆವಿಯಲ್ಲಿನ ಗೋಲ್ಡನ್​ ಕ್ರೌನ್​ ಹೋಟೆಲ್​ ಮಾಲೀಕ ಜಯ ಶೆಟ್ಟಿಯನ್ನು ರಾಜನ್​ ಗ್ಯಾಂಗ್​ 2001ರ ಮೇ 4ರಂದು ಹೋಟೆಲ್​ನ ಮೊದಲ ಮಹಡಿಯಲ್ಲಿ ಗುಂಡಿಕ್ಕಿ ಕೊಂದಿತ್ತು.

ತನಿಖೆಯ ವೇಳೆ ಛೋಟಾ ರಾಜನ್​ ಗ್ಯಾಂಗ್​ ಸದಸ್ಯ ಹೇಮಂತ್​ ಪೂಜಾರಿಯಿಂದ ಶೆಟ್ಟಿ ಕರೆ ಮಾಡಿ, ಹಣ ನೀಡಲು ವಿಫಲವಾದ ಹಿನ್ನೆಲೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು.

ಹಿರಿಯ ಅಪರಾಧ ವರದಿಗಾರ ಜೆ ಡೇ ಹತ್ಯೆ ಪ್ರಕರಣದಲ್ಲಿ ಈಗಾಗಲೇ ರಾಜನ್​ ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ: ಭಾರತೀಯ ಸಂಖ್ಯೆಗಳಂತೆ ಕಾಣುವ ಅಂತಾರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಲು ಬಂದಿದೆ ಸ್ಪ್ಯಾಮ್ ಟ್ರ್ಯಾಕಿಂಗ್ ವ್ಯವಸ್ಥೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.