ETV Bharat / bharat

ರಾಮೋಜಿ ರಾವ್​ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು - AP CM Chandrababu Naidu - AP CM CHANDRABABU NAIDU

ವಿಜಯವಾಡದಲ್ಲಿ ಗುರುವಾರ ಸಂಜೆ ನಡೆದ ದಿವಂಗತ ರಾಮೋಜಿ ರಾವ್​ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಸಿಎಂ ಎನ್​.ಚಂದ್ರಬಾಬು ನಾಯ್ಡು, ಡಿಸಿಎಂ ಪವನ್​ ಕಲ್ಯಾಣ್​ ಸೇರಿದಂತೆ ಅಪಾರ ಸಂಖ್ಯೆಯ ಗಣ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರ ಸಿಎಂ ಚಂದ್ರಬಾಬು ನಾಯ್ಡು (ANI)
author img

By ETV Bharat Karnataka Team

Published : Jun 27, 2024, 9:43 PM IST

ವಿಜಯವಾಡ(ಆಂಧ್ರ ಪ್ರದೇಶ): ರಾಮೋಜಿ ಗ್ರೂಪ್ ಸಂಸ್ಥಾಪಕರಾದ ದಿವಂಗತ ರಾಮೋಜಿ ರಾವ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ 'ಭಾರತ ರತ್ನ' ನೀಡಬೇಕು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ.

ಆಂಧ್ರ ಪ್ರದೇಶ ಸರ್ಕಾರ ಇಂದು ಸಂಜೆ ಆಯೋಜಿಸಿದ್ದ ರಾಮೋಜಿ ರಾವ್​ ಅವರ ಸಂಸ್ಮರಣಾ ಸಭೆಯಲ್ಲಿ ಮಾತನಾಡಿದ ಅವರು, "ರಾಮೋಜಿ ರಾವ್ ಅವರು ಈ ಗ್ರೂಪ್​ ಅನ್ನು ಅವರ ಕುಟುಂಬಕ್ಕಾಗಿ ಮಾತ್ರ ಸ್ಥಾಪಿಸಲಿಲ್ಲ. ಅದು 10 ಕೋಟಿ ತೆಲುಗು ಭಾಷಿಕರಿಗೆ ಸೇರಿದ್ದಾಗಿದೆ. ಮಹಾನ್​ ಚೇತನ ರಾಮೋಜಿ ರಾವ್ ಅವರಿಗೆ ಭಾರತ ರತ್ನ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವಿಜ್ಞಾನ ಕೇಂದ್ರ ಸ್ಥಾಪನೆ: ಅಮರಾವತಿಯಲ್ಲಿ ರಾಮೋಜಿ ವಿಜ್ಞಾನ ಕೇಂದ್ರವನ್ನು ನಮ್ಮ ಸರ್ಕಾರ ಸ್ಥಾಪಿಸಲಿದೆ. ರಾಜಧಾನಿ ಅಮರಾವತಿಯಲ್ಲಿ ರಸ್ತೆಯೊಂದಕ್ಕೆ ರಾಮೋಜಿ ರಾವ್ ಅವರ ಹೆಸರಿಡಲಾಗುವುದು.ವಿಶಾಖಪಟ್ಟಣದಲ್ಲಿ ಸಿನಿಮಾ ನಿರ್ಮಾಣಕ್ಕೆ ಚಿತ್ರನಗರದ ವ್ಯವಸ್ಥೆ ಮಾಡಲಾಗುವುದು. ಅದಕ್ಕೂ ರಾಮೋಜಿ ರಾವ್ ಅವರ ಹೆಸರನ್ನೇ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

"ರಾಮೋಜಿ ರಾವ್ ಅವರು ನಂಬಿದ ತತ್ವಗಳಿಗಾಗಿ ದುಡಿದ ವ್ಯಕ್ತಿ. ದುಡಿಯುತ್ತಲೇ ಸಾಯಬೇಕೆಂಬ ಅವರ ಆಸೆ ಈಡೇರಿತು. ತೆಲುಗು ಭಾಷೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಈನಾಡು ಮೂಲಕ ಸಮಾಜದ ಹಿತಕ್ಕಾಗಿ ಶ್ರಮಿಸಿದರು. ರಾಮೋಜಿ ರಾವ್ ಅವರು ನಟರು, ಪತ್ರಕರ್ತರು ಮತ್ತು ಕಲಾವಿದರಿಗೆ ಜೀವನವನ್ನು ರೂಪಿಸಿಕೊಟ್ಟರು" ಎಂದರು.

ಗಟ್ಟಿಯಾಗಿ ಉಳಿದ ಮಾರ್ಗದರ್ಶಿ: "ಮಾರ್ಗದರ್ಶಿ ಸಂಸ್ಥೆಯನ್ನು ತುಳಿಯಲು ಹಲವು ಸರ್ಕಾರಗಳು ಯತ್ನಿಸಿದವು. ಎಷ್ಟೇ ಕಿರುಕುಳ ನೀಡಿದರೂ, ಅಪಪ್ರಚಾರ ಮಾಡಿದರೂ ಆ ಸಂಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆ ತರಲು ಸಾಧ್ಯವಾಗಿಲ್ಲ. ಪ್ರಿಯಾ ಉಪ್ಪಿನಕಾಯಿಯು 150 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ರಾಮೋಜಿ ಫಿಲ್ಮ್ ಸಿಟಿಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಕೋವಿಡ್​-19 ಸಾಂಕ್ರಾಮಿಕ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿದ್ದರು. ಹೈದರಾಬಾದ್ ಅಭಿವೃದ್ಧಿಯಲ್ಲಿ ರಾಮೋಜಿ ರಾವ್ ಅವರ ಪಾತ್ರ ದೊಡ್ಡದಿದೆ. ರಾಮೋಜಿ ರಾವ್ ಅವರು ಸಮಾಜಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಸ್ಫೂರ್ತಿಯನ್ನು ಮುಂದಿನ ಪೀಳಿಗೆಗೂ ತಿಳಿಸಬೇಕು" ಎಂದು ಚಂದ್ರಬಾಬು ನಾಯ್ಡು ಹೇಳಿದರು.

ವಿಜಯವಾಡದ ಕಾನೂರಿನಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಶಿಕ್ಷಣ ಸಚಿವ ನಾರಾ ಲೋಕೇಶ್, ರಾಮೋಜಿ ರಾವ್ ಅವರ ಕುಟುಂಬಸ್ಥರು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದರು. ರಾಮೋಜಿ ರಾವ್ ಅವರ ಜೀವನದ ಅಮೂಲ್ಯ ಕ್ಷಣಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ಆಂಧ್ರ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ರಾಮೋಜಿ ಗ್ರೂಪ್​ ವತಿಯಿಂದ ₹10 ಕೋಟಿ ದೇಣಿಗೆ - Ramoji Rao Memorial Meet

ETV Bharat Logo

Copyright © 2024 Ushodaya Enterprises Pvt. Ltd., All Rights Reserved.