ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ 370 ನೇ ವಿಧಿ ರದ್ದತಿಯ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ತಮ್ಮ ಪಕ್ಷದ ಕಚೇರಿಗೆ ಬಿಗಿ ಭದ್ರತೆಯ ನಡುವೆ ಬೀಗ ಹಾಕಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ 370 ನೇ ವಿಧಿ ರದ್ದತಿಗೆ ಇಂದು ಐದನೇ ವಾರ್ಷಿಕೋತ್ಸವ. ಈ ಹಿನ್ನೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಕ್ಷದ ಕಚೇರಿಯನ್ನು ಸಹ ದಿನದ ಮಟ್ಟಿಗೆ ಮುಚ್ಚಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನ್ಯಾಷನಲ್ ಕಾನ್ಫರೆನ್ಸ್ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿ, "ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಅದು ಸಂಪೂರ್ಣವಾಗಿ ಅನಗತ್ಯವಾಗಿತ್ತು. ನಾನು ಕೆಲಸದ ನಿಮಿತ್ತ ಹೊರಗೆ ಹೋಗಬೇಕಾಗಿತ್ತು. ಆದರೆ, ಪೊಲೀಸರು ನನ್ನನ್ನು ಹೊರಗೆ ಹೋಗದಂತೆ ತಡೆದರು. ಇದು ಅನ್ಯಾಯ ಮತ್ತು ಕಾನೂನುಬಾಹಿರವಾಗಿದೆ" ಎಂದು ಬರೆದುಕೊಂಡಿದ್ದಾರೆ. ಸಾದಿಕ್ ಅವರು ನಗರದ ಹಸ್ನಾಬಾದ್ ಪ್ರದೇಶದ ತಮ್ಮ ನಿವಾಸದ ಗೇಟ್‌ನ ಹೊರಗೆ ಪೊಲೀಸ್ ಸಿಬ್ಬಂದಿ ಇರುವ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.
"ಆಗಸ್ಟ್ 5 ಯಾವಾಗಲೂ ಸಂವಿಧಾನ ವಿರೋಧಿ ಮತ್ತು ಕಾನೂನುಬಾಹಿರವಾಗಿರುತ್ತದೆ. ಆಗಸ್ಟ್ 5, 2019 ರಂದು ಬಿಜೆಪಿ ಜಮ್ಮು ಮತ್ತು ಕಾಶ್ಮೀರದ ಜನರಿಗೆ ದ್ರೋಹ ಮಾಡಿದೆ. ಸಂವಿಧಾನವನ್ನು ನಿರ್ಲಕ್ಷಿಸುವ ಮೂಲಕ ಬಿಜೆಪಿಯು ಸಾಂವಿಧಾನವನ್ನು ನೈತಿಕ ತತ್ವ ಹಾಗೂ ಕಾನೂನನ್ನು ದುರ್ಬಲಗೊಳಿಸಿದೆ", ಎಂದು ನ್ಯಾಷನಲ್ ಕಾನ್ಫರೆನ್ಸ್ ಪ್ರತಿಕ್ರಿಯಿಸಿದೆ.
ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಗನಿ ಲೋನ್ ಅವರು ಪ್ರತಿಕ್ರಿಯಿಸಿ, ''ಆಗಸ್ಟ್ 5 ರಂದು ಕಾಶ್ಮೀರಿ ಜನರ ಸಂಪೂರ್ಣ ನಿರಸ್ತ್ರೀಕರಣವನ್ನು ನೆನಪಿಸುತ್ತದೆ. ಕಳೆದ ಐದು ವರ್ಷಗಳಿಂದ ಅಲ್ಲಿ ಚುನಾಯಿತ ಸಭೆ ನಡೆದಿಲ್ಲ. ಮತ್ತು ಸ್ಥಳೀಯ ಜನರು ತಮ್ಮ ವ್ಯವಹಾರಗಳನ್ನು ನಡೆಸಲು ಯಾವುದೇ ಚರ್ಚಿಸುತ್ತಿಲ್ಲ. ಇದು ದುಃಖಕರವಾಗಿದೆ. ದೇಶದಲ್ಲಿ ಶಕ್ತಿಯುತ ಧ್ವನಿಗಳಿಲ್ಲ. ಇಂತಹ ಅವಮಾನಕರ ಅಸ್ತಿತ್ವಕ್ಕಾಗಿ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿರುವುದು ಏಕೆ?'' ಎಕ್ಸ್ ಖಾತೆಯಲ್ಲಿ ಕಿಡಿಕಾರಿದ್ದಾರೆ.
ಆಗಸ್ಟ್ 5, 2019 ರಂದು ಕೇಂದ್ರವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿತು. ಬಳಿಕ ಭಾರತೀಯ ಒಕ್ಕೂಟದೊಳಗೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು. ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯನ್ನು ಸಹ ತಂದಿದೆ. ಇದು ಹಿಂದಿನ ರಾಜ್ಯವನ್ನು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
ಇದನ್ನೂ ಓದಿ: ವಯನಾಡ್ ಭೂ ಕುಸಿತ: ರಕ್ಷಣಾ ತಂಡ ಆಗುಮಿಸುವ ಮುನ್ನವೇ ಮಾಹಿತಿ ನೀಡಿದ ಮೊದಲ ಮಹಿಳೆ ಸಾವು - Wayanad devastating landslide