ETV Bharat / bharat

ಜಪಾನ್‌ನಿಂದ ರಕ್ತ ತರಿಸಿಕೊಂಡು ತಾಯಿ, ಮಗುವಿನ ಪ್ರಾಣ ಉಳಿಸಿದ ದೆಹಲಿ ಏಮ್ಸ್‌ ವೈದ್ಯರು - AIIMS Hospital Delhi

ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರ ಸೂಕ್ತ ಚಿಕಿತ್ಸೆಯ ಫಲವಾಗಿ ತಾಯಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

DELHI AIIMS HOSPITAL
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 13, 2024, 2:56 PM IST

ನವದೆಹಲಿ: ಅಂದಾಜು 6,000 ಕಿಲೋ ಮೀಟರ್ ದೂರದಲ್ಲಿರುವ ಜಪಾನ್ ದೇಶದ ರಾಜಧಾನಿ ಟೋಕಿಯೊದಿಂದ ರಕ್ತ ತರಿಸಿ ದೆಹಲಿಯ ಏಮ್ಸ್‌ ವೈದ್ಯರು ಸಾವಿನಂಚಿನಲ್ಲಿದ್ದ ನವಜಾತ ಶಿಶುವಿನ ಜೀವ ಉಳಿಸಿದ್ದಾರೆ. ಸುಮಾರು 8 ವಿಫಲ ಪ್ರಯತ್ನಗಳ ನಂತರ 9ನೇ ಪ್ರಯತ್ನದಲ್ಲಿ ತಾಯಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಘಟನೆಯ ವಿವರ: ಹರಿಯಾಣದ ಬಡ ಕುಟುಂಬದ ಪೂನಂ ಎಂಬವರು ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ಮಾಡಿದ ವೈದ್ಯರಿಗೆ ಅಚ್ಚರಿಯಾಗಿತ್ತು. ಒ-ಡಿ ಫಿನೋಟೈಪ್ ಎಂಬ ಅಪರೂಪದ ರಕ್ತದ ಕೊರತೆಯಿಂದ ಮಗು ಬಳಲುತ್ತಿರುವುದು ಕಂಡುಬಂದಿತ್ತು. ಹೊಟ್ಟೆಯಲ್ಲಿದ್ದ ಮಗುವಿನ ಜೊತೆ ತಾಯಿಯ ಜೀವಕ್ಕೂ ಅಪಾಯವಿತ್ತು. ಇದಕ್ಕಾಗಿ ಅಪರೂಪದ ಗುಂಪಿನ ರಕ್ತದ ಅವಶ್ಯಕತೆ ಇತ್ತು. ಆದರೆ ರಕ್ತ ಭಾರತದಲ್ಲಿ ಲಭ್ಯವಿರಲಿಲ್ಲ.

ತಕ್ಷಣ ಜಪಾನ್ ದೇಶವನ್ನು ಸಂಪರ್ಕಿಸಿದ ವೈದ್ಯರು, ಟೋಕಿಯೊದಿಂದ ನಾಲ್ಕು ಯೂನಿಟ್ ರಕ್ತ ತರಿಸಿಕೊಂಡಿದ್ದಾರೆ. ಕೇವಲ ಎರಡೇ ದಿನದಲ್ಲಿ ಇದಕ್ಕೆ ಬೇಕಿರುವ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಲಾಗಿತ್ತು. ಗರ್ಭದೊಳಗಿದ್ದ ಮಗುವಿಗೆ ರಕ್ತ ಪೂರೈಸಲಾಯಿತು. ಇದೀಗ ಗರ್ಭಿಣಿ, ಮಗುವಿನ ಜನ್ಮ ನೀಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ತಿಳಿಸಿದೆ.

ಈ ಮಹಿಳೆಗೆ ಮದುವೆಯಾಗಿ 5 ವರ್ಷಗಳಾಗಿವೆ. ಇಲ್ಲಿಯವರೆಗೆ 8 ಬಾರಿ ಗರ್ಭಿಣಿಯಾಗಿದ್ದರು. ಆದರೆ ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ಹಲವು ವೈದ್ಯಕೀಯ ತೊಡಕುಗಳಿಂದ ಹೆರಿಗೆ ವೇಳೆ ಸಾಕಷ್ಟು ತೊಂದರೆ ಅನುಭವಿಸಿದ್ದರು. ಇದೀಗ 9ನೇ ಪ್ರಯತ್ನದಲ್ಲಿ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನೂ ಓದಿ: ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ?; ಇದು ಕೇವಲ ಸಕ್ಕರೆ ಕಾಯಿಲೆ ಲಕ್ಷಣ ಮಾತ್ರವಲ್ಲ, ಅಪಾಯಕಾರಿ ರೋಗದ ಲಕ್ಷಣವೂ ಹೌದು - HIGH BLOOD PRESSURE SYMPTOMS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.