ETV Bharat / bharat

ಮೊಬೈಲ್ ರಿಚಾರ್ಜ್ ಮುಗಿದಿದೆಯೇ? ಈ ವಿಧಾನದಿಂದ ತುರ್ತು ವ್ಯಾಲಿಡಿಟಿ ಲೋನ್ ತೆಗೆದುಕೊಳ್ಳಿ - Airtel Emergency Validity Loan - AIRTEL EMERGENCY VALIDITY LOAN

Airtel Emergency Validity Loan: ಮೊಬೈಲ್​ ರಿಚಾರ್ಜ್​ ಮುಗಿದಲ್ಲಿ ಈ ರೀತಿಯಾಗಿ ನೀವು ತುರ್ತು ಲೋನ್​ ಪಡೆಯಬಹುದಾಗಿದೆ. ಅದಕ್ಕಾಗಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಈ ವಿಧಾನವಾಗಿ ತುರ್ತು ವ್ಯಾಲಿಡಿಟಿ ಲೋನ್ ತೆಗೆದುಕೊಳ್ಳಿ

author img

By ETV Bharat Karnataka Team

Published : Mar 25, 2024, 3:45 PM IST

ಪ್ರಮುಖ ಟೆಲಿಕಾಂ ಕಂಪನಿ ಏರ್‌ಟೆಲ್ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್ ಯೋಜನೆಗಳಲ್ಲಿ ಹೊಸ ಕ್ರಾಂತಿಯನ್ನು ತರುವತ್ತ ಹೆಜ್ಜೆ ಇಡುತ್ತಿದೆ. ಈಗಾಗಲೇ ತನ್ನ ಗ್ರಾಹಕರಿಗೆ ಡೇಟಾ ಸಾಲ ನೀಡುತ್ತಿರುವ ಏರ್​ಟೆಲ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತೀಚೆಗೆ 'ತುರ್ತು ವ್ಯಾಲಿಡಿಟಿ ಲೋನ್' ಸೌಲಭ್ಯವನ್ನು ಒದಗಿಸುತ್ತಿದೆ. ಸಕ್ರಿಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ನ ಅವಧಿ ಮುಗಿದ ತಕ್ಷಣ ಬಳಕೆದಾರರು ತುರ್ತು ಪರಿಸ್ಥಿತಿಗಳಿಗಾಗಿ 'ವ್ಯಾಲಿಡಿಟಿ ಲೋನ್' ಸೌಲಭ್ಯವನ್ನು ಪಡೆಯಬಹುದು. ಈ ಸಾಲದ ಭಾಗವಾಗಿ, ಏರ್‌ಟೆಲ್ ಬಳಕೆದಾರರು 1.5 GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಹುದು. ಆದರೆ ಇದರ ವ್ಯಾಲಿಡಿಟಿ ಕೇವಲ ಒಂದು ದಿನಕ್ಕೆ ಮಾತ್ರ. ಬೇಸ್ ಪ್ರಿಪೇಯ್ಡ್ ಪ್ಲಾನ್‌ನ ಅವಧಿ ಮುಗಿದ ತಕ್ಷಣ ರಿಚಾರ್ಜ್ ಮಾಡಲು ಸಾಧ್ಯವಾಗದವರಿಗೆ, ತುರ್ತು ಸಮಯದಲ್ಲಿ ಈ ಎಮರ್ಜೆನ್ಸಿ ವ್ಯಾಲಿಡಿಟಿ ಲೋನ್ ತುಂಬಾ ಉಪಯುಕ್ತವಾಗಿದೆ.

ಏರ್‌ಟೆಲ್‌ ತುರ್ತು ವ್ಯಾಲಿಡಿಟಿ ಲೋನ್​ ಪಡೆಯುವುದು ಹೇಗೆ?: ಏರ್‌ಟೆಲ್ 'ವ್ಯಾಲಿಡಿಟಿ ಲೋನ್' ಪಡೆಯುವುದು ತುಂಬಾ ಸುಲಭ!! ಹೇಗೆ ಅಂದ್ರೆ- ಮೊದಲಿಗೆ ಏರ್‌ಟೆಲ್ IVR ಪ್ರೀಕಾಲ್ ಅನೌನ್ಸ್‌ಮೆಂಟ್ ಅಥವಾ USSD ಕೋಡ್ *567*2# ಇದಕ್ಕೆ ಡಯಲ್ ಮಾಡುವ ಮೂಲಕ ವ್ಯಾಲಿಡಿಟಿ ಲೋನ್ ಪಡೆಯಬಹುದು. ಬೇಸ್ ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ, CLI 56323 ಸಂಖ್ಯೆಯಿಂದ ಬರುವ ಸಂದೇಶಕ್ಕೆ '1' ಎಂದು ಎಂದು ಪ್ರತ್ಯುತ್ತರಿಸುವ ಮೂಲಕ ನೀವು ಸಾಲಕ್ಕಾಗಿ ವಿನಂತಿಯನ್ನು ಸಹ ಕಳುಹಿಸಬಹುದು. ಹೀಗೆ ನೀಡುವ ಲೋನ್​ಅನ್ನು ಮುಂದಿನ ರಿಚಾರ್ಜ್​ ವೇಳೆ ಮರುಪಡೆಯಲಾಗುತ್ತದೆ. ​ ಅದು ಹೇಗೆ ಎಂದರೆ ನಿಮ್ಮ ಹೊಸ ಪ್ಲಾನ್​ ವ್ಯಾಲಿಡಿಟಿಯ ಒಂದು ದಿನ ಮುಂಚೆಯೇ ಮುಕ್ತಾಯಗೊಳ್ಳುತ್ತದೆ. ಹೀಗೆ ತುರ್ತು ವ್ಯಾಲಿಡಿಟಿ ಲೋನ್​ ಅನ್ನು ಮರುಪಡೆಯಲಾಗುತ್ತದೆ.

ಪ್ರಸ್ತುತ ಈ ರಾಜ್ಯಗಳಲ್ಲಿ ಮಾತ್ರ ಲಭ್ಯ: ಈ ವ್ಯಾಲಿಡಿಟಿ ಲೋನ್ ಸೌಲಭ್ಯವು ರೂ.115 ರಿಂದ ರೂ.3,359 ರವರೆಗಿನ ವಿವಿಧ ರಿಚಾರ್ಜ್ ಯೋಜನೆಗಳಲ್ಲಿ ಲಭ್ಯವಿದೆ. ಲೋನ್ ಅನ್ನು ತೆಗೆದುಕೊಂಡ ನಂತರ ಅದನ್ನು ಮರುಪಾವತಿಸಲು ಲಭ್ಯವಿರುವ ಪ್ರಿಪೇಯ್ಡ್ ಪ್ಲಾನ್‌ನೊಂದಿಗೆ ನೀವು ರಿಚಾರ್ಜ್ ಮಾಡದಿದ್ದರೆ, ನೀವು ಮತ್ತೆ ವ್ಯಾಲಿಡಿಟಿ ಲೋನ್ ಪಡೆಯಲು ಅರ್ಹರಾಗಿರುವುದಿಲ್ಲ. ಪ್ರಸ್ತುತ ಈ ಆಫರ್ ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಲ್ಲೂ ಈ ಆಫರ್ ಜಾರಿಯಾಗುವ ಸಾಧ್ಯತೆ ಇದೆ.

ಈ ಯೋಜನೆಗಳ ಬಳಕೆದಾರರು ಅರ್ಹರು: ಈ ಕೆಳಗಿನ ಯೋಜನೆಗಳನ್ನು ರಿಚಾರ್ಜ್ ಮಾಡುವ ಏರ್‌ಟೆಲ್ ಗ್ರಾಹಕರಿಗೆ ಮಾತ್ರ 'ವ್ಯಾಲಿಡಿಟಿ ಲೋನ್' ನೀಡಲಾಗುತ್ತದೆ. ಅವುಗಳೆಂದರೆ: ರೂ.155, ರೂ.179, ರೂ.199, ರೂ.209, ರೂ.239, ರೂ.265, ರೂ.289, ರೂ.296, ರೂ.299, ರೂ.319, ರೂ.329, ರೂ.359 , ರೂ. 398, ರೂ.399, ರೂ.455, ರೂ.479, ರೂ.489, ರೂ.499. ರೂ.509, ರೂ.519, ರೂ.549, ರೂ.666, ರೂ.699, ರೂ.719, ರೂ.779, ರೂ.839, ರೂ.869, ರೂ.999, ರೂ.1499, ರೂ.1799, ರೂ.2999 ರೂ.3359 ಬಳಸುವ ಗ್ರಾಹಕರು ಇದಕ್ಕೆ ಅರ್ಹರಾಗಿರುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.