ಇಂದೋರ್, ಮಧ್ಯಪ್ರದೇಶ: ಅನೇಕ ಮನೆಗಳಲ್ಲಿ ಅವರ ಸಾಕು ಪ್ರಾಣಿಗಳನ್ನು ಕುಟುಂಬದ ಸದಸ್ಯರು ಮಾತ್ರವಲ್ಲದೇ ಮಕ್ಕಳಂತೆ ಕಾಣುತ್ತಾರೆ. ಈ ಕಾರಣದಿಂದಲೇ ಪ್ರಾಣಿಗಳ ಪಾಲನೆಯ ಹೊರತಾಗಿ, ಅವರ ಎಲ್ಲ ಆಸೆಗಳು ಸಹ ಮಕ್ಕಳಂತೆ ಈಡೇರುತ್ತವೆ. ಇಂದೋರ್‌ನಲ್ಲೂ ಇದೇ ರೀತಿಯ ದೃಶ್ಯ ಕಂಡು ಬಂದಿದ್ದು, ಹೊಟೇಲ್‌ನಲ್ಲಿ ಹ್ಯಾಂಡ್ಸಮ್ ಎಂಬ ನಾಯಿಯ ಮೂರನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಐಷಾರಾಮಿ ಪಾರ್ಟಿಯಲ್ಲಿ 30 ಕ್ಕೂ ಹೆಚ್ಚು ನಾಯಿಗಳು ಮತ್ತು ಅವುಗಳ ಮಾಲೀಕರು ಭಾಗಿಯಾಗಿದ್ದರು.
ಉಡುಗೊರೆ ಪಡೆದ ಶ್ವಾನ: ನಗರದಲ್ಲಿ (ಡಾಗ್ ಪಾರ್ಟಿ ಇಂದೋರ್) ಈ ರೀತಿಯ ವಿಶಿಷ್ಟ ಶ್ವಾನ ಪಾರ್ಟಿಯಲ್ಲಿ, ನಾಯಿಗೆ ಕೇಕ್ ಕತ್ತರಿಸಿದ ನಂತರ ಉಡುಗೊರೆಗಳನ್ನು ನೀಡಲಾಯಿತು. ಬರ್ತ್‌ಡೇ ಡಾಗ್ ಪಾರ್ಟಿಗೆ ಬಂದ ಎಲ್ಲ ನಾಯಿಗಳಿಗೆ ರಿಟರ್ನ್ ಗಿಫ್ಟ್ ಪ್ಯಾಕ್‌ಗಳು ಮತ್ತು ರುಚಿಕರವಾದ ನಾಯಿ ಆಹಾರವನ್ನು ಸಹ ವಿತರಿಸಲಾಯಿತು. ಈ ವೇಳೆ, ಪಾರ್ಟಿಯಲ್ಲಿ ಎಲ್ಲಾ ಮುದ್ದಿನ ಪ್ರೇಮಿಗಳ ಜೊತೆಗೆ ಎಲ್ಲಾ ಶ್ವಾನಗಳು ಕೂಡ ಬರ್ತ್ ಡೇ ಪಾರ್ಟಿಯಲ್ಲಿ ಮೋಜು ಮಸ್ತಿ ಮಾಡಿದ್ದವು.
ಶ್ವಾನದ ಜನ್ಮದಿನ ಆಯೋಜನೆ: ಈ ಪಾರ್ಟಿಯನ್ನು ಆಕಾಂಕ್ಷಾ ರೈ ಎಂಬುವರು ತನ್ನ ಹ್ಯಾಂಡ್ಸಮ್ ಎಂಬ ನಾಯಿಯ ಮೂರನೇ ಹುಟ್ಟುಹಬ್ಬವನ್ನು ಆಯೋಜಿಸಿದ್ದರು. ಗೋಲ್ಡನ್ ರಿಟ್ರೈವರ್ ತಳಿಯ ಈ ಶ್ವಾನ ತಮ್ಮ ಮಗುವಿನಂತಿದ್ದು, ಅದರ ಸುರಕ್ಷತೆಗಾಗಿ ಬೆಳಗ್ಗೆಯಿಂದಲೇ ಮನೆಯಲ್ಲಿ ಪೂಜೆ ನಡೆಸಲಾಯಿತು. ಇದಾದ ನಂತರ ಶ್ವಾನವನ್ನು ಖಜ್ರಾನಾ ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ಮಾಡಿಸಲಾಯಿತು. ಕೆಲ ಗಂಟೆಗಳ ಬಳಿಕ ಶ್ವಾನ ಹ್ಯಾಂಡ್ಸಮ್ ಅನ್ನು ಶ್ವಾನಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವನಿಗೆ ಶೃಂಗಾರಗೊಳಿಸಲಾಯಿತು. ನಂತರ ನಗರದ ಡೈನರ್ಸ್ ಪಾರ್ಕ್ ಹೋಟೆಲ್‌ಗೆ ಕರೆತರಲಾಯಿತು ಎಂದು ಆಕಾಂಕ್ಷಾ ರೈ ಹೇಳಿದರು.
ಹಾಡಿಗೆ ಎಂಜಾಯ್ ಮಾಡಿದ ಶ್ವಾನಗಳು: ಹ್ಯಾಂಡ್ಸಮ್ ಹೆಸರಿನ ಈ ಶ್ವಾನ 30 ಶ್ವಾನ ಸ್ನೇಹಿತರನ್ನು ಹೊಂದಿದೆ. ಅವುಗಳೆಲ್ಲವೂ ಸಹ ಡೈನರ್ಸ್ ಪಾರ್ಕ್ ಹೋಟೆಲ್‌ಗೆ ಆಹ್ವಾನಿಸಲಾಗಿತ್ತು. ಕೇಕ್ ಕತ್ತರಿಸಿದ ನಂತರ, ಎಲ್ಲ ಶ್ವಾನಗಳು ಹುಟ್ಟುಹಬ್ಬದ ಹಾಡು ಆನಂದಿಸಿದವು. ಈ ಅವಧಿಯಲ್ಲಿ, ಅನೇಕ ಶ್ವಾನಗಳಿಗೆ ಆಟಗಳನ್ನು ಸಹ ಆಯೋಜಿಸಲಾಗಿತ್ತು.
ಇತ್ತೀಚೆಗೆ ತನ್ನ ಶ್ವಾನದೊಂದಿಗೆ ಅದರ ಮಾಲೀಕರು ಮನಾಲಿ ಪ್ರವಾಸಕ್ಕೆ ಹೋಗಿದ್ದರು, 14 ಗಂಟೆಗಳ ಕಾಲ ಡ್ರೈವಿಂಗ್ ಮಾಡಿದ್ದರು. ಇದಲ್ಲದೆ, ಅವರ ಕುಟುಂಬದ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಶ್ವಾನವೂ ಭಾಗವಹಿಸುತ್ತದೆ ಎಂದು ಆಕಾಂಕ್ಷಾ ಹೇಳಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮ ಖಾತೆ ಹೊಂದಿದೆ ಹ್ಯಾಂಡ್ಸಮ್: ಹ್ಯಾಂಡ್ಸಮ್ ಎಂಬ ಹೆಸರಿನ ಈ ಶ್ವಾನ ಸಾಮಾಜಿಕ ಮಾಧ್ಯಮ ಖಾತೆಯನ್ನು ಸಹ ಹೊಂದಿದೆ. ಅದರಲ್ಲಿ ನಾಯಿಗೆ ಹಲವಾರು ಅನುಯಾಯಿಗಳು ಸಹ ಇದ್ದಾರೆ. ಹಾಗಾಗಿ ಹ್ಯಾಂಡ್ಸಮ್ ಎಂಬ ಹೆಸರಿನ ಈ ಶ್ವಾನ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆಯಲ್ಲಿದೆ. ಏಕೆಂದರೆ ಮೊದಲ ಬಾರಿಗೆ ದುಬಾರಿ ಹೋಟೆಲ್‌ನಲ್ಲಿ ಶ್ವಾನದ ಬರ್ತ್‌ಡೇ ಪಾರ್ಟಿ ಅದ್ಧೂರಿಯಾಗಿ ನಡೆದಿದೆ. ಈ ಪಾರ್ಟ್ಯಲ್ಲಿ ವಿವಿಧ ತಳಿಗಳ ಅಮೂಲ್ಯ ನಾಯಿಗಳು ಮತ್ತು ಅನೇಕ ಮನೆಗಳ ನೆಚ್ಚಿನ ನಾಯಿಗಳು ಭಾಗವಹಿಸಿದ್ದವು ಸಂತಸ ತಂದಿದೆ. ಈ ಸಂದರ್ಭದಲ್ಲಿ ಶ್ವಾನ ಪ್ರೇಮಿಗಳು ಮಾತನಾಡಿ, ಇಂದಿನ ಯುಗದಲ್ಲಿ ಶ್ವಾನಗಳು ಮನೆಯ ಅತ್ಯಂತ ನಿಷ್ಠಾವಂತ ಪ್ರಾಣಿಗಳಾಗಿವೆ ಎಂದಿದ್ದಾರೆ.
ಓದಿ: ಹುಲಿ ಉಗುರಿನ ವಿವಾದದ ಕುರಿತು ಮಾತನಾಡಿದ್ದ ಜಗ್ಗೇಶ್ಗೆ ಬೆದರಿಕೆ ಆರೋಪ: ಎಫ್ಐಆರ್ ದಾಖಲು