ನವದೆಹಲಿ: ಕೆನಡಾದಲ್ಲಿರುವ ಭಾರತೀಯ ಹೈ ಕಮಿಷನ್ ಕಟ್ಟಡದ ಮೇಲೆ ಖಲಿಸ್ತಾನಿ ಬೆಂಬಲಿಗರು ನಡೆಸಿರುವ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಪಂಜಾಬ್ನಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದೆ. ಕಳೆದ ಜೂನ್ನಲ್ಲಿ ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಿತ್ತು.
2023ರ ಆಗಸ್ಟ್ 23ರಂದು ಒಟ್ಟಾವಾದಲ್ಲಿ ಹೈ ಕಮಿಷನ್‌ನ ಹೊರಗೆ ಖಾಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಭಾರತ ವಿರೋಧಿ ಘೋಷಣೆಗಳನ್ನು ಮೊಳಗಿಸಿದ್ದರು. ಹೈ ಕಮಿಷನ್ ಕಚೇರಿ ಆವರಣದಲ್ಲಿ ಖಲಿಸ್ತಾನಿ ಬಾವುಟವನ್ನೂ ಅಳವಡಿಸಿದ್ದರು. ಅಷ್ಟೇ ಅಲ್ಲದೇ, ಕಟ್ಟಡದೊಳಗೆ ಎರಡು ಗ್ರೆನೇಡ್ಗಳನ್ನು ಎಸೆದು ಪುಂಡಾಟ ಮೆರೆದಿದ್ದರು.
ಇದನ್ನೂ ಓದಿ: ಖಲಿಸ್ತಾನಿ ಉಗ್ರ ಪನ್ನುನ್ ಹತ್ಯೆಗೆ ಸಂಚು ಪ್ರಕರಣ: ಭಾರತದಿಂದ ಉತ್ತರದಾಯಿತ್ವ ಬಯಸುತ್ತಿದೆ ಅಮೆರಿಕ