ಹೈದರಾಬಾದ್: ''ನಾವು ಪ್ರಸ್ತುತ ಆಧುನಿಕ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಅದಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಬದಲಾವಣೆಗಳನ್ನು ತರಬೇಕು'' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಹೈದರಾಬಾದ್‌ನ ಹಬ್ಸಿಗುಡಾದಲ್ಲಿ ಸೋಮವಾರ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಸಂಸ್ಥೆಯಿಂದ ನಿರ್ಮಿಸಲಾದ ಸೆಂಟರ್ ಆಫ್ ಎಕ್ಸಲೆನ್ಸ್‌ನ ಹೊಸ ಕಟ್ಟಡ ಸಂಕೀರ್ಣವನ್ನು ಡಿಕೆ ಶಿವಕುಮಾರ ಉದ್ಘಾಟಿಸಿದರು.
''1.44 ಲಕ್ಷ ಚದರ್ ಅಡಿ ವಿಸ್ತೀರ್ಣದಲ್ಲಿ 6 ಮಹಡಿಗಳಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡವು ವಸತಿ ಕಟ್ಟಡವನ್ನೂ ಹೊಂದಿದೆ. ಈ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 10 ನೇ ತರಗತಿ ಮತ್ತು ಇಂಟರ್-ಪರೀಕ್ಷೆಗಳನ್ನು ನಡೆಸುತ್ತದೆ. ದೆಹಲಿಯಲ್ಲಿ ತನ್ನ ಮುಖ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಮಂಡಳಿಯು ಹೈದರಾಬಾದ್‌ನಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸುತ್ತದೆ.
ಜೊತೆಗೆ ತನ್ನ ಸೇವೆಗಳನ್ನು ವಿಸ್ತರಿಸಲು ಹೊಸ ಪ್ರಯೋಗಗಳನ್ನು ನಡೆಸಲಿದೆ. ದೇಶಾದ್ಯಂತ 2,750 ಶಾಲೆಗಳು ಮತ್ತು 5 ಇತರ ದೇಶಗಳ ಶಿಕ್ಷಣ ಸಂಸ್ಥೆಗಳು ಇದರ ಸದಸ್ಯರಾಗಿದ್ದಾರೆ. ಈ ಖಾಸಗಿ ಸಂಸ್ಥೆಯು ಕೇಂದ್ರ ಸರ್ಕಾರ ತಂದಿರುವ ಹೊಸ ಶಿಕ್ಷಣ ನೀತಿ 2020ರ ಭಾಗವಾಗಿ ಪರೀಕ್ಷೆಗಳನ್ನು ನಡೆಸುತ್ತಿದೆ'' ಎಂದು ಸಿಐಎಸ್‌ಸಿಇ ಅಧ್ಯಕ್ಷ ಇಮ್ಯಾನುಯೆಲ್ ಹೇಳಿದರು.
ಸಿಐಎಸ್‌ಸಿಇಯು ದೇಶ ಮಾತ್ರವಲ್ಲದೆ ವಿಶ್ವದಲ್ಲಿಯೇ ಉನ್ನತ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ ಎಂದು ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಮೋಜಿ ಗ್ರೂಪ್ನ ರಮಾದೇವಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿತು.
ಇದನ್ನೂ ಓದಿ: ವಿಧಾನಸೌಧದ ಮುಂಭಾಗ 'ಜನತಾ ದರ್ಶನ' ನಡೆಸಲು ನಿರ್ಧರಿಸಿದೆಯೇ ರಾಜ್ಯ ಸರ್ಕಾರ?