ETV Bharat / bharat

ಮಹಾ ಎಲೆಕ್ಷನ್​: ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್​​ಗೆ ಸೋಲುಣಿಸಿದ ಅತುಲ್ ಬಾಬಾ ಸುರೇಶ್ ಭೋಸ್ಲೆ - ATULBABA SURESH BHOSALE

ಬಿಜೆಪಿಯ ಅತುಲ್ ಬಾಬಾ ಸುರೇಶ್ ಭೋಸ್ಲೆ ಅವರು ಕರಾಡ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಪೃಥ್ವಿರಾಜ್ ಚೌಹಾಣ್ ಅವರನ್ನು ಸೋಲಿಸಿದ್ದಾರೆ.

Prithviraj Chavan and Atulbaba Suresh Bhosale
ಪೃಥ್ವಿರಾಜ್ ಚೌಹಾಣ್ ಹಾಗೂ ಅತುಲ್ ಬಾಬಾ ಸುರೇಶ್ ಭೋಸಲೆ (ETV Bharat)
author img

By ETV Bharat Karnataka Team

Published : Nov 23, 2024, 8:11 PM IST

ಸತಾರಾ (ಮಹಾರಾಷ್ಟ್ರ) : 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಪ್ರತಿಷ್ಠಿತ ಕರಾದ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅತುಲ್ ಬಾಬಾ ಸುರೇಶ್ ಭೋಸ್ಲೆ ವಿರುದ್ಧ 39,355 ಮತಗಳಿಂದ ಸೋತಿದ್ದಾರೆ.

ಚುನಾವಣಾ ಆಯೋಗದ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, 18 ಸುತ್ತಿನ ಮತ ಎಣಿಕೆಯ ನಂತರ ಭೋಸಲೆ 139505 ಮತಗಳನ್ನ ಪಡೆದಿದ್ದರೆ, ಚೌಹಾಣ್ 100150 ಮತಗಳನ್ನು ಗಳಿಸಿದ್ದಾರೆ. ಆ ಮೂಲಕ ಬಿಜೆಪಿ ಅಭ್ಯರ್ಥಿ 39,355 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ

ಮಹಾರಾಷ್ಟ್ರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಕರಡ್ ದಕ್ಷಿಣ ಕ್ಷೇತ್ರದಿಂದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಪೃಥ್ವಿರಾಜ್ ಚೌಹಾಣ್ ಮರು ಆಯ್ಕೆ ಬಯಸಿದ್ದರು. ಪೃಥ್ವಿರಾಜ್, ಯುನೈಟೆಡ್ ಪ್ರಗತಿಪರ ಒಕ್ಕೂಟದ (ಯುಪಿಎ) ಆಡಳಿತದಲ್ಲಿ ಮಾಜಿ ಕೇಂದ್ರ ಸಚಿವರೂ ಆಗಿದ್ದು, ಬಿಜೆಪಿಯಿಂದ ಕಣಕ್ಕಿಳಿದ ಡಾ ಅತುಲ್​ ಬಾಬಾ ಸುರೇಶ್ ಭೋಸ್ಲೆ ಅವರ ಸವಾಲು ಹಾಕಿ ಗೆಲುವು ಸಾಧಿಸಿದ್ದಾರೆ.

ಪೃಥ್ವಿರಾಜ್ ಅವರು ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದರು. ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರಕ್ಕೆ ಬಂದರೆ, ಅವರ ಕ್ಯಾಬಿನೆಟ್​ನಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು. ಅವರು ಕಾಂಗ್ರೆಸ್ ಹೈಕಮಾಂಡ್, ವಿಶೇಷವಾಗಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿಕಟವರ್ತಿಯಾಗಿದ್ದಾರೆ.

ಪೃಥ್ವಿರಾಜ್ ಅವರು ತಮ್ಮ ಪರಿಣಾಮಕಾರಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ ಮತ್ತು ಪ್ರತಿಸ್ಪರ್ಧಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಹೊಗಳಿದ್ದರು. ಪೃಥ್ವಿರಾಜ್ ಅವರು ಕೆಲಸ ಮಾಡಿದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಅಜಿತ್ ಪವಾರ್ ಸಹ ಗುಣಗಾನ ಮಾಡಿದ್ದರು.

ಇದನ್ನೂ ಓದಿ : ಯುಪಿ, ರಾಜಸ್ಥಾನದಲ್ಲಿ ಬಿಜೆಪಿ, ಬಂಗಾಳದಲ್ಲಿ ಟಿಎಂಸಿಗೆ ಭರ್ಜರಿ ಗೆಲುವು: ಉಪ ಚುನಾವಣೆ ಫಲಿತಾಂಶ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.