ETV Bharat / bharat

ದಪ್ಪದ ಜೊತೆಗೆ ಅಗ್ಗದ ಬೆಲೆಯಲ್ಲಿ ಹಾಲು ಹುಡುಕುತ್ತಿರುವಿರಾ?: ಹಾಗಾದರೆ ಕಲಬೆರಕೆ ಹಾಲಿನ ಬಗ್ಗೆ ಇರಲಿ ಎಚ್ಚರಿಕೆ - ADULTERATED MILK

ಮಹಾನಗರಗಳಲ್ಲಿ ನಕಲಿ ಹಾಲಿನ ಕೇಂದ್ರಗಳ ಹಾವಳಿ - ರಾಜಧಾನಿಗೆ ಬರುತ್ತಿದೆ ಸಾವಿರಾರು ಲೀಟರ್​​ ಕಲಬೆರಕೆ ಹಾಲು - ಸ್ವಚ್ಛ ಭಾರತ ಮತ್ತು ಮೇಕ್​ ಇನ್​ ಇಂಡಿಯಾ ಲೋಗೊಗಳೊಂದಿಗೆ ಮಾರಾಟ

adulterated-milk-units-busted-at-peerzadiguda-in-hyderabad-telangana-news
ದಪ್ಪದ ಜೊತೆಗೆ ಅಗ್ಗದ ಬೆಲೆಯಲ್ಲಿ ಹಾಲು ಹುಡುಕುತ್ತಿರುವಿರಾ?: ಹಾಗಾದರೆ ಕಲಬೆರಕೆ ಹಾಲಿನ ಬಗ್ಗೆ ಇರಲಿ ಎಚ್ಚರಿಕೆ (ETV Bharat)
author img

By ETV Bharat Karnataka Team

Published : Oct 18, 2024, 9:49 AM IST

ಹೈದರಾಬಾದ್: ಅಂಬೆಗಾಲಿಡುವ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೆ ಎಲ್ಲರೂ ಸೇವಿಸುವ ಪೌಷ್ಟಿಕ ಆಹಾರ ಎಂದರೆ ಅದು ಹಾಲು. ಚಹಾ ಅಥವಾ ಕಾಫಿಯಿಂದ ಹಿಡಿದು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದವರೆಗೆ ನಾವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುತ್ತೇವೆ. ಚಿಕ್ಕ ಮಕ್ಕಳಿಗೆ ಹಾಲು ಕುಡಿಸಿಯೇ ಕುಡಿಸುತ್ತೇವೆ. ಯಾವುದೇ ಸಿಹಿ ಖಾದ್ಯ ತಯಾರಿಸಲು ಅಥವಾ ಯಾವುದೇ ಶುಭ ಕಾರ್ಯಗಳಿಗೆ ಮುಖ್ಯವಾಗಿ ಹಾಲು ಬಳಕೆ ಮಾಡುತ್ತೇವೆ.

ಆದರೆ, ಅಂತಹ ಹಾಲು ಈಗ ಕಲಬೆರಕೆಯಾಗುತ್ತಿದೆ. ಜನರ ದೌರ್ಬಲ್ಯವನ್ನು ಬಳಸಿಕೊಂಡು ಬ್ರಾಂಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ಪ್ಯಾಕೆಟ್ ರೂಪದಲ್ಲಿ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಇವುಗಳನ್ನು ಕುಡಿದವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೈದರಾಬಾದಿನಲ್ಲಿ ಇಂತಹ ಅನೇಕ ಕಲಬೆರೆಕೆ ಹಾಲು ಮಾರಾಟ ಮಾಡುವ ಜನರಿದ್ದಾರೆ. ಈಗ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಹೇಗೆಲ್ಲ ಹಾಲು ಕಲಬೆರಕೆಯಾಗುತ್ತಿದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಕಲಬೆರಕೆ ಹಾಲು ತಯಾರಿಸುವುದು ಹೇಗೆ?: ಕಲಬೆರಕೆ ಹಾಲನ್ನು ತಯಾರಿಸುವಾಗ ಸುವಾಸನೆ ಮತ್ತು ದಪ್ಪವಾಗಿರುವಂತೆ ತೋರಿಸಲು, ಯಾರಿಗೂ ಅನುಮಾನ ಬಾರದಂತೆ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ವಾಸನೆಗಾಗಿ ಸ್ವಲ್ಪ ಹಾಲಿನ ಪುಡಿಯನ್ನು ಬಳಸಲಾಗುತ್ತದೆ. ಮತ್ತು ಅದರೊಂದಿಗೆ ಗ್ಲೂಕೋಸ್ ದ್ರಾವಣ, ಚಿರೋಟಿ ರವಾ, ಆಮ್ಲೀಯ ಆಮ್ಲ, ತಾಳೆ ಎಣ್ಣೆ, ಮಾರ್ಗರೀನ್ ಮುಂತಾದ ಪದಾರ್ಥಗಳನ್ನು ಬೆರೆಸಲಾಗುತ್ತದೆ. ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಪ್ರತಿದಿನ ಇಂತಹ ಸಾವಿರಾರು ಲೀಟರ್​ ನಕಲಿ ಹಾಲು ಸರಬರಾಜಾಗುತ್ತಿದೆ.

ಇದನ್ನು ಓದಿ: ಖಲಿಸ್ತಾನಿ ಉಗ್ರ ಪನ್ನುನ್​ ಹತ್ಯೆ ಯತ್ನ ಪ್ರಕರಣ: ಅಮೆರಿಕದ ಮಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಂಡ ಭಾರತ

ಕೆಲ ನಕಲಿ ಹಾಲಿನ ಕೇಂದ್ರಗಳ ಮೇಲೆ ಪೊಲೀಸರ ದಾಳಿ: ನಗರದ ಹಲವು ಟೀ ಸ್ಟಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ವೀಟ್ ಹೌಸ್‌ಗಳಿಗೆ ಗಜೇಂದರ್‌ಸಿಂಗ್ ಎಂಬ ಉದ್ಯಮಿ ಈ ನಕಲಿ ಹಾಲನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಾಲಿನ ಹೊರತಾಗಿ ಮೊಸರು, ಬೆಣ್ಣೆ, ಐಸ್ ಕ್ರೀಂ ಕೂಡ ವಿತರಣೆಯಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ SWOT ಪೊಲೀಸರು ಆಶ್ಚರ್ಯಚಕಿತರಾಗಿದ್ದಾರೆ. ಬುಧವಾರ ವಿಶೇಷ ಕಾರ್ಯಾಚರಣೆ ತಂಡದ ಎಎಸ್‌ಐ ಮಲ್ಲೇಶ್ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ವಂಚನೆಯನ್ನು ಬಯಲಿಗೆ ಎಳೆದಿದ್ದಾರೆ.

ಹೈದರಾಬಾದ್‌ನಲ್ಲಿ ಕಲಬೆರಕೆ ಹಾಲಿನ ಘಟಕಗಳಿರುವ ಬಗ್ಗೆ ದೂರು: ಸಾರ್ವಜನಿಕ ವಲಯದ ಉದ್ಯಮವಾಗಿರುವ ವಿಜಯ ಡೇರಿ ಹಾಗೂ ಇತರ ಸಹಕಾರಿ ಹಾಗೂ ಖಾಸಗಿ ಡೇರಿಗಳು ಆಗಾಗ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡುತ್ತಿವೆ. ಹೆಸರಾಂತ ಕಂಪನಿಗಳ ಹೆಸರಿನಲ್ಲಿ ಪ್ಯಾಕೆಟ್‌ಗಳನ್ನು ಸೃಷ್ಟಿಸಿ ನಕಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ವಿಜಯ ಡೈರಿ ಹೆಸರಿನಲ್ಲಿ ಕೆಲ ನಕಲಿ ಕಂಪನಿಗಳು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿವೆ ಎಂದು ಸಂಸ್ಥೆ ಐದಾರು ಬಾರಿ ದೂರು ನೀಡಿದೆ. ಆ ದೂರಿನಲ್ಲಿ ಯಾವ್ಯಾವ ಸಂಘಟನೆಗಳು ಅಕ್ರಮ ನಡೆಸುತ್ತಿವೆ ಎಂದು ಸ್ಪಷ್ಟವಾಗಿ ನಮೂದಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ನಕಲಿ ದಂಧೆ ಯಥೇಚ್ಛವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೈದರಾಬಾದ್ ನಗರದ ಹಲವೆಡೆ ಹಾಗೂ ರಾಜಧಾನಿಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಈ ನಕಲಿ ದಂಧೆ ಹೆಚ್ಚಾಗಿ ಕಂಡುಬರುತ್ತಿದೆ ಎನ್ನಲಾಗಿದೆ.

ಹೈದರಾಬಾದ್‌ಗೆ ನಿತ್ಯ ಬೇಕಿದೆ 30 ಲಕ್ಷ ಲೀಟರ್​ ಹಾಲು: ಗ್ರೇಟರ್ ಹೈದರಾಬಾದ್‌ಗೆ ನಿತ್ಯ ಸುಮಾರು 30 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಸುಮಾರು ಒಂದು ಕೋಟಿ ಜನಸಂಖ್ಯೆಗೆ ಸಹಕಾರಿ ಡೈರಿಗಳಿಂದ ಸುಮಾರು 10 ಲಕ್ಷ ಲೀಟರ್ ಮತ್ತು ಖಾಸಗಿ ಡೈರಿಗಳಿಂದ ಸುಮಾರು 18 ರಿಂದ 19 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದೆ. ಪ್ರಮುಖವಾಗಿ ಮೇಡ್ಚಲ್ ಮಲ್ಕಾಜಿಗಿರಿ, ರಂಗಾರೆಡ್ಡಿ, ಯಾದಾದ್ರಿ ಭುವನಗಿರಿ ಮತ್ತಿತರ ಜಿಲ್ಲೆಗಳಲ್ಲಿ ಕಲಬೆರಕೆ ಹಾಲಿನ ಮಾರಾಟ ಜೋರಾಗಿ ನಡೆಯುತ್ತಿದೆ ಎಂಬ ಆರೋಪ ಹಾಗೂ ದೂರುಗಳು ಹೆಚ್ಚಾಗಿ ಬಂದಿವೆ.

ಇದನ್ನು ಓದಿ: ದೆಹಲಿ ನಾಯಕರು ಚನ್ನಪಟ್ಟಣ ಅಭ್ಯರ್ಥಿ ತೀರ್ಮಾನ ನನಗೆ ಬಿಟ್ಟಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.