ಅಲ್ವಾರ್ (ರಾಜಸ್ಥಾನ): ರಾಜಸ್ಥಾನದಲ್ಲಿ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಲ್ವಾರ್‌ನ 23 ವರ್ಷದ ಅಗ್ನಿವೀರ್ ಯೋಧನನ್ನು ಉತ್ತರಾಖಂಡದ ಸೇನಾ ನೆಲೆಯಿಂದ ಬಂಧಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಥುಮಾರ್ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಆದರೆ, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನ ಅನ್ವಯ ಜುಲೈ 12ರಂದು ಎಫ್‌ಐಆರ್ ದಾಖಲಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಮನವಿ ಮಾಡಿದ್ದರು. ಸೇನಾ ಅಧಿಕಾರಿಗಳ ನೆರವಿನೊಂದಿಗೆ ಭಾವೇಶ್ ಅಲಿಯಾಸ್ ಸೌರಭ್ ನನ್ನು ಬಂಧಿಸಲಾಗಿದೆ ಎಂದು ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಆನಂದ್ ಶರ್ಮಾ ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಗಮನಾರ್ಹ ಸಂಗತಿ ಎಂದರೆ, ಘೋರ ಅಪರಾಧ ಮಾಡಿದ ನಂತರ ಭವೇಶ್ ಉತ್ತರಾಖಂಡದ ಸೇನಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದನು. ಆತನ ಮುಖದಲ್ಲಿ ಯಾವುದೇ ಅಪರಾಧ ಅಥವಾ ಭಯ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಜವಾಗಿ ನಡೆದಿದ್ದಾದರು ಏನು?: ಪೊಲೀಸರ ಪ್ರಕಾರ, 16 ವರ್ಷದ ಬಾಲಕಿ ತನ್ನ ತಾಯಿಯ ಅಜ್ಜಿಯ ಮನೆಯಲ್ಲಿದ್ದಾಗ ಬಾಲ್ಯದಿಂದಲೂ ಕಥುಮಾರ್‌ನ ಹಳ್ಳಿಯಲ್ಲಿ ಓದುತ್ತಿದ್ದಳು. ಅವರ ಸಂಬಂಧಿ ಭಾವೇಶ್ ಅಲಿಯಾಸ್ ಸೌರಭ್ ಜಟ್ ಆ ಗ್ರಾಮಕ್ಕೆ ಆಗಾಗ್ಗೆ ಬರುತ್ತಿದ್ದನು. ಆಗ ಬಾಲಕಿಯೊಂದಿಗೆ ಭಾವೇಶ್ ಸ್ನೇಹ ಬೆಳೆಸಿಕೊಂಡಿದ್ದನು. ಆರೋಪಿ ಯುವಕ, ಅಪ್ರಾಪ್ತ ಬಾಲಕಿಯ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಅವಳೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದನು.
ಆಕೆಯ 12ನೇ ತರಗತಿಯ ಪರೀಕ್ಷೆಗಳು ಮುಗಿದ ನಂತರ, ರಜೆ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದಳು. ಜುಲೈ 14 ಮತ್ತು 15ರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಭಾವೇಶ್ ಆಕೆಯನ್ನು ದೂರದ ಕಾಡಿಗೆ ಬರುವಂತೆ ದೂರವಾಣಿ ಕರೆ ಮಾಡಿ ಆಮಿಷ ಒಡ್ಡಿದ್ದನು. ಇದಾದ ನಂತರ, ಭಾವೇಶ್ ಮತ್ತು ಇತರ ಐವರು ಸಹಚರರು, ಕಾಡಿಗೆ ಬಂದ ಬಾಲಕಿಗೆ ಬಂದೂಕು ತೋರಿಸಿ ಆಕೆಯ ಮೇಲೆ ಸಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೆ ಆಕೆಯನ್ನು ಮನಬಂದಂತೆ ಕೆಟ್ಟದಾಗಿ ಹಲ್ಲೆ ಮಾಡಿದ್ದಾರೆ.
ಘಟನೆಯ ಬಗ್ಗೆ ಯಾರೊಂದಿಗಾದರೂ ಹೇಳಿದರೆ, ಆಕೆ ಮತ್ತು ಕುಟುಂಬ ಸದಸ್ಯರನ್ನು ಕೊಲೆ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಪ್ರಕರಣದ ವರದಿಯನ್ನು ಸೇನೆಗೆ ಕಳುಹಿಸಿ ನಂತರ ಭವೇಶ್ ಬಂಧಿಸಲು ಸಾಧ್ಯವಾಯಿತು. ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ನಾಪತ್ತೆಯಾಗಿರುವ ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್‌ಪಿ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಸಹಪಾಠಿಯನ್ನು ಮೂರನೇ ಮಹಡಿಯಿಂದ ತಳ್ಳಿದ ಎಂಬಿಬಿಎಸ್ ವಿದ್ಯಾರ್ಥಿ; ಯುವತಿ ಸಾವು - MBBS student died