ETV Bharat / bharat

ಮಹಿಳೆಯರಿಗೆ 2,100 ರೂ., ಯುಸಿಸಿ ಜಾರಿ, ಉಚಿತ ಸಿಲಿಂಡರ್: ಜಾರ್ಖಂಡ್​ನಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ - BJP MANIFESTO

ಜಾರ್ಖಂಡ್​ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ (IANS)
author img

By ETV Bharat Karnataka Team

Published : Nov 3, 2024, 12:27 PM IST

ರಾಂಚಿ (ಜಾರ್ಖಂಡ್): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಜಾರ್ಖಂಡ್​ನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಶನಿವಾರ ರಾತ್ರಿಯೇ ರಾಜ್ಯ ರಾಜಧಾನಿ ರಾಂಚಿಗೆ ಆಗಮಿಸಿದ್ದ ಅವರು, ಮುಂಬರುವ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಜಾರ್ಖಂಡ್ ರಾಜ್ಯ ರಚನೆಯಾಗಿ 25 ವರ್ಷಗಳಾಗಿರುವ ಈ ಸಂದರ್ಭದಲ್ಲಿ ಪಕ್ಷವು ಮತದಾರರಿಗೆ ಬಿಜೆಪಿಯ ಸಂಕಲ್ಪ ಪತ್ರದಲ್ಲಿ ಮತದಾರರಿಗೆ 25 ಭರವಸೆಗಳನ್ನು ನೀಡಿದೆ. ಗೊಗೊ ದೀದಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು 2,100 ರೂ. ನೀಡುವುದು ಪ್ರಣಾಳಿಕೆಯ ಪ್ರಮುಖ ಅಂಶವಾಗಿದೆ.

ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸರ್ಕಾರದ ಅಡಿಯಲ್ಲಿ ಮಹಿಳೆಯರು ಮತ್ತು ಬುಡಕಟ್ಟು ಜನರು ಸುರಕ್ಷಿತವಾಗಿಲ್ಲ ಮತ್ತು ರಾಜ್ಯದ ಪರಂಪರೆಯನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

ಜಾರ್ಖಂಡ್​ನಲ್ಲಿ ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ಜಾರಿಗೆ ತರಲಾಗುವುದು, ಆದರೆ ಬುಡಕಟ್ಟು ಸಮುದಾಯವನ್ನು ಅವರನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲಾಗುವುದು ಎಂದು ಅವರು ಹೇಳಿದರು.

ರಾಜ್ಯದ 81 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ಪ್ರಣಾಳಿಕೆಯ ಇತರ ಪ್ರಮುಖ ಭರವಸೆಗಳು ಹೀಗಿವೆ:

  • 21 ಲಕ್ಷ ಕುಟುಂಬಗಳಿಗೆ ಸ್ವಂತ ಕಾಂಕ್ರೀಟ್ ಮನೆ, ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವುದು.
  • ಯುವಕರ ವೃತ್ತಿಜೀವನವನ್ನು ಬೆಂಬಲಿಸಲು ಎರಡು ವರ್ಷಗಳವರೆಗೆ ಮಾಸಿಕ 2000 ರೂ.ಗಳ ಸ್ಟೈಫಂಡ್.
  • ನಿರುದ್ಯೋಗ ನಿವಾರಣೆಗಾಗಿ 2,87,000 ಸರ್ಕಾರಿ ಉದ್ಯೋಗಗಳು ಮತ್ತು 5,00,000 ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭರವಸೆ.
  • ಲಕ್ಷ್ಮಿ ಜೋಹರ್ ಯೋಜನೆಯಡಿ 500 ರೂ.ಗೆ ಗ್ಯಾಸ್ ಸಿಲಿಂಡರ್​ ಪೂರೈಕೆ. ಜೊತೆಗೆ ಪ್ರತಿ ವರ್ಷ ಎರಡು ಉಚಿತ ಸಿಲಿಂಡರ್ ನೀಡುವ ಭರವಸೆ.
  • ಬುಡಕಟ್ಟು ಸಂಸ್ಕೃತಿಯನ್ನು ಪುನಃಸ್ಥಾಪಿಸಲು ಮತ್ತು ಉತ್ತೇಜಿಸಲು ಸಿಧೋ- ಕನ್ಹೋ ಸಂಶೋಧನಾ ಕೇಂದ್ರ ಸ್ಥಾಪಿಸುವ ಭರವಸೆ.
  • ಜಾರ್ಖಂಡ್ ಸ್ಟಾಫ್ ಸೆಲೆಕ್ಷನ್ ಕಮಿಷನ್​ನ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆಯನ್ನು ರದ್ದುಗೊಳಿಸಲಾಗುವುದು ಮತ್ತು ಹಿಂದಿನ ಸಿಜಿಎಲ್ ಪರೀಕ್ಷೆ ಮತ್ತು ಎಲ್ಲಾ ಪ್ರಮುಖ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುವ ಭರವಸೆ.
  • ಯಾವುದೇ ಯೋಜನೆಯಲ್ಲಿ ಜನರನ್ನು ಸ್ಥಳಾಂತರಿಸುವ ಮೊದಲು ಅವರಿಗೆ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ಜಾರ್ಖಂಡ್ ನಲ್ಲಿ ಪುನರ್ವಸತಿ ಆಯೋಗವನ್ನು ಸ್ಥಾಪಿಸಲಾಗುವುದು.
  • ಬಿಜೆಪಿ ಸರ್ಕಾರ ರಚನೆಯಾದ ನಂತರ, ಒಳನುಸುಳುವಿಕೆಯನ್ನು ತಡೆಗಟ್ಟಲು ಮತ್ತು ಆಕ್ರಮಿತ ಭೂಮಿಯನ್ನು ಮರಳಿ ಪಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗುವುದು.

ಇದನ್ನೂ ಓದಿ : Watch.. ನಾಗರಹಾವಿನ ಮೇಲೆ ಎರಗಿದ ನಾಯಿಗಳು: ಒಂದು ಬಾಲ ಹಿಡಿದರೆ ಮತ್ತೊಂದು ತಲೆ ಕಚ್ಚಿ ಹಿಡಿದ ಶ್ವಾನಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.