ETV Bharat / bharat

ಅಮೃದ್​ ಬಾಗ್ ಹಗರಣ: ಮೊಹಾಲಿ, ಚಂಡೀಗಢ ಮತ್ತು ಪಟಿಯಾಲದ ಅಧಿಕಾರಿಗಳ ಮನೆ ಮೇಲೆ ಇಡಿ ದಾಳಿ - Amrud Bagh Scam - AMRUD BAGH SCAM

ಚಂಡೀಗಢ ಮತ್ತು ಮೊಹಾಲಿಯಲ್ಲಿ ಹಲವು ಐಎಎಸ್ ಅಧಿಕಾರಿಗಳು, ಆಸ್ತಿ ವಿತರಕರು ಮತ್ತು ಹಲವು ರೈತರ ಮನೆಗಳ ಮೇಲೆ ಇಡಿ ದಾಳಿ ನಡೆದಿದೆ.

ed
ಇಡಿ
author img

By ETV Bharat Karnataka Team

Published : Mar 27, 2024, 4:05 PM IST

ಮೊಹಾಲಿ/ಚಂಡೀಗಢ : ಚಂಡೀಗಢ ಮತ್ತು ಮೊಹಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವು ಐಎಎಸ್ ಅಧಿಕಾರಿಗಳು, ಪ್ರಾಪರ್ಟಿ ಡೀಲರ್ಸ್​​ ಮತ್ತು ರೈತರ 15 ಸ್ಥಳಗಳಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಇದುವರೆಗೂ ಈ ಪ್ರಕರಣದ ಬಗ್ಗೆ ಪಂಜಾಬ್ ವಿಜಿಲೆನ್ಸ್ ತನಿಖೆ ನಡೆಸುತ್ತಿತ್ತು.

ಏರ್‌ಪೋರ್ಟ್ ರಸ್ತೆಯಲ್ಲಿ ಏರೋಟ್ರೋಪೊಲಿಸ್ ಯೋಜನೆಗಾಗಿ ಗ್ರೇಟರ್ ಮೊಹಾಲಿ ಅಭಿವೃದ್ಧಿ ಪ್ರಾಧಿಕಾರದಿಂದ ಭೂಮಿ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಈ ದಾಳಿ ನಡೆದಿದೆ. ಭೂಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವನ್ನು ಲ್ಯಾಂಡ್ ಪೂಲಿಂಗ್ ನೀತಿಯಂತೆ GAMADA ನೀಡಿದೆ. ಆ ಜಮೀನಿನಲ್ಲಿ ನೆಟ್ಟ ಪೇರಲ ಮರಗಳ ಬೆಲೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಹಣ್ಣಿನ ಮರಗಳ ಬೆಲೆಯನ್ನು ತೋಟಗಾರಿಕಾ ಇಲಾಖೆ ನಿಗದಿಪಡಿಸುತ್ತದೆ. ಇದಾದ ಬಳಿಕ ಭೂಸ್ವಾಧೀನ ಜಿಲ್ಲಾಧಿಕಾರಿ ತೋಟಗಾರಿಕೆ ನಿರ್ದೇಶಕರಿಗೆ ಹಣ್ಣಿನ ಮರಗಳ ಸಮೀಕ್ಷೆ ಪಟ್ಟಿಯನ್ನು (ಪೇರಲೆ ತೋಟದ ಹಗರಣ ಅಪ್‌ಡೇಟ್) ಕಳುಹಿಸಿ, ಸಿದ್ಧಪಡಿಸಿದ ಮರಗಳ ಮೌಲ್ಯಮಾಪನ ವರದಿಯನ್ನು ಪಡೆದುಕೊಂಡಿದ್ದರು.

ಚಂಡೀಗಢದಲ್ಲಿ ಇಡಿ ಬಿಗ್ ಆ್ಯಕ್ಷನ್ : ಪಂಜಾಬ್ ಅಬಕಾರಿ ಆಯುಕ್ತ ವರುಣ್ ರುಜಮ್ ಅವರ ಮನೆ ಮೇಲೆ ಇಡಿ ದಾಳಿ ನಡೆಸಿರುವ ಸುದ್ದಿ ಸಹ ಹೊರಬಿದ್ದಿದೆ. ಈ ದಾಳಿ ಮದ್ಯ ದಂಧೆಗೆ ಸಂಬಂಧಿಸಿರಬಹುದು ಎಂಬ ಮಾತು ಕೂಡ ಕೇಳಿ ಬರುತ್ತಿದೆ. ವಾಸ್ತವವಾಗಿ, ಇತ್ತೀಚೆಗೆ ಪಂಜಾಬ್ ಬಿಜೆಪಿ ಅಧ್ಯಕ್ಷ ಸುನಿಲ್ ಜಾಖರ್ ಅವರು ಪಂಜಾಬ್ ಅಬಕಾರಿ ನೀತಿಯ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಐಎಎಸ್ ವರುಣ್ ರೂಜಮ್ ಅವರ ಮನೆಯ ಹೊರಗಿನಿಂದ ಹರಿದ ಕಾಗದಗಳನ್ನು ಇಡಿ ತಂಡ ವಶಪಡಿಸಿಕೊಂಡಿದೆ.

ಪಟಿಯಾಲ ತಲುಪಿದ ಇಡಿ ಅಧಿಕಾರಿಗಳು: ಪೇರಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲದ ಶ್ರೀನಿವಾಸ್ ಕಾಲೋನಿಯಲ್ಲಿರುವ ಐಎಎಸ್ ಅಧಿಕಾರಿ ರಾಜೇಶ್ ಧಿಮಾನ್ ಮತ್ತು ಸಿಎ ಅನಿಲ್ ಅರೋರಾ ಅವರ ನಿವಾಸಗಳ ಮೇಲೂ ಇಡಿ ದಾಳಿ ನಡೆಸಿದೆ.

ಏನಿದು ಪ್ರಕರಣ ?: 2016ರಲ್ಲಿ ಪಂಜಾಬ್‌ನ ಮೊಹಾಲಿಯಲ್ಲಿ ಪೇರಲ ತೋಟಗಳನ್ನು ನೆಟ್ಟು ಹಗರಣ ನಡೆಸಿರುವುದು ಬೆಳಕಿಗೆ ಬಂದಿತ್ತು. ಪಂಜಾಬ್‌ನ ಪ್ರಸ್ತುತ ಅಬಕಾರಿ ಆಯುಕ್ತ ವರುಣ್ ರುಜಮ್ ಅವರ ಪತ್ನಿ ಸುಮನ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದಲ್ಲದೇ ಪಂಜಾಬ್​ನ ಮತ್ತೊಬ್ಬ ಐಎಎಸ್ ಅಧಿಕಾರಿಯ ಪತ್ನಿ ಜಾಸ್ಮಿನ್ ಕೂಡ ಆರೋಪಿಯಾಗಿದ್ದಾರೆ. ಪಂಜಾಬ್ ರಾಜೇಶ್ ಧಿಮಾನ್ ಕೂಡ ಈ ಆರೋಪ ಹೊತ್ತಿದ್ದಾರೆ.

ಇಂದು, ಪೇರಲ ತೋಟಗಳ ಭೂಮಿಗೆ ತಪ್ಪು ಪರಿಹಾರವನ್ನು ಪಡೆದ ಪ್ರಕರಣದಲ್ಲಿ ಇಡಿ ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಇದೇ ಸಂದರ್ಭದಲ್ಲಿ ಚಂಡೀಗಢದ ಸೆಕ್ಟರ್ 20ರಲ್ಲಿ ನೆಲೆಸಿರುವ ವರುಣ್ ರುಜಮ್ ಮನೆ ಮೇಲೂ ದಾಳಿ ನಡೆಸಲಾಗಿದೆ. ಪಂಜಾಬ್‌ನ ಫಿರೋಜ್‌ಪುರ ಮತ್ತು ಮೊಹಾಲಿಯಲ್ಲಿಯೂ ಇಡಿ ದಾಳಿ ನಡೆದಿದೆ.

ಒಟ್ಟು 1600 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆಸ್ತಿ ಡೀಲರ್‌ನ ಸಹಕಾರದಿಂದ ಜಮೀನು ಖರೀದಿಸಿ, ಹೆಚ್ಚಿನ ಪರಿಹಾರ ಪಡೆಯಲು ಹಣ್ಣಿನ ಗಿಡಗಳ ತೋಟವನ್ನು ನೆಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಪರಿಹಾರ ಪಡೆಯಲು ತರಾತುರಿಯಲ್ಲಿ ಬೃಹತ್ ಗಾತ್ರದ ಪೇರಲ ಗಿಡಗಳನ್ನು ನೆಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಒಟ್ಟು 137 ಕೋಟಿ ರೂಪಾಯಿ ಪರಿಹಾರ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ : ಹಣ ಪಡೆದು ಫ್ಲ್ಯಾಟ್ ನೀಡದೇ ವಂಚಿಸಿದ ಆರೋಪ ಸಂಬಂಧ ಇಡಿ ದಾಳಿ: 120 ಕೋಟಿ ಮೌಲ್ಯದ ಚರ - ಸ್ಥಿರಾಸ್ತಿ ಜಪ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.