ETV Bharat / bharat

ರಫ್ತುದಾರರಾದ ರೈತರು; ಆಸ್ಟ್ರೇಲಿಯಾಕ್ಕೆ ರೆಡಿ-ಟು-ಕುಕ್​ ಮಿಲೆಟ್​​​ ಪೂರೈಕೆಗೆ ಅವಕಾಶ ನೀಡಿದ ಎಪಿಇಡಿಎ

author img

By ETV Bharat Karnataka Team

Published : Feb 14, 2024, 12:44 PM IST

ಎಪಿಡಿಇಡಿಎ ರೈತರಿಗೆ ನೇರವಾಗಿ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಿ ಉತ್ಪನ್ನಗಳ ರಫ್ತಿಗೆ ಮುಂದಾಗಲು ಅವಕಾಶ ನೀಡಿದೆ.

APEDA facilitated Punjab Farmers export millet to Australia

ನವದೆಹಲಿ: ರೈತರ ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಕಾಟ ಸದಾ ಇರುತ್ತದೆ. ಆದರೆ, ಇದೀಗ ಮಧ್ಯವರ್ತಿಗಳ ಕಾಟವಿಲ್ಲದೇ ರೈತರೇ ನೇರವಾಗಿ ಅಂತಾರಾಷ್ಟ್ರೀಯ ರಫ್ತುದಾರರಾಗಬಹುದಾಗಿದೆ. ಈ ರೀತಿಯ ಅವಕಾಶವನ್ನು ಇದೀಗ ಪಂಜಾಬ್​ ರೈತರು ಪಡೆದಿದ್ದು, ರೈತರೇ ನೇರವಾಗಿ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಉತ್ಪನ್ನಗಳ ರಫ್ತಿಗೆ ಮುಂದಾಗಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ನೆರವಾಗಿದೆ.

ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) 500 ಸ್ಟಾರ್ಟ್​ಪ್​ಗಳಿಗೆ ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನವನ್ನು ರಫ್ತು ಮಾಡಲು ಅವಕಾಶ ನೀಡಿದೆ.

ಪಂಜಾಬಿನ ಸಂಗ್ರೂರ್​​ ಜಿಲ್ಲೆಯ ರೈತರನ್ನೊಳಗೊಂಡ ಸ್ಟಾರ್ಟ್​​ಪ್​ಗಳು 14.3 ಮೆಟ್ರಿಕ್​ ಟನ್​​ ಸಿರಿಧಾನ್ಯವನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಲಿದ್ದು, ಇದರ ಮೌಲ್ಯ 45,803 ಡಾಲರ್​​​ ಆಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ರೈತ ದಿಲ್​ಪ್ರೀತ್​ ಸಿಂಗ್​ರ ರೆಡಿ ಟು ಕುಕ್​ ಸೇರಿದಂತೆ ಹಲವು ಉತ್ಪನ್ನಗಳ ರಫ್ತಿಗೆ ಎಪಿಇಡಿಎ ಅಧ್ಯಕ್ಷ ಅಭಿಷೇಕ್​ ದೇವ್​ ಚಾಲನೆ ನೀಡಿದರು. ಪಂಜಾಬ್​ ರೈತರಿಂದ ಮೊದಲ ಬಾರಿಗೆ ರಫ್ತಾಗುತ್ತಿರುವ ಉತ್ಪನ್ನಗಳಲ್ಲಿ ರಾಗಿ, ಜೋಳ, ಬಂಜ್ರಾ ಸೇರಿದಂತೆ ಹಲವಾರು ಸಿರಿಧಾನ್ಯಗಳು ಇರಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿರುವ ಸಿಡ್ನಿಯ ಜಸ್ವೀರ್​ ಸಿಂಗ್ ಕೂಡ ಭಾಗಿಯಾಗಿದ್ದರು.

ಈ ವೇಳೆ ತಮ್ಮ ಈ ಯೋಜನೆಗೆ ಸಹಕಾರಕ್ಕೆ ಅವಕಾಶವನ್ನು ನೀಡಿದ ಕೇಂದ್ರದ ಎಪಿಇಡಿಎಗೆ ಧನ್ಯವಾದವನ್ನು ಅರ್ಪಿಸಿದರು. ಈ ವೇಳೆ ಭವಿಷ್ಯದಲ್ಲಿ ಉದ್ಯಮದ ಅವಕಾಶದ ಬಗ್ಗೆ ಆಶಾವಾದ ಹೊಂದಿದ್ದು, ಹೆಚ್ಚಿನ ರಫ್ತು ನಡೆಸುವುದಾಗಿ ಅವರು ತಿಳಿಸಿದರು.

ಇಲ್ಲಿ ರೈತರು ಖರೀದಿದಾರರಿಗೆ ಅಗತ್ಯವಿರುವ ಎಂಡ್​ ಟು ಎಂಡ್​​ನ ಸಂಪೂರ್ಣ ಮೌಲ್ಯ ಸರಪಳಿ ನಿಯಂತ್ರಣವನ್ನು ಹೊಂದಿರುತ್ತಾರೆ. ರಫ್ತು ಮಾಡಲು ಮುಂದಾಗಿರುವ ರೈತರು ತಮ್ಮ ಕೃಷಿ ಭೂಮಿಯಲ್ಲಿಯೇ ಈ ಸಿರಿಧಾನ್ಯಗಳನ್ನು ಬೆಳೆದಿದ್ದು, ಪ್ರಾಥಮಿಕ ಮತ್ತು ಎರಡನೇ ಹಂತದ ಪ್ರಕ್ರಿಯೆ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಪ್ಯಾಕೇಜಿಂಗ್​ ಅನ್ನು ಅವರದೇ ಘಟಕದಲ್ಲಿ ಮುಗಿಸಿದ್ದಾರೆ.

ಈ ಯಶಸ್ಸಿನ ಕಥೆಯು ಕೃಷಿ ವಲಯದಲ್ಲಿ ಆಗುತ್ತಿರುವ ರೂಪಾಂತರಕ್ಕೆ ಸಾಕ್ಷಿಯಾಗಿದೆ. ದಿಲ್ಫ್ರಿಲ್​​ನಂತಹ ರೈತರು ಕೃಷಿ ರಫ್ತಿನಲ್ಲಿ ಪ್ರಮುಖ ಕೊಡುಗೆದಾರರಾಗಬಹುದಾಗಿದೆ. ಇದು ಸ್ಥಳೀಯ ರೈತರನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಬಲೀಕರಣಗೊಳಿಸಲು ಒತ್ತು ನೀಡುತ್ತದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳು ಹೆಚ್ಚು ಜನಪ್ರಿಯವಾಗಿದ್ದು, ಬೇಡಿಕೆ ಹೊಂದಿದೆ ಭಾರತದಿಂದ ಸಿರಿಧಾನ್ಯಗಳ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2021-22ರಲ್ಲಿ 62.95 ಮಿಲಿಯನ್​ ಡಾಲರ್​​, 2022-23ರಲ್ಲಿ 75.45 ಮಿಲಿಯನ್​ ಡಾಲರ್​ ಮತ್ತು 2023ರ ಏಪ್ರಿಲ್​ನಿಂದ ನವೆಂಬರ್​ 2023ರವರೆಗೆ 45.46 ಮಿಲಿಯನ್​ ರಫ್ತನ್ನು ಮಾಡಲಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: ಬೆಳ್ಳುಳ್ಳಿಗೆ ಬಂಗಾರದ ಬೆಲೆ: ಸಾಲ ಮಾಡಿ ಬೆಳೆ ಬೆಳೆದ ರೈತ ಮೂರೇ ತಿಂಗಳಲ್ಲಿ ಕೋಟ್ಯಧಿಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.