ETV Bharat / bharat

ಬ್ಯಾಂಕ್ ಶಾಖೆಯಿಂದ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನದೊಂದಿಗೆ ಮ್ಯಾನೇಜರ್ ಪರಾರಿ! - Bank Manager Absconds with Gold

ಬ್ಯಾಂಕ್​ನಲ್ಲಿದ್ದರೆ ತಮ್ಮ ಚಿನ್ನಾಭರಣ ಸುರಕ್ಷಿತ ಅಂತ ಗಿರವಿ ಇಟ್ಟ ಗ್ರಾಹಕರಿಗೆ ಆಘಾತ ಉಂಟಾಗಿದೆ. ಇದ್ದಕ್ಕಿದ್ದಂತೆ ಚಿನ್ನಾಭರಣ ನಾಪತ್ತೆ ಆಗಿದೆ ಎಂಬ ಸುದ್ದಿ ಗ್ರಾಹಕರ ನಿದ್ದೆಗೆಡಿಸಿದೆ.

Bank Manager Absconds
ಮ್ಯಾನೇಜರ್ ಪರಾರಿ (ETV Bharat)
author img

By ETV Bharat Karnataka Team

Published : Aug 18, 2024, 10:55 AM IST

Updated : Aug 18, 2024, 11:04 AM IST

ಕೊಝಿಕ್ಕೋಡ್(ಕೇರಳ): ಬ್ಯಾಂಕ್ ವ್ಯವಸ್ಥಾಪಕರೊಬ್ಬರು (ಮ್ಯಾನೇಜರ್) ಶಾಖೆಯಲ್ಲಿ ಗಿರವಿ ಇಟ್ಟಿದ್ದ 17 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಆರೋಪಿಯನ್ನು ತಮಿಳುನಾಡಿನ ಮೆಟ್ಟುಪಾಳ್ಯಂ ಪತಿ ಸ್ಟ್ರೀಟ್ ನಿವಾಸಿ ಮಾಧಾ ಜಯಕುಮಾರ್ (34) ಎಂದು ಗುರುತಿಸಲಾಗಿದೆ.

ಜಯಕುಮಾರ್ ಅವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ವಡಕರ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜಯಕುಮಾರ್ ಅವರು 26 ಕೆಜಿಗಳಷ್ಟು ಚಿನ್ನಾಭರಣದೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಶಾಖೆಯಲ್ಲಿ ಮರು ಮೌಲ್ಯಮಾಪನ ಪ್ರಕ್ರಿಯೆ ನಡೆಸುತ್ತಿರುವ ಸಂದರ್ಭದಲ್ಲಿ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಗ್ರಾಹಕರು ಗಿರವಿ ಇಟ್ಟಿದ್ದ ಅಸಲಿ ಚಿನ್ನವನ್ನು ನಕಲಿ ಚಿನ್ನದಿಂದ ಬದಲಾಯಿಸಿರುವುದು ಗೊತ್ತಾಗಿದೆ. ಈ ಸಂಬಂಧ ವಡಕರ​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬ್ಯಾಂಕ್​ನ ನೂತನ ವ್ಯವಸ್ಥಾಪಕ ವಿ. ಇರ್ಷಾದ್ ಅವರು ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ.

ಕಳೆದ ಮೂರು ವರ್ಷಗಳಿಂದ ವಡಕರ​ ಶಾಖೆಯ ವ್ಯವಸ್ಥಾಪಕರಾಗಿದ್ದ ಮಾಧಾ ಜಯಕುಮಾರ್ ಅವರನ್ನು ಇತ್ತೀಚೆಗೆ ಜುಲೈನಲ್ಲಿ ಎರ್ನಾಕುಲಂನ ಪಲರಿವಟ್ಟಂ ಶಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಅವರು ಆ ಶಾಖೆಯ ಕರ್ತವ್ಯಕ್ಕೆ ಹಾಜರಾಗಿಲ್ಲ. ಕಳೆದ ಜೂನ್ 13 ರಿಂದ ಜುಲೈ 6, 2024 ರ ನಡುವೆ ಗ್ರಾಹಕರು ಗಿರವಿ ಇಟ್ಟಿದ್ದ 42 ಖಾತೆಗಳಿಗೆ ಸಂಬಂಧಿಸಿದ ಚಿನ್ನವನ್ನು ಕದ್ದೊಯ್ಯಲಾಗಿದೆ. ವಡಕರ​ ವೃತ್ತ ನಿರೀಕ್ಷಕ ಸುನೀಲ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಳ್ಳರ ಪಾಲಾಗಿದ್ದ ಚಿನ್ನಾಭರಣ ವರಮಹಾಲಕ್ಷ್ಮಿ ಹಬ್ಬದ ದಿನವೇ ಮನೆಗೆ ವಾಪಸ್! - Stolen Gold Jewelery Returned Home

Last Updated : Aug 18, 2024, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.