ETV Bharat / bharat

'ಎಷ್ಟು ಜನ ಜೈಲು ಪಾಲಾಗುತ್ತಾರೆ ಎಂದು ಊಹಿಸಿಕೊಳ್ಳಿ': ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ತರಾಟೆ - Supreme Court - SUPREME COURT

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಯುಟ್ಯೂಬರ್ ದುರೈಮುರುಗನ್ ಸತ್ತೈಗೆ ಅವರಿಗೆ ಸುಪ್ರೀಂ ಕೋರ್ಟ್​ ಜಾಮೀನು ಕಾಯಂಗೊಳಿಸಿದೆ.

Tamil Nadu Chief Minister MK Stalin  YouTuber Duraimurugan Sattai  Madras High Court Supreme Court
ಸ್ಟಾಲಿನ್ ಬಗ್ಗೆ ಕಾಮೆಂಟ್ ಮಾಡಿದ ಯೂಟ್ಯೂಬರ್‌ಗೆ ರಿಲೀಫ್: 'ಚುನಾವಣೆಗೆ ಮೊದಲು ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಿ..'; ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
author img

By ETV Bharat Karnataka Team

Published : Apr 9, 2024, 12:02 PM IST

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೂಟ್ಯೂಬರ್ ದುರೈಮುರುಗನ್ ಸತ್ತೈ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಸೋಮವಾರ ಮರುಸ್ಥಾಪಿಸಿದೆ. ಈ ವೇಳೆ, ಚುನಾವಣೆಗೆ ಮುನ್ನ ಯೂಟ್ಯೂಬ್‌ನಲ್ಲಿ ಆರೋಪ ಮಾಡುವ ಪ್ರತಿಯೊಬ್ಬರನ್ನು ಜೈಲಿಗೆ ಹಾಕಲು ಪ್ರಾರಂಭಿಸಿದರೆ, ಎಷ್ಟು ಮಂದಿ ಜೈಲು ಪಾಲಾಗುತ್ತಾರೆ ಎಂಬುವುದನ್ನು ಊಹಿಸಿಕೊಳ್ಳಿ ಎಂದು ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಯೂಟ್ಯೂಬರ್ ಜಾಮೀನು ರದ್ದುಗೊಳಿಸಲು ಯಾವುದೇ ಆಧಾರಗಳಿಲ್ಲ ಎಂದು ಗಮನಿಸಿದೆ. ಸತ್ತೈ ಜಾಮೀನು ರದ್ದು ಮಾಡುವ ಆದೇಶವನ್ನು ರದ್ದುಗೊಳಿಸಿದೆ. ಯಾವುದು ಹಗರಣ ಎಂಬುದನ್ನು ಯಾರು ನಿರ್ಧರಿಸುತ್ತಾರೆ ಎಂದು ನ್ಯಾಯ ಪೀಠವು ತಮಿಳುನಾಡು ವಕೀಲರನ್ನು ಪ್ರಶ್ನಿಸಿದೆ.

"ಚುನಾವಣೆಯ ಮೊದಲು, ನಾವು ಯೂಟ್ಯೂಬ್‌ನಲ್ಲಿ ಆರೋಪಗಳನ್ನು ಮಾಡುವ ಪ್ರತಿಯೊಬ್ಬರನ್ನು ಕಂಬಿ ಹಿಂದೆ ಹಾಕಲು ಪ್ರಾರಂಭಿಸಿದರೆ, ಎಷ್ಟು ಮಂದಿಯನ್ನು ಜೈಲಿಗೆ ಹಾಕಲಾಗುತ್ತದೆ ಎಂದು ಕಲ್ಪಿಸಿಕೊಳ್ಳಿ?" ನ್ಯಾಯಮೂರ್ತಿ ಓಕಾ ಅವರು ರಾಜ್ಯದ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹಟಗಿ ಅವರನ್ನು ಪ್ರಶ್ನಿಸಿದರು.

ಮೇಲ್ಮನವಿದಾರರು ಮಧ್ಯಂತರ ಆದೇಶದ ಮೂಲಕ ಎರಡು ವರ್ಷಗಳಿಂದ ಜಾಮೀನಿನ ಮೇಲೆ ಮುಂದುವರಿದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರತಿಭಟಿಸುವ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮೂಲಕ ಮೇಲ್ಮನವಿದಾರರು ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾನೆಂದು ಹೇಳಲಾಗುವುದಿಲ್ಲ ಎಂದು ಪೀಠವು ಹೇಳಿ, ಜಾಮೀನು ರದ್ದುಗೊಳಿಸಲು ನಮಗೆ ಯಾವುದೇ ಆಧಾರವಿಲ್ಲ ಎಂದು ತಿಳಿಸಿತು. ಅಡ್ವೊಕೇಟ್ ಎಂ.ಯೋಗೀಶ್ ಖನ್ನಾ ಅವರು ಯೂಟ್ಯೂಬರ್ ಸತ್ತೈ ಪರವಾಗಿ ವಾದ ಮಂಡಿಸಿದರು.

2021ರ ನವೆಂಬರ್​ನಲ್ಲಿ ಮದ್ರಾಸ್ ಹೈಕೋರ್ಟ್, ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಪ್ರಕರಣದಲ್ಲಿ ಸತ್ತೈ ಅವರಿಗೆ ಜಾಮೀನು ನೀಡಿತ್ತು. ಆದರೆ, 2022ರ ಜೂನ್​ನಲ್ಲಿ ಹೈಕೋರ್ಟ್‌ನ ಮಧುರೈ ಪೀಠವು, ಯೂಟ್ಯೂಬರ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿತ್ತು. ಈ ವೇಳೆ, ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನು ಉಲ್ಲಂಘಿಸಿ, ತಮಿಳುನಾಡು ಸಿಎಂ ವಿರುದ್ಧ ಸತ್ತೈ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೈಕೋರ್ಟ್​ ತಿಳಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸತ್ತೈ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: ದೇಶದ ಎಲ್ಲ ಸಮಸ್ಯೆಗಳಿಗೆ ಮೂಲವೇ ಕಾಂಗ್ರೆಸ್‌; ಈ ಚುನಾವಣೆ ಸ್ಥಿರತೆ, ಅಸ್ಥಿರತೆಯ ನಡುವಿನ ಹೋರಾಟ: ಪ್ರಧಾನಿ ಮೋದಿ - PM Modi

ETV Bharat Logo

Copyright © 2025 Ushodaya Enterprises Pvt. Ltd., All Rights Reserved.