ETV Bharat / bharat

ಎಚ್ಚರ ನಿಮಗೂ ಹೀಗಾಗಬಹುದು: ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಸೈಬರ್ ಖದೀಮರು! - Cyber Crime - CYBER CRIME

ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ಮಹಿಳಾ ಬ್ಯಾಂಕ್​ ಅಧಿಕಾರಿಗೇ ಸೈಬರ್ ಕ್ರಿಮಿನಲ್ ವಂಚಿಸಿರುವುದು ವರದಿಯಾಗಿದೆ.

Bank officer duped by Cyber criminals in Mumbai
ಮಹಿಳಾ ಬ್ಯಾಂಕ್ ಅಧಿಕಾರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಸೈಬರ್ ಖದೀಮರು
author img

By ETV Bharat Karnataka Team

Published : Mar 27, 2024, 6:47 PM IST

ಮುಂಬೈ (ಮಹಾರಾಷ್ಟ್ರ): ಮಹಿಳಾ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್​ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಪಾರಿಜಾದ್ ಮಚ್ಲಿವಾಲಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ. ಇಲ್ಲಿನ ಗೋರೆಗಾಂವ್‌ನಲ್ಲಿರುವ ಬ್ಯಾಂಕ್​ವೊಂದರ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 22 ರಂದು ಪಾರಿಜಾದ್ ಕಚೇರಿಯ ಸಭೆಯು ಆನ್‌ಲೈನ್‌ನಲ್ಲಿ ಕರೆಯಲಾಗಿತ್ತು. ಇದರಿಂದ ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಿದ್ದರು. ಬೆಳಗ್ಗೆ ಬ್ಯಾಂಕ್​​ ಸಭೆ ಪಾಲ್ಗೊಂಡ ನಂತರ ಸುಮಾರು 9 ಗಂಟೆಗೆ ಕೊರಿಯರ್ ಕಂಪನಿ ಹೆಸರಲ್ಲಿ ಅಪರಿಚಿತ ಮೊಬೈಲ್ ಫೋನ್‌ನಿಂದ ಕರೆ ಬಂದಿದೆ. ನಿಮ್ಮ ಹೆಸರಿನಲ್ಲಿ ಕೊರಿಯರ್ ಬಂದಿದ್ದು, ಅದರಲ್ಲಿ ಕೆಲವು ದೋಷಗಳಿವೆ. ಇದರ ಬಗ್ಗೆ ವಿಚಾರಿಸಲು ಸಂಖ್ಯೆ ಒಂದನ್ನು ಒತ್ತಿರಿ ಎಂದು ಕರೆ ಮಾಡಿದವರು ಹೇಳಿದ್ದಾರೆ. ಅಂತೆಯೇ, ಪಾರಿಜಾದ್ ಸಂಖ್ಯೆ ಒಂದನ್ನು ಒತ್ತಿದಾಗ, ಆ ಕಡೆಯಿಂದ ಮಹಿ ಶರ್ಮಾ ಎಂಬ ಮಹಿಳೆ ಸಂಪರ್ಕಕ್ಕೆ ಬಂದಿದ್ದಾರೆ.

ಆಗ ಪಾರಿಜಾದ್ ಅವರಿಗೆ ಮಹಿ ಶರ್ಮಾ ನಿಮ್ಮ ಹೆಸರಲ್ಲಿ ಪಾರ್ಸೆಲ್ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಪಾರಿಜಾದ್, ಯಾವ ಪಾರ್ಸೆಲ್?. ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ, ಮಹಿ ಶರ್ಮಾ ನೀವು ತೈವಾನ್‌ಗೆ ಕಳುಹಿಸಲು ಹೊರಟಿದ್ದ ಪಾರ್ಸೆಲ್ ನಮಗೆ ಬಂದಿದೆ. ಅದರಲ್ಲಿ ಅಕ್ರಮ ವಸ್ತುಗಳು ಕಂಡುಬಂದಿವೆ. ಈ ಪಾರ್ಸೆಲ್‌ನಲ್ಲಿ ಐದು ಪಾಸ್‌ಪೋರ್ಟ್‌ಗಳು, ಮೂರು ಕ್ರೆಡಿಟ್ ಕಾರ್ಡ್‌ಗಳು, 140 ಗ್ರಾಂ ಡ್ರಗ್ಸ್​, ಬಟ್ಟೆ ಮತ್ತು ಲ್ಯಾಪ್‌ಟಾಪ್ ಇದೆ ಎಂದು ಮಹಿ ಶರ್ಮಾ ತಿಳಿಸಿದ್ದಾರೆ.

ಇದರಿಂದ ಗಾಬರಿಯಾದ ಪಾರಿಜಾದ್ ಪಾರ್ಸೆಲ್ ಮತ್ತು ಈ ಎಲ್ಲ ವಸ್ತುಗಳು ನನ್ನದಲ್ಲ ಎಂದು ವಾದಿಸಿದ್ದಾರೆ. ಆದರೆ, ನಿಮ್ಮದೇ ಆಧಾರ್ ಕಾರ್ಡ್​ಅನ್ನು ಪಾರ್ಸೆಲ್‌ಗೆ ಬಳಸಲಾಗಿದೆ ಎಂದು ಮಹಿ ಶರ್ಮಾ ಹೇಳಿದ್ದಾರೆ. ಈ ವೇಳೆ, ಮತ್ತೊಮ್ಮೆ ಆಧಾರ್ ಕಾರ್ಡ್​ ಕೇಳಲಾಗಿದೆ. ಆದರೆ, ಪಾರಿಜಾದ್ ಭದ್ರತೆಯ ಕಾರಣದಿಂದ ಆಧಾರ್ ಸಂಖ್ಯೆ ನೀಡಿಲ್ಲ. ಈ ಸಂದರ್ಭದಲ್ಲಿ ಹಾಗಾದರೆ, ನಿಮ್ಮ ಆಧಾರ್ ಕಾರ್ಡ್ಅನ್ನು ಅಕ್ರಮವಾಗಿ ಬಳಸಲಾಗಿದೆ ಎಂದು ಮಹಿ ಶರ್ಮಾ ಹೇಳಿ, ಮುಂಬೈ ಕ್ರೈಂ ಬ್ರಾಂಚ್‌ಗೆ ಈ ಕರೆಯನ್ನು ವರ್ಗಾಯಿಸಬಹುದೇ ಎಂದು ತಾನೇ ಕೇಳಿದ್ದಾರೆ.

ಅಂತೆಯೇ, ಪಾರಿಜಾದ್ ಒಪ್ಪಿಕೊಂಡ ನಂತರ, ಮಹಿ ಶರ್ಮಾ ಕರೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸುವಂತೆ ನಾಟಕ ಮಾಡಿದ್ದಾರೆ. ಮತ್ತೊಂದೆಡೆ, ವ್ಯಕ್ತಿಯೊಬ್ಬ ಸಬ್ ಇನ್ಸ್‌ಪೆಕ್ಟರ್ ವಿಕ್ರಮ್ ಸಿಂಗ್ ಎಂಬ ಹೆಸರಲ್ಲಿ ಮಾತನಾಡಿ ಪಾರಿಜಾದ್ ಅವರನ್ನು ಬಂಧಿಸುವುದಾಗಿ ತಿಳಿಸಿದ್ದಾರೆ. ಇದರಿಂದ ಪಾರಿಜಾದ ಭಯಭೀತರಾಗಿದ್ದಾರೆ. ಆಗ ಸ್ಕೈಪ್ ಆ್ಯಪ್ ಮೂಲಕವೂ ಪೊಲೀಸರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಈಗ ಸಹ ಖದೀಮರು ಮುಂಬೈ ಪೊಲೀಸರ ಸೋಗಿನಲ್ಲಿ ಮಾತನಾಡಿ, ಆಕೆಯ ಆಧಾರ್ ಕಾರ್ಡ್, ಭಾವಚಿತ್ರಗಳು, ಬ್ಯಾಂಕ್‌ಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಎಲ್ಲ ವಿವರಗಳನ್ನು ಪಡೆದುಕೊಂಡು ಸುಮಾರು 4.53 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ. ಈ ಕುರಿತು ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾಖಲೆ ಪ್ರಮಾಣದಲ್ಲಿ ಹೆಚ್ಚುತ್ತಿವೆ ಸೈಬರ್​ ವಂಚನೆ ಪ್ರಕರಣ; ಇದರಿಂದ ತಪ್ಪಿಸಿಕೊಳ್ಳಲು ಜನರು ಏನ್ ಮಾಡಬೇಕು​?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.