ETV Bharat / bharat

ಬಾಂಗ್ಲಾದಲ್ಲಿರುವ ಹಿಂದೂಗಳನ್ನು ರಕ್ಷಿಸಬೇಕು: ಶಂಕರಾಚಾರ್ಯ ಸ್ವಾಮೀಜಿ - Shankaracharya Swamiji Request

author img

By ETV Bharat Karnataka Team

Published : Aug 6, 2024, 1:12 PM IST

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ರಾಜೀನಾಮೆ ನಂತರ ಹೆಚ್ಚುತ್ತಿರುವ ಅಶಾಂತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ, ಶೇ10 ರಷ್ಟು ಹಿಂದೂಗಳು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಭದ್ರತೆ ಮುಖ್ಯವಾಗಿದೆ ಎಂದು ಹೇಳಿದರು.

BANGLADESH UNREST  SHEIKH HASINA RESIGNATION  BANGLADESH VOILENCE  SHANKARACHARYA AVIMUKTESHWARANANDA
ಶಂಕರಾಚಾರ್ಯ ಸ್ವಾಮೀಜಿ (ANI)

ನವದೆಹಲಿ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿದ ನಂತರ ನೆರೆಯ ದೇಶ ಬಾಂಗ್ಲಾದೇಶದಲ್ಲಿ ಹೆಚ್ಚುತ್ತಿರುವ ಅಶಾಂತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಜ್ಯೋತಿರ್ಮಠ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು, ಅಲ್ಲಿನ ಹಿಂದೂಗಳನ್ನು ರಕ್ಷಿಸುವಂತೆ ಬಾಂಗ್ಲಾದೇಶದ ಸೇನೆಗೆ ಮನವಿ ಮಾಡಿದ್ದಾರೆ.

ನಮ್ಮ ನೆರೆಯ ದೇಶ ಬಾಂಗ್ಲಾದೇಶದಲ್ಲಿ ರಾಜಕೀಯ ಮೇಲಾಟ ನಡೆದಿದೆ. ಸದ್ಯ ದೇಶ ಸೇನೆಯ ರಕ್ಷಣೆಯಲ್ಲಿದೆ. ಅಲ್ಲಿನ ಸೇನೆಯು ಜನರನ್ನು ರಕ್ಷಿಸುವ ತನ್ನ ಜವಾಬ್ದಾರಿಯನ್ನು ಪೂರೈಸುತ್ತದೆ ಎಂದು ನಾವು ಖಂಡಿತವಾಗಿಯೂ ಭಾವಿಸುತ್ತೇವೆ. ಶೇ 10 ರಷ್ಟು ನಮ್ಮ ಹಿಂದೂ ಸಹೋದರರು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಭದ್ರತೆಯೂ ಮುಖ್ಯವಾಗಿದೆ. ಆದ್ದರಿಂದ ನಮ್ಮ ಹಿಂದೂಗಳು ಯಾವುದೇ ಸಮಸ್ಯೆ ಎದುರಿಸಬಾರದು ಎಂದು ನಾವು ಅಲ್ಲಿನ ಸೇನೆಗೆ ಮತ್ತು ಪ್ರಸ್ತುತ ಅಲ್ಲಿ ಅಧಿಕಾರದಲ್ಲಿರುವವರಿಗೆ ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.

ಅಲ್ಲಿ ವಾಸಿಸುವ ಹಿಂದೂಗಳು ನಿಮ್ಮ ದೇಶದ ಪ್ರಜೆಗಳು ಮತ್ತು ಅದೇ ರೀತಿಯ ವ್ಯವಸ್ಥೆ, ಸೌಲಭ್ಯಗಳು ಮತ್ತು ವ್ಯವಹಾರಗಳು ಪ್ರತಿಯೊಬ್ಬ ನಾಗರಿಕನಿಗೂ ಸಹಜವಾಗಿ ಸಿಗಬೇಕು ಎಂದು ಸ್ವಾಮೀಜಿ ಬಾಂಗ್ಲಾದೇಶದ ಸೇನೆಯನ್ನು ಉಲ್ಲೇಖಿಸಿ ಹೇಳಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ತಾಳ್ಮೆಯನ್ನು ಕಾಪಾಡಿಕೊಳ್ಳುವ ಮೂಲಕ ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ನಿಮ್ಮ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ನಾವು ಹೇಳಲು ಬಯಸುತ್ತೇವೆ ಎಂದು ಸ್ವಾಮೀಜಿ ಉಲ್ಲೇಖಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ನಿವೃತ್ತ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಪ್ರಧಾನಿ ಶೇಖ್ ಹಸೀನಾ ಹಠಾತ್ ರಾಜೀನಾಮೆ ನೀಡಿದ್ದು, ದೇಶದ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಈ ಹಿನ್ನೆಲೆ ಹಸೀನಾ ಅವರು ತಮ್ಮ ದೇಶವನ್ನು ತೊರೆದಿದ್ದಾರೆ.

ಬಾಂಗ್ಲಾದೇಶದ ರಾಜಧಾನಿಯಾದ ಢಾಕಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿದರು ಮತ್ತು ನಂತರ ಪ್ರಧಾನ ಮಂತ್ರಿಯ ಮಹಲಿನ ಮೇಲೆ ದಾಳಿ ಮಾಡಿದರು. ಬಾಂಗ್ಲಾದೇಶದ ವಿಮೋಚನಾ ವೀರ ಮತ್ತು ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದರು.

ಬಾಂಗ್ಲಾದೇಶದ ಸೇನೆಯ ಮುಖ್ಯಸ್ಥ ಜನರಲ್ ವಾಕರ್ - ಉಜ್ - ಝಮಾನ್ ಅವರು ಮಧ್ಯಂತರ ಆಡಳಿತವು ರಾಷ್ಟ್ರವನ್ನು ಆಳುತ್ತದೆ ಎಂದು ಘೋಷಿಸಿದರು. ಮಿಲಿಟರಿ ಸರ್ಕಾರವನ್ನು ಈಗಾಗಲೇ ವಿದ್ಯಾರ್ಥಿ ಪ್ರತಿಭಟನಾಕಾರರು ತಿರಸ್ಕರಿಸಿದ್ದಾರೆ.

ಸೋಮವಾರ, ಆಗಸ್ಟ್ 5 ರಂದು ಜನಸಮೂಹವು ಢಾಕಾದಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿತು ಮತ್ತು ರಾಷ್ಟ್ರಾದ್ಯಂತ ನಾಲ್ಕು ಹಿಂದೂ ದೇವಾಲಯಗಳಿಗೆ ಸಣ್ಣ ಹಾನಿಯನ್ನುಂಟು ಮಾಡಿದೆ ಎಂದು ಸಮುದಾಯದ ಮುಖಂಡರು ವರದಿ ಮಾಡಿದ್ದಾರೆ. ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವು ಪ್ರತಿಭಟನಾಕಾರರಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ.

ಓದಿ: ಬಾಂಗ್ಲಾ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ತನಿಖೆಯಾಗಲಿ: ಯುನೈಟೆಡ್​ ಕಿಂಗ್ಡಮ್​​​​ ಒತ್ತಾಯ - probe into Bangladesh crisis

ETV Bharat Logo

Copyright © 2024 Ushodaya Enterprises Pvt. Ltd., All Rights Reserved.