ಜಮ್ಮು: ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ ಜೂನ್ 29ರಿಂದ ಆರಂಭವಾಗಿದೆ. ಕಳೆದೆರಡು ದಿನಗಳಲ್ಲಿ ಒಟ್ಟು 28,534 ಮಂದಿ ದರ್ಶನ ಪಡೆದಿದ್ದಾರೆ. ಇದೀಗ 6,461 ಜನರಿರುವ ಮತ್ತೊಂದು ಬ್ಯಾಚ್ ಯಾತ್ರೆಗೆ ತೆರಳಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುಹೆಯಲ್ಲಿ ಹಿಮದ ರೂಪದಲ್ಲಿ ಇಲ್ಲಿ ಭಕ್ತರು ಶಿವಲಿಂಗದ ದರ್ಶನ ಪಡೆಯುತ್ತಾರೆ. 52 ದಿನಗಳ ಕಾಲ ನಡೆಯುವ ಯಾತ್ರೆ ಸುಲಭ ಪ್ರಯಾಣವಲ್ಲ ಎಂಬುದು ಗಮನಾರ್ಹ.
ಮಂಜಿನ ರೂಪದಲ್ಲಿರುವ ಶಿವಲಿಂಗದ ದರ್ಶನಕ್ಕಾಗಿ ಇಂದು ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ್ನಿಂದ ಹೊಸ ತಂಡ ಎರಡು ಬೆಂಗಾವಲಿನೊಂದಿಗೆ ಹೊರಡಿತು. ಇವರಲ್ಲಿ 2,321 ಸದಸ್ಯರ ತಂಡ ಮುಂಜಾನೆ 3.15ಕ್ಕೆ ಉತ್ತರ ಕಾಶ್ಮೀರ ಬಲ್ಟಾಲ್ ಬೇಸ್ ಕ್ಯಾಂಪ್‌ಗೆ 118 ವಾಹನಗಳ ಬೆಂಗಾವಲು ಪಡೆಯಲ್ಲಿ ಹೊರಟಿತು. ಮತ್ತೊಂದು ತಂಡ, 147 ವಾಹನಗಳ ಬೆಂಗಾವಲು ಪಡೆಯೊಂದಿಗೆ 4,140 ಯಾತ್ರಿಗಳನ್ನು 4.10 ಗಂಟೆಗೆ ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್‌ಗೆ ತೆರಳಿದೆ.
ದರ್ಶನಕ್ಕೆ ತೆರಳುವ ಯಾತ್ರಿಗಳು ಪಹಲ್ಗಾಮ್ ಗುಹೆಯಲ್ಲಿನ ದೇಗುಲಕ್ಕೆ ತೆರಳಲು 48ಕಿ.ಮೀ ದೂರದ ಸಾಂಪ್ರದಾಯಕ ಹಾದಿ ಅಥವಾ ಬಾಲ್ಟಲ್ ಗುಹೆ ದೇಗುಲದ ಮೂಲಕ 14 ಕಿ.ಮೀ ಮೂಲಕ ಸಾಗಬಹುದು. ಪಹಲ್ಗಾಮ್ ಹಾದಿ ಹಿಡಿದರೆ, ಶಿವಲಿಂಗನ ದರ್ಶನಕ್ಕೆ 4 ದಿನ ಬೇಕು. ಆದರೆ, ಬಾಲ್ಟಾಲ್ ಮಾರ್ಗ ಶಾರ್ಟ್ಕಟ್ ಆಗಿದ್ದು, ಈ ಹಾದಿ ಮೂಲಕ ಸಾಗಿದಲ್ಲಿ ಅದೇ ದಿನ ದರ್ಶನ ಪಡೆದು, ಬೇಸ್ ಕ್ಯಾಂಪ್‌ಗೆ ಹಿಂತಿರುಗಬಹುದು.
ಈ ದೇಗುಲ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಅತ್ಯಂತ ಪವಿತ್ರ ಪೌರಾಣಿಕ ಶಕ್ತಿ ಸ್ಥಳವೆಂದು ಪ್ರಸಿದ್ಧ. 300 ಕಿ.ಮೀ ಉದ್ದದ ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ಎರಡು ಬೇಸ್ ಕ್ಯಾಂಪ್ ಹಾಕಲಾಗುತ್ತದೆ.
ಯಾತ್ರಾತ್ರಿಗಳಿಗೆ ಆಹಾರ ಪೂರೈಕೆಗಾಗಿ 124ಕ್ಕೂ ಹೆಚ್ಚು ಲಂಗರ್ಗಳಲ್ಲೂ ಯಾತ್ರೆ ಸಾಗುವ ಎರಡು ಮಾರ್ಗಗಳು ಹಾಗೂ ಸಾರಿಗೆ ಶಿಬಿರ ಹಾಗೂ ಗುಹೆಯ ದೇಗುಲದ ಬಳಿ ಸ್ಥಾಪಿಸಲಾಗಿದೆ. ಈ ಬಾರಿ 7 ಸಾವಿರ ಸ್ವಯಂ ಸೇವಕರು ಯಾತ್ರಿಕರ ಸೇವೆಗೆ ಮುಂದಾಗಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಇವರೆಲ್ಲ ಎಷ್ಟು ಪುಣ್ಯ ಮಾಡಿದ್ದರೋ; ಪ್ರತಿ ವಾರ ತಿರುಮಲ ತಿಮ್ಮಪ್ಪನ ನೇರ ದರ್ಶನ! - Tirupati