ಪಾಟ್ನಾ, ಬಿಹಾರ: ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಬಿಹಾರ ರಾಜಕೀಯದಲ್ಲಿ ಸದಾ ಸುದ್ದಿಯಲ್ಲಿರುವ ರಾಜಕೀಯ ನೇತಾರ. 2024ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣಿಯಾದಿಂದ ಸ್ಪರ್ಧಿಸುವುದಕ್ಕಾಗಿ ಅವರು ತಮ್ಮ ಪಕ್ಷ ಜನ್ ಅಧಿಕಾರ್ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದ್ದರು. ಆದರೆ, ಆರ್‌ಜೆಡಿ ಬಿಮಾ ಭಾರತಿ ಅವರನ್ನು ಪೂರ್ಣಿಯಾದಿಂದ ಕಣಕ್ಕಿಳಿಸಿದ್ದರಿಂದ ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅವರ ಪತ್ನಿ ರಂಜಿತಾ ರಂಜನ್ ಅವರು, ಪಪ್ಪು ಯಾದವ್ ಅವರು ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರದ ಹಿಂದಿನ ಶಕ್ತಿ ಎಂದು ಹೇಳಲಾಗಿದೆ. ಇನ್ನು ವಿಶೇಷ ಎಂದರೆ ರಂಜಿತ್ ರಂಜನ್ ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯರಾಗಿದ್ದಾರೆ. ಈಗ ಈ ಇಬ್ಬರೂ ಒಟ್ಟಾಗಿ ಎರಡೂ ಸದನಗಳನ್ನು ಪ್ರತಿನಿಧಿಸಲಿದ್ದಾರೆ.
![Pappu Yadav](https://etvbharatimages.akamaized.net/etvbharat/prod-images/26-06-2024/21797394_tpp.jpg)
ಪುರ್ಣಿಯಾದಿಂದ ಗೆದ್ದ ಪಪ್ಪು ಯಾದವ್ : 2024 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಅತ್ಯಂತ ಆಸಕ್ತಿದಾಯಕ ಪೈಪೋಟಿ ಕಂಡು ಬಂದಿದ್ದು, ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ. ಪೂರ್ಣಿಯಾ ಲೋಕಸಭಾ ಸ್ಥಾನಕ್ಕೆ ಬಿಮಾ ಭಾರತಿ ಆರ್‌ಜೆಡಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಕಾಂಗ್ರೆಸ್ ಸೇರಿದ್ದ ಪಪ್ಪು ಯಾದವ್, ಕೊನೆ ಕ್ಷಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದರೂ ಗಾಂಧಿ ಕುಟುಂಬಕ್ಕೆ ಅವರ ನಿಕಟತೆಯನ್ನು ಉಲ್ಲೇಖಿಸಿದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ಆರಂಭದಲ್ಲಿ ಪೂರ್ಣಿಯಾ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿ ಏರ್ಪಟ್ಟಿತ್ತು, ಆದರೆ ಅಂತಿಮವಾಗಿ ಜೆಡಿಯು ಸಂಸದ ಸಂತೋಷ್ ಕುಶ್ವಾಹ ನಡುವೆ ನೇರ ಸ್ಪರ್ಧೆ ನಡೆದು ಪೂರ್ಣಿಯಾದಲ್ಲಿ ಪಪ್ಪು ಗೆಲುವಿನ ನಗೆ ಬೀರಿದರು.
![Pappu Yadav](https://etvbharatimages.akamaized.net/etvbharat/prod-images/26-06-2024/21797394_apapa.jpg)
ಸಂಸತ್ನಲ್ಲಿ ಪತಿ ಮತ್ತು ಪತ್ನಿ: ಪಪ್ಪು ಯಾದವ್ ಪೂರ್ಣಿಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆ ಪ್ರವೇಶಿಸಿದ್ದಾರೆ. ಅವರು ನಾಲ್ಕನೇ ಬಾರಿಗೆ ಪೂರ್ಣಿಯಾದಿಂದ ಸಂಸದರಾಗಿದ್ದಾರೆ. ಅವರ ಪತ್ನಿ ರಂಜಿತ್ ರಂಜನ್ ಅವರು ಕಾಂಗ್ರೆಸ್‌ನ ರಾಜ್ಯಸಭಾ ಸಂಸದರಾಗಿದ್ದಾರೆ. ಹೀಗಾಗಿ ಪತಿ - ಪತ್ನಿ ಇಬ್ಬರೂ 18ನೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಪಪ್ಪು ಯಾದವ್ ಲೋಕಸಭೆಯಲ್ಲಿ ಕಾಣಿಸಿಕೊಂಡರೆ, ಅವರ ಪತ್ನಿ ರಂಜಿತ್ ರಂಜನ್ ರಾಜ್ಯಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಹಾರ ರಾಜಕೀಯದಲ್ಲಿ ಒಂದೇ ಅವಧಿಯಲ್ಲಿ ಎರಡನೇ ಬಾರಿಗೆ ಸದನದಲ್ಲಿ ಕಾಣಿಸಿಕೊಳ್ಳುವ ಏಕೈಕ ರಾಜಕೀಯ ದಂಪತಿಗಳಿವರಾಗಿದ್ದಾರೆ.
![Ranjeet Ranjan](https://etvbharatimages.akamaized.net/etvbharat/prod-images/26-06-2024/21797394_papa.jpg)
10 ವರ್ಷಗಳ ನಂತರ ಸಂಸತ್ನಲ್ಲಿ ಪತಿ-ಪತ್ನಿ ಒಟ್ಟಿಗೆ: ಪಪ್ಪು ಯಾದವ್ ಮತ್ತು ಅವರ ಪತ್ನಿ ರಂಜಿತ್ ರಂಜನ್ 10 ವರ್ಷಗಳ ನಂತರ ಸಂಸತ್ತಿನ ಉಭಯ ಸದನಗಳಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 10 ವರ್ಷಗಳ ನಂತರ ಪಪ್ಪು ಯಾದವ್ ಮತ್ತು ಅವರ ಪತ್ನಿ ರಂಜಿತ್ ರಂಜನ್ ಸಂಸತ್ತಿನ ಉಭಯ ಸದನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ವ್ಯತ್ಯಾಸವೆಂದರೆ ಪಪ್ಪು ಯಾದವ್ ಲೋಕಸಭೆಯಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಅವರ ಪತ್ನಿ ರಂಜಿತ್ ರಂಜನ್ ರಾಜ್ಯಸಭೆಯಲ್ಲಿ ಕುಳಿತುಕೊಳ್ಳುತ್ತಾರೆ.
ಪಪ್ಪು ಮತ್ತು ರಂಜಿತಾ ಅವರ ಪ್ರೇಮಕಥೆ: ಪಪ್ಪು ಯಾದವ್ ಮತ್ತು ರಂಜಿತ್ ರಂಜನ್ 1991ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಕೆಲವು ಕ್ರಿಮಿನಲ್ ಪ್ರಕರಣದಲ್ಲಿ ಪಪ್ಪು ಯಾದವ್ ಪಾಟ್ನಾ ಜೈಲಿನಲ್ಲಿದ್ದರು. ಅಲ್ಲಿ ವಿಕ್ಕಿ ಎಂಬ ಹುಡುಗನೊಂದಿಗೆ ಸ್ನೇಹ ಬೆಳೆಸಿದ. ವಿಕ್ಕಿಯ ಸಹೋದರಿಯೇ ಈ ರಂಜಿತ್ ರಂಜನ್. ರಂಜಿತ್ ಉತ್ತಮ ಟೆನಿಸ್ ಆಟಗಾರರಾಗಿದ್ದರು. ಜೈಲಿನಿಂದ ಹೊರಬಂದ ನಂತರ, ಪಪ್ಪು ಯಾದವ್ ಆಗಾಗ್ಗೆ ಪಾಟ್ನಾ ಕ್ಲಬ್‌ಗೆ ಹೋಗಲು ಪ್ರಾರಂಭಿಸಿದರು, ಅಲ್ಲಿ ರಂಜಿತ್ ರಂಜನ್ ಟೆನಿಸ್ ಅಭ್ಯಾಸ ಮಾಡುತ್ತಿದ್ದರು. ರಂಜಿತ್ ರಂಜನ್ ಪಪ್ಪು ಯಾದವ್ ಬಗ್ಗೆ ಮಾಹಿತಿ ಪಡೆದಾಗ, ಅವರು ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಆದರೆ, ಅಂತಿಮವಾಗಿ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಎಸ್.ಎಸ್.ಅಹ್ಲುವಾಲಿಯಾ ಅವರ ಮಧ್ಯಸ್ಥಿಕೆಯಲ್ಲಿ ಎರಡೂ ಮನೆಯವರು ಮದುವೆಗೆ ಒಪ್ಪಿಗೆ ಸೂಚಿಸಿದ್ದರಿಂದ ಇಬ್ಬರೂ 1994ರಲ್ಲಿ ಸಪ್ತಪದಿ ತುಳಿದಿದ್ದರು.