ETV Bharat / bharat

ಮುಂಬೈ ವಿಮಾನ ನಿಲ್ದಾಣದಲ್ಲಿ ವಾಯುದಟ್ಟಣೆ: ವಿಮಾನ ಕಾರ್ಯಾಚರಣೆ ಮಿತಿಗೊಳಿಸುವಂತೆ ಕೇಂದ್ರದ ಸೂಚನೆ - ಮುಂಬೈ ವಿಮಾನ ನಿಲ್ದಾಣ

ಮುಂಬೈ ವಿಮಾನ ನಿಲ್ದಾಣದಲ್ಲಿ ವಾಯುದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಸೂಚನೆ ನೀಡಿದೆ.

Mumbai Airport
ಮುಂಬೈ ವಿಮಾನ ನಿಲ್ದಾಣ
author img

By ETV Bharat Karnataka Team

Published : Feb 14, 2024, 7:38 AM IST

ನವದೆಹಲಿ: ಪೀಕ್​ ಅವಧಿಯಲ್ಲಿ ನಿಗದಿತವಲ್ಲದ ವಿಮಾನ ಕಾರ್ಯಾಚರಣೆ ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗುವ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಗದಿತವಲ್ಲದ ವಿಮಾನಗಳ ಹಾಗೂ ವ್ಯಾಪಾರ ಜೆಟ್​ಗಳ ಕಾರ್ಯಾಚರಣೆ ಮಿತಿಗೊಳಿಸುವಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.

ಮಂಗಳವಾರ ತಡವಾಗಿ ಹೇಳಿಕೆ ಬಿಡುಗಡೆಗೊಳಿಸಿರುವ ಸಚಿವಾಲಯ, "ಸಾಂಕ್ರಾಮಿಕ ರೋಗದ ನಂತರ ಹೆಚ್ಚುತ್ತಿರುವ ವಾಯು ಸಂಚಾರದ ಹೊರತಾಗಿಯೂ ವಿಮಾನ ನಿಲ್ದಾಣವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ವಿಮಾನ ನಿಲ್ದಾಣ ನಿರ್ವಾಹಕರು ಏರ್​ಲೈನ್​ಗಳಿಗೆ ಸ್ಲಾಟ್​ಗಳ ಮ್ಯಾನೇಜರ್​ ಆಗಿರುವುದರಿಂದ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು, ಏರ್​ ಟ್ರಾಫಿಕ್​ ಚಲನೆಯನ್ನು ಸುಗಮಗೊಳಿಸಲು ಹಾಗೂ ನಿಯಂತ್ರಿಸಲು ಪೂರ್ವಭಾವಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಾಗ್ಯೂ ವಿಮಾನ ನಿಲ್ದಾಣದ ನಿರ್ವಾಹಕರು ಅಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಸಚಿವಾಲಯ ಇದರಲ್ಲಿ ಮಧ್ಯಪ್ರವೇಶಿಸಬೇಕಾಗಿದೆ" ಎಂದು ಸಚಿವಾಲಯ ಹೇಳಿದೆ.

"ವಿಮಾನ ನಿಲ್ದಾಣವು ಅದರ ರನ್​ವೇಗಳಲ್ಲಿ ದಟ್ಟಣೆ ಸಮಸ್ಯೆ ಎದುರಿಸುತ್ತಿದೆ. ವಿಮಾನ ನಿಲ್ದಾಣದ ನಿರ್ವಾಹಕರ ಸೀಮಿತ ಅವಧಿಯಯಲ್ಲಿ ಅತಿಯಾದ ಸ್ಲಾಟ್​ಗಳ ವಿತರಣೆ ಮಾಡುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಜೊತೆಗೆ ಸ್ಲಾಟ್​ಗಳಿಲ್ಲದೇ ವಿಮಾನಗಳನ್ನು ಸುಮಾರು 40-60 ನಿಮಿಷಗಳ ಕಾಲ ನಗರದ ಮೇಲೆ ಸುಳಿದಾಡುವಂತೆ ಒತ್ತಾಯಿಸಲಾಗುತ್ತದೆ. ಒಂದು ವಿಮಾನವು ಗಂಟೆಗೆ ಸರಾಸರಿ 2000 ಕೆಜಿ ಇಂಧನವನ್ನು ಬಳಸುತ್ತದೆ ಎಂದು ಪರಿಗಣಿಸಿದರೆ, ಅಂತಹ ದೀರ್ಘ ಅವಧಿ ವಿಮಾನ ಗಾಳಿಯಲ್ಲಿ ವಿನಾಕಾರಣ ಸುತ್ತಾಡಿದರೆ, ವಿಮಾನಗಳಿಗೆ ಗಮನಾರ್ಹ ಇಂಧನ ವ್ಯರ್ಥವಾಗುತ್ತದೆ" ಎಂದು ಸಚಿವಾಲಯ ಹೇಳಿದೆ.

"ಇಂಧನ ವೆಚ್ಚದಲ್ಲಾಗುವ ಹೆಚ್ಚಳ ಅಂತಿಮವಾಗಿ ಪ್ರಯಾಣಿಕರಿಂದ ಭರಿಸಲ್ಪಡುತ್ತದೆ. ವಿಮಾನಗಳ ಅತಿಯಾದ ವಿಳಂಬ, ಪ್ರಯಾಣಿಕರ ಕಾಯುವಿಕೆಗೆ ಕಾರಣವಾಗುತ್ತದೆ. ಅತಿಯಾದ ವಿಳಂಬ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತದೆ."

"ಜನವರಿ 2 ರಂದು, ಏರ್ ನ್ಯಾವಿಗೇಷನ್ ಸರ್ವೀಸ್ ಪ್ರೊವೈಡರ್ ಆಗಿರುವ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI), ಹೈ-ಇಂಟೆನ್ಸಿಟಿ ರನ್‌ವೇ ಕಾರ್ಯಾಚರಣೆಗಳ ಅವಧಿಯಲ್ಲಿ ಪ್ರತಿ ಗಂಟೆಗೆ 46 ರಿಂದ 44 ರವರೆಗೆ ಏರ್ ಟ್ರಾಫಿಕ್ ಚಲನೆ ನಿರ್ಬಂಧಿಸಲು ವಿಮಾನ ನಿಲ್ದಾಣ ನಿರ್ವಾಹಕರಿಗೆ ನಿರ್ದೇಶನಗಳನ್ನು ನೀಡಿದೆ. ಹೈ-ಇಂಟೆನ್ಸಿಟಿ ರನ್‌ವೇ ಕಾರ್ಯಾಚರಣೆ ಅಲ್ಲದ ಅವಧಿಯಲ್ಲಿ, ವಾಯು ಸಂಚಾರ ಚಲನೆಯನ್ನು 44 ರಿಂದ 42 ಕ್ಕೆ ನಿರ್ಬಂಧಿಸಲಾಗಿದೆ."

"ಹೈ-ಇಂಟೆನ್ಸಿಟಿ ರನ್‌ವೇ ಕಾರ್ಯಾಚರಣೆ ಅವಧಿಯಲ್ಲಿ ಸಾಮಾನ್ಯ ವಾಯುಯಾನ ವಿಮಾನ ಕಾರ್ಯಾಚರಣೆಗಳನ್ನು ಸಹ ನಿರ್ಬಂಧಿಸಲಾಗಿದೆ. ಎಲ್ಲ ವಿಮಾನಯಾನ ಸಂಸ್ಥೆಗಳು ನಿಗದಿತ ನಿರ್ಬಂಧಗಳೊಂದಿಗೆ ಮಂಡಳಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು MIAL ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ನಿರೀಕ್ಷಿಸಲಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ವಾಯುಪ್ರದೇಶದ ಸುರಕ್ಷತೆ, ಕಾರ್ಯಾಚರಣೆಗಳ ದಕ್ಷತೆ ಮತ್ತು ಪ್ರಯಾಣಿಕರ ತೃಪ್ತಿಯ ದೃಷ್ಟಿಕೋನದಿಂದ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಹಾರಾಟದ ವೇಳೆ ಕಿತ್ತುಹೋದ ವಿಮಾನದ ಹಿಂಬಾಗಿಲು: ತರ್ತು ಭೂಸ್ಪರ್ಶ ಮಾಡಿದ ಲಘು ವಿಮಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.