ETV Bharat / bharat

ಅರುಣಾಚಲ ಚೀನಾದ್ದಲ್ಲ, ಭಾರತಕ್ಕೆ ಸೇರಿದ ಭೂಪ್ರದೇಶ: ಅಮೆರಿಕ - Arunachal Pradesh

ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಅಮೆರಿಕ ದೃಢೀಕರಿಸಿದೆ. ಈ ಮೂಲಕ ಭಾರತದ ವಿರುದ್ಧ ಗುಟುರು ಹಾಕುವ ಚೀನಾಕ್ಕೆ ಬುದ್ಧಿವಾದ ಹೇಳಿದೆ.

ಅರುಣಾಚಲಪ್ರದೇಶ
ಅರುಣಾಚಲಪ್ರದೇಶ
author img

By PTI

Published : Mar 21, 2024, 10:31 AM IST

ವಾಷಿಂಗ್ಟನ್: ಅರುಣಾಚಲ ಪ್ರದೇಶ ತನ್ನದೆಂದು ಪದೇ ಪದೇ ಕಾಲು ಕೆರೆದು ಜಗಳ ಕಾಯುವ ಚೀನಾಕ್ಕೆ ಅಮೆರಿಕ ಗುದ್ದು ನೀಡಿದೆ. ಈಶಾನ್ಯ ರಾಜ್ಯವು ಭಾರತಕ್ಕೆ ಸೇರಿದ್ದು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಡ್ರ್ಯಾಗನ್​ ರಾಷ್ಟ್ರ ನಡೆಸುವ ಯಾವುದೇ ಚಟುವಟಿಕೆಗಳಿಗೆ ನಮ್ಮ ಬಲವಾದ ಆಕ್ಷೇಪವಿದೆ ಎಂದು ಅಮೆರಿಕ ಹೇಳಿದೆ.

ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದ್ದನ್ನು ಚೀನಾ ಸರ್ಕಾರ ವಿರೋಧಿಸಿತ್ತು. ಇದರ ಬೆನ್ನಲ್ಲೇ, ಭಾರತದ ಪರವಾಗಿ ಅಮೆರಿಕ ಧ್ವನಿಯೆತ್ತಿರುವುದು ಮಹತ್ವದ ಅಂಶ.

ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿದ ಭೂಪ್ರದೇಶ. ಅಲ್ಲಿ ಚೀನಾದ ಯಾವುದೇ ಚಟುವಟಿಕೆಗಳು ನ್ಯಾಯಸಮ್ಮತವಲ್ಲ. ಆ ರಾಜ್ಯದ ಪೂರ್ಣ ಅಧಿಕಾರ ಭಾರತಕ್ಕೆ ಸಂಬಂಧಿಸಿದ್ದು ಎಂದು ಅಮೆರಿಕ ಸರ್ಕಾರದ ವಕ್ತಾರರು ಹೇಳಿಕೆ ನೀಡಿದ್ದಾರೆ.

ಭಾರತದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅರುಣಾಚಲ ಪ್ರದೇಶವನ್ನು ಭಾರತದ ಪ್ರದೇಶವೆಂದು ಅಮೆರಿಕ ಗುರುತಿಸಿದೆ. ಆ ರಾಜ್ಯದ ಮೇಲಿನ ಅತಿಕ್ರಮಣಗಳು, ಮಿಲಿಟರಿ ಕಾರ್ಯಾಚರಣೆ, ಅಲ್ಲಿನ ಜನರ ಮೂಲಕ ಹಕ್ಕು ಸ್ಥಾಪಿಸುವ ಚೀನಾದ ಯಾವುದೇ ಪ್ರಯತ್ನವನ್ನು ಭಾರತ ಬಲವಾಗಿ ವಿರೋಧಿಸುತ್ತದೆ ಎಂದರು.

ಅರುಣಾಚಲ ಪ್ರದೇಶದ ಮೇಲೆ ಚೀನಾ ಖ್ಯಾತೆಯನ್ನು ಭಾರತ ಸರ್ಕಾರ ಹಲವು ಬಾರಿ ತಿರಸ್ಕರಿಸಿದೆ. ಈಶಾನ್ಯ ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸಿದೆ. ಈ ಪ್ರದೇಶಕ್ಕೆ ಹೊಸ ಹೆಸರುಗಳನ್ನು ನೀಡುವ ನೆರೆ ರಾಷ್ಟ್ರದ ಉದ್ಧಟತನವನ್ನು ಟೀಕಿಸಿದೆ. ಹೀಗೆ ಮಾಡಿದಲ್ಲಿ ವಾಸ್ತವ ಬದಲಾಯಿಸಲು ಸಾಧ್ಯವಿಲ್ಲ. ಅರುಣಾಚಲ ಭಾರತದ ಅವಿಭಾಜ್ಯ ಅಂಗವಾಗಿತ್ತು. ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ತಿರುಗೇಟು ಕೊಟ್ಟಿದೆ.

ಮೋದಿ ಭೇಟಿಗೆ ಉರಿದುಬಿದ್ದ ಚೀನಾ: ಮಾರ್ಚ್ 9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಇದು ಆಯಕಟ್ಟಿನ ಪ್ರದೇಶವಾದ ತವಾಂಗ್‌ಗೆ ಎಲ್ಲಾ ಋತುಮಾನದಲ್ಲಿ ಸಂಪರ್ಕ ಒದಗಿಸುತ್ತದೆ. ಗಡಿ ಪ್ರದೇಶದ ಉದ್ದಕ್ಕೂ ಸೈನಿಕರ ಗಸ್ತಿಗೆ ನೆರವು ನೀಡುತ್ತದೆ.

ಭಾರತದ ಈ ಕ್ರಮಕ್ಕೆ ಚೀನಾ ಉರಿದುಬಿದ್ದಿತ್ತು. ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ಜಾಂಗ್ ಕ್ಸಿಯೋಗಾಂಗ್, ಅರುಣಾಚಲ ಪ್ರದೇಶ ಕ್ಸಿಜಾಂಗ್‌ನ (ಟಿಬೆಟ್‌ನ ಚೀನೀ ಹೆಸರು) ದಕ್ಷಿಣ ಭೂಪ್ರದೇಶವಾಗಿದೆ. ಅದನ್ನು ನಾವು ಅರುಣಾಚಲ ಪ್ರದೇಶ ಎಂದು ಕರೆಯುವುದನ್ನು ಒಪ್ಪಿಕೊಳ್ಳುವುದಿಲ್ಲ. ಭಾರತದಿಂದ ಅಕ್ರಮವಾಗಿ ಅಲ್ಲಿ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಮೊಂಡು ವಾದ ಮಂಡಿಸಿದ್ದರು. ಅರುಣಾಚಲ ಪ್ರದೇಶವನ್ನು 'ದಕ್ಷಿಣ ಟಿಬೆಟ್' ಎಂದು ಪ್ರತಿಪಾದಿಸುವ ಚೀನಾ, ಜಂಗ್ನಾನ್ ಎಂಬ ಹೆಸರಿನಲ್ಲಿ ಕರೆಯುತ್ತದೆ.

ಇದನ್ನೂ ಓದಿ: ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಮತ್ತೆ ಕ್ಯಾತೆ; ಭಾರತದಿಂದ ಸ್ಪಷ್ಟ ಸಂದೇಶ ರವಾನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.