ETV Bharat / bharat

ಅಯೋಧ್ಯೆ: ಜೂನ್​ 2025ರ ಹೊತ್ತಿಗೆ ಸಂಪೂರ್ಣ ರಾಮ ಮಂದಿರ ನಿರ್ಮಾಣ - Ayodhya Ram Temple complex

author img

By ETV Bharat Karnataka Team

Published : Sep 14, 2024, 3:05 PM IST

ರಾಮ ಮಂದಿರದ ಎರಡು ಮತ್ತ ಮೂರನೇ ಸ್ತರದಲ್ಲಿನ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಹೊತ್ತಿಗೆ ಇದು ಪೂರ್ಣಗೊಳ್ಳಲಿದೆ.

ayodhya-ram-temple-complex-construction-to-be-concluded-by-june-2025
ನಿರ್ಮಾಣವಾಗುತ್ತಿರುವ ರಾಮ ಮಂದಿರ (ಈಟಿವಿ ಭಾರತ್​​)

ಅಯೋಧ್ಯೆ: ರಾಮ ಮಂದಿರದ ಸಂಪೂರ್ಣ ಕಾಮಗಾರಿ ಜೂನ್​ 30, 2025ಗೆ ಪೂರ್ಣಗೊಳ್ಳಲಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನ್ರಿಪೆಂದ್ರ ಮಿಶ್ರಾ ತಿಳಿಸಿದರು. ರಾಮ ಮಂದಿರ ನಿರ್ಮಾಣ ಸಮಿತಿ ಮೂರು ದಿನಗಳ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ.

ದೇಗುಲದ ಶಿಖರ ನಿರ್ಮಾಣಕ್ಕೆ 120 ದಿನಗಳ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಡಿಸೆಂಬರ್​ ಒಳಗೆ ದೇಗುಲದ ಶಿಖರ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆಯಾದರೂ ಇದು ಪೂರ್ಣಗೊಳ್ಳುವುದಿಲ್ಲ. 2025ರ ಫೆಬ್ರವರಿ ಒಳಗೆ ದೇಗುಲದ ಸಂಪೂರ್ಣವಾಗಿ ನಿರ್ಮಾಣಗೊಳ್ಳಲಿದೆ. ದೇಗುಲದೊಳಗೆ ನಿರ್ಮಾಣವಾಗುವ ಸಪ್ತ ಮಂದಿರದ ಮೂರ್ತಿಗಳನ್ನು ಜೈಪುರದಲ್ಲಿ ತಯಾರಿಸಲಾಗುತ್ತಿದೆ.

ಋಷಿ - ಸಂತರ ಮೂರ್ತಿಗಳ ನಿರ್ಮಾಣ: ಈ ಸಪ್ತ ಮಂದಿರದೊಳಗೆ ಋಷಿ ಮತ್ತು ಸಂತರ ಮೂರ್ತಿಗಳನ್ನು ನಿರ್ಮಾಣ ಮಾಡಲಾಗುವುದು. ಈ ಕೆಲಸವೂ 2024ರ ಡಿಸೆಂಬರ್​ನೊಳಗೆ ಪೂರ್ಣ ಮಾಡಲಾಗುವುದು. ಉಳಿದ ರಾಮ ಮಂದಿರದ ಕೆಲಸಗಳು ಜೂನ್​ 20, 2025ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ರಾಮ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸದಸ್ಯ ಅನಿಲ್​ ಮಿಶ್ರಾ ಮಾತನಾಡಿ, ದೇಗುಲದ ಮೇಲಿನ ಮಹಡಿ ನಿರ್ಮಾಣ ಮಾಡಲು ಬೇಕಾದ ಶಿಲೆ, ಕಲ್ಲು ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮತ್ತು ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಾರ್ಮಿಕರ ವ್ಯವಸ್ಥೆಗಾಗಿ ಟ್ರಸ್ಟ್​ ಕಾರ್ಯ ನಿರ್ವಹಿಸುತ್ತಿದೆ.

ಬಿಳಿ ಬಣ್ಣದ ಮಾರ್ಬಲ್​​ನಲ್ಲಿ ಗರ್ಭಗುಡಿ: ಮೊದಲ ಮಹಡಿಯು ಇನ್ನೇನು ಮುಗಿಯುವ ಹಂತ ತಲುಪಿದ್ದು, ನೆಲ ಸಮತಟ್ಟು (ಫ್ಲೋರಿಂಗ್​) ಕಾರ್ಯ ನಡೆಯುತ್ತಿದೆ. ಎರಡನೇ ಮಹಡಿ ಅಭಿವೃದ್ಧಿಯು ಕೂಡ ವೇಗವಾಗಿ ಸಾಗುತ್ತಿದ್ದು, ಯಾವುದೆ ಕಲೆ ಇರದ ಬಿಳಿ ಬಣ್ಣ ಮಾರ್ಬಲ್​ ಕಲ್ಲಿನಲ್ಲಿ ಗರ್ಭಗುಡಿ ನಿರ್ಮಾಣ ಮಾಡಲಾಗುವುದು.

1,600 ಕಾರ್ಮಿಕರು ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಅವಿರಹಿತವಾಗಿ ಬದ್ದರಾಗಿದ್ದಾರೆ. ನಿಗದಿತ ಸಮಯದೊಳಗೆ ದೇಗುಲ ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸದಸ್ಯರು ತಿಳಿಸಿದ್ದಾರೆ.

ಜಿಎಂಆರ್​ ಗ್ರೂಪ್​​ನಿಂದ ಕಟ್ಟಡದ ಅಲಂಕಾರ: ಜೊತೆಗೆ ಸಪ್ತ ಮಂಟಪದ ದೇಗುಲದ ಕಾರ್ಯ ಕೂಡ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಜಿಎಂಆರ್​ ಗ್ರೂಪ್​, ರಾಮ ಜನ್ಮಭೂಮಿ ಕಟ್ಟಡದ ಅಲಂಕಾರವನ್ನು ನಿರ್ವಹಿಸಲಿದೆ. ವರದಿ ಪ್ರಕಾರ ದೇಗುಲದಲ್ಲಿ ಹಸಿರು ಗಿಡಗಳ ಹೊದಿಕೆಯನ್ನು ನಿರ್ವಹಿಸುವ ಯೋಚನೆ ಹೊಂದಿದೆ. ದೇಗುಲದಲ್ಲಿ ಬರುವ ಭಕ್ತರಲ್ಲಿ ಭಕ್ತಿ ಭಾವ ಹೆಚ್ಚಿಸುವ ರೀತಿಯಲ್ಲಿ ಲೈಂಟಿಂಗ್​ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ನೃಪೇಂದ್ರ ಮಿಶ್ರಾ ತಿಳಿಸಿದರು.

ವಿಭಿನ್ನ ಲೈಟಿಂಗ್​ ಹಲವು ಪ್ರಯೋಗ: ಲೈಂಟಿಗ್​​ ವ್ಯವಸ್ಥೆ ಸಂಬಂಧ ಅನೇಕ ಬಾರಿ ಪ್ರಯೋಗವನ್ನು ನಡೆಸಲಾಗಿದೆ. ಶೀಘ್ರದಲ್ಲೇ ಈ ಸಂಬಂಧ ಟೆಂಡರ್​ ಬಿಡುಗಡೆ ಮಾಡಲಾಗುವುದು. ಭಾರತ ಮತ್ತು ವಿದೇಶದ ದೊಡ್ಡ ಕಂಪನಿಗಳಿಗೆ ಈ ಪ್ರದರ್ಶನಕ್ಕೆ ಸಮಯ ನೀಡಲಾಗುವುದು. ಈ ಯೋಜನೆ ಅಡಿ ದೇಗುಲದ ಒಳಗೆ 360 ಡಿಗ್ರಿ ಕೋನದಲ್ಲಿ ಲೈಟ್​ ಹೊರಸೂಸುವ ಪ್ರೊಜೆಕ್ಟರ್​ ಬಳಕೆ ಮಾಡಲಾಗಿವುದು. ಎಷ್ಟು ಪ್ರಾಜೆಕ್ಟರ್​ ಬಳಕೆ ಮಾಡುವುದು ಎಂಬ ಕುರಿತು ನವೆಂಬರ್​ನಲ್ಲಿ ನಿರ್ಧಿರಸಲಾಗುವುದು.

ಇದೇ ವೇಳೆ ದೇಗುಲಕ್ಕೆ ಬರುವ ಪ್ರಯಾಣಿಕರಿಗೆ ಕಿವಿ ಮಾತು ಹೇಳಿದ ಅವರು, ಇದು ಪಿಕ್​ನಿಕ್​ ತಾಣವಲ್ಲ. ಇಲ್ಲಿ ಪಿಕ್​ನಿಕ್​ ತಾಣದಲ್ಲಿ ಮಾಡುವಂತೆ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದರು.

ಇದನ್ನೂ ಓದಿ: ರಾಮ ಮಂದಿರ ಟ್ರಸ್ಟ್​​ ಅಧ್ಯಕ್ಷ ಮಹಂತ್​ ನೃತ್ಯ ಗೋಪಾಲ್​ ದಾಸ್​ ಆರೋಗ್ಯ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.