ತೇಜ್ಪುರ (ಅಸ್ಸಾಂ): ಪೂರ್ವ ಅರುಣಾಚಲ ಪ್ರದೇಶದ ಟ್ರಾನ್ಸ್- ಅರುಣಾಚಲ ಹೆದ್ದಾರಿ ಗಡಿಯಲ್ಲಿರುವ್ ತಾಪಿ ಪ್ರದೇಶದ ಬಳಿ ಸೇನಾ ಟ್ರಕ್ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮೂವರು ಯೋಧರು ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಮೇಲಿನ ಸುಬನ್ಸಿರಿ ಜಿಲ್ಲೆಯ ಪರ್ವತ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದಾಗ ಅಪಘಾತವಾಗಿದೆ. ಘಟನೆಯ ಬಗ್ಗೆ ಸೇನೆಯ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
#IndianArmy #EasternCommand #InTheLineofDuty#LestWeForget
— EasternCommand_IA (@easterncomd) August 27, 2024
Lt Gen RC Tiwari, #ArmyCdrEC & All Ranks express deepest condolences on the sad demise of Bravehearts Hav Nakhat Singh, Nk Mukesh Kumar and Gdr Ashish who made the supreme sacrifice in the line of duty in… pic.twitter.com/LcRAdHKK5h
ಸಾವನ್ನಪ್ಪಿದವರನ್ನು ಹವಿಲ್ದಾರ್ ನರ್ಖತ್ ಸಿಂಗ್, ನಾಯಕ್ ಮುಖೇಶ್ ಕುಮಾರ್ ಮತ್ತು ಗ್ರೆನೇಡಿಯರ್ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮೃತ ಯೋಧರ ಹೆಸರುಗಳನ್ನು ಉಲ್ಲೇಖಿಸಿ, ವೀರಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಎಂಟು ಸೇನಾ ಸಿಬ್ಬಂದಿಯನ್ನು ಹೊತ್ತ ಸೇನಾ ವಾಹನ, ತರಬೇತಿ ಮುಗಿಸಿದ ಬಳಿಕ ಆ ಪ್ರದೇಶದಿಂದ ತೆರಳಿದ್ದು, ತಾಪಿ ಬಳಿ (ಬಾರರೂಪನ್ನಿಂದ 15 ಕಿ.ಮೀ ದೂರದ) ಅಪಘಾತಕ್ಕೀಡಾಗಿದೆ. ಎಂಟು ಮಂದಿ ಗಡಿಯಿಂದ ಬರರೂಪಕ್ನಲ್ಲಿ ರಾತ್ರಿ ಕಳೆಯಲು ಬಂದಿದ್ದರು. ಉಳಿದವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಭಾರತೀಯ ಸೇನೆಯ ಪೂರ್ವ ಕಮಾಂಡ್ ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಸಂತ್ರಸ್ತರಿಗೆ ಗೌರವ ಸಲ್ಲಿಸಿದೆ.
ಇದನ್ನೂ ಓದಿ: ಚಾಮರಾಜನಗರ: ಪಂಜಾಬ್ ಗಡಿಯಲ್ಲಿ ಹೃದಯಾಘಾತದಿಂದ ಯೋಧ ಮೃತ, ಸ್ವಗ್ರಾಮದಲ್ಲಿ ಅಂತಿಮ ನಮನ - soldier funeral