ETV Bharat / bharat

ಗ್ರಾಹಕರಿಗೆ ಶಾಕ್​; ಇಂದಿನಿಂದ ಲೀಟರ್​ಗೆ 2 ರೂ.ನಂತೆ ಅಮೂಲ್​ ಹಾಲಿನ ದರ ಹೆಚ್ಚಳ - Amul milk price hikes - AMUL MILK PRICE HIKES

ಅಮೂಲ್​ ಕಂಪನಿ ಇಂದಿನಿಂದ ದೇಶದಾದ್ಯಂತ ತನ್ನ ಹಾಲಿನ ಬೆಲೆಯನ್ನು ಲೀಟರ್​ಗೆ ಹೆಚ್ಚಿಸಿದೆ. ಹಾಗಾದರೆ ಪ್ರಸ್ತುತ ದರವೇನು? ಇಲ್ಲಿದೆ ನೋಡಿ ಮಾಹಿತಿ.

ಅಮೂಲ್​ ಹಾಲಿನ ದರ ಹೆಚ್ಚಳ
ಅಮೂಲ್​ ಹಾಲಿನ ದರ ಹೆಚ್ಚಳ (ETV Bharat)
author img

By ETV Bharat Karnataka Team

Published : Jun 3, 2024, 9:17 AM IST

Updated : Jun 3, 2024, 10:40 AM IST

ನವದೆಹಲಿ: ಅಮುಲ್ ಬ್ರಾಂಡ್ ಹೆಸರಿನಡಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್​ ಕೋಆಪರೇಟಿವ್​​ ಮಿಲ್ಕ್​​ ಮಾರ್ಕೆಟಿಂಗ್​ ಫೆಡರೇಶನ್ (GCMMF) ಅಮೂಲ್​ ಹಾಲಿನ ದರವನ್ನು ಲೀಟರ್​ಗೆ 2 ರೂಪಾಯಿ ಹೆಚ್ಚಿಸಿದೆ.

ಇಂದಿನಿಂದ ಈ ಅಮೂಲ್​ ಹಾಲಿನ ದರ ದೇಶದಾದ್ಯಂತ ಜಾರಿಯಾಗಿದೆ. ಹಾಲು ಉತ್ಪಾದನ ವೆಚ್ಚ ಮತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಮಾರಾಟ ದರವನ್ನು ಹೆಚ್ಚಿಸಲಾಗಿದೆ ಎಂದು ಮಿಲ್ಕ್​​ ಮಾರ್ಕೆಟಿಂಗ್​ ಫೆಡರೇಶನ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜತೆಗೆ ನಮ್ಮ ಸದಸ್ಯ ಒಕ್ಕೂಟಗಳು ಕಳೆದ ವರ್ಷಕ್ಕಿಂತ ಸರಿಸುಮಾರು 6-8 ಪ್ರತಿಶತದಷ್ಟು ರೈತರಿಗೆ ನೀಡುವ ಬೆಲೆಯಲ್ಲಿ ಹೆಚ್ಚಿಸಿದೆ. ಅಮುಲ್​ ಕಂಪನಿಯ ನಿಯಮದಂತೆ ಹಾಲು ಮತ್ತು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಬೆಲೆ ಹೀಗಿದೆ : ಬೆಲೆ ಏರಿಕೆಯಿಂದ 54 ರೂ. ಇದ್ದ ಅಮುಲ್ 1 ಲೀಟರ್​ ಹಾಲಿನ ಬೆಲೆ 56 ಹಾಗೂ 66 ರೂ. ಇದ್ದ 1 ಲೀಟರ್​ ಅಮುಲ್ ಗೋಲ್ಡ್ ಹಾಲಿನ ದರ 68 ರೂ. ಆಗಿವೆ.

ಇದನ್ನೂ ಓದಿ: ಮಾನ್ಸೂನ್ ಎಂದರೇನು?; ಅವುಗಳ ಸ್ವರೂಪ ಏನು? ರೈತರಿಗೆ ಮಾನ್ಸೂನ್​​ ಎಂದರೆ ಏಕೆ ಇಷ್ಟ?; ಈ ರಾಜ್ಯದಲ್ಲೇ ಮೊದಲ ಮಳೆ!! - What Is Monsoon

Last Updated : Jun 3, 2024, 10:40 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.