ರಾಯಪುರ, ಛತ್ತೀಸ್ಗಢ: ಷೇರು ವಹಿವಾಟಿನ ಹೆಸರಿನಲ್ಲಿ ವಂಚನೆ ನಡೆಸಿದ ಪ್ರಕರಣದಲ್ಲಿ ಸೈಬರ್ ಠಾಣಾ ರಾಯ್‌ಪುರ ತಂಡ ಭರ್ಜರಿ ಬೇಟೆಯಾಡಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಪೊಲೀಸರು ಆರೋಪಿ ಪಿ ಹರಿ ಕಿಶೋರ್‌ನನ್ನು ಚೆನ್ನೈನಲ್ಲಿ ಬಂಧಿಸಿದ್ದಾರೆ. ಪೊಲೀಸರು ಆತನ ಬ್ಯಾಂಕ್ ಖಾತೆಯಲ್ಲಿದ್ದ 57 ಲಕ್ಷ ರೂ.ಗಳನ್ನು ಲಾಕ್ ಕೂಡಾ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಐಟಿ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ರಾಯಪುರ ಐಜಿ ಅಮರೇಶ್ ಮಿಶ್ರಾ ಹೇಳಿದ್ದಿಷ್ಟು: ‘ರಾಯ್‌ಪುರ ರೇಂಜ್ ಸೈಬರ್ ಠಾಣಾದಲ್ಲಿ ಷೇರು ವಹಿವಾಟಿನ ಲಾಭದ ಹೆಸರಿನಲ್ಲಿ ತಮಗೆ 88 ಲಕ್ಷ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡು ನಮ್ಮ ತಂಡ ಆರೋಪಿ ಪಿ ಹರಿ ಕಿಶೋರ್ ವಿರುದ್ಧ ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿತ್ತು. ಅಷ್ಟೇ ಅಲ್ಲ ಆತ ಇರುವ ಸ್ಥಳವನ್ನು ಚೆನ್ನೈನ ಕಾಂಜಿಪುರಂನಲ್ಲಿ ಪತ್ತೆಹಚ್ಚಿದ ನಂತರ ರಾಯಪುರ ಸೈಬರ್ ಠಾಣಾ ಪೊಲೀಸರ ತಂಡವು ತಮಿಳುನಾಡಿಗೆ ತೆರಳಿತ್ತು. ಅಲ್ಲಿ ಖಚಿತ ಮಾಹಿತಿ ಆಧಾರದ ಮೇಲೆ ಆರೋಪಿಯ ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ವಹಿವಾಟುಗಳು ಮತ್ತು ಐಪಿ ವಿಳಾಸವನ್ನು ಪಡೆದು, ಆ ಬಳಿಕ ಆತನ ಮೇಲೆ ದಾಳಿ ನಡೆಸಿ ಆರೋಪಿಯನ್ನು ಕಾಂಚೀಪುರಂ ಪಲ್ಲಾವರಂನಲ್ಲಿ ಬಂಧಿಸಲಾಗಿದೆ." ಎಂದು ರಾಯಪುರ ರೇಂಜ್ ಐಜಿ ಅಮರೇಶ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಕರ್ನಾಟಕದಲ್ಲಿಯೂ ಪ್ರಕರಣ ದಾಖಲು: ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕದ ಬೆಂಗಳೂರಿನಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಬಿಹಾರದ ಗನಿಯಾರಿ ಜಿಲ್ಲೆಯ ಮುಜಾಫರ್‌ಪುರ ನಿವಾಸಿ. ಆರೋಪಿಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ತನ್ನ ಇತರ ಸಹಚರರೊಂದಿಗೆ ಸಿಮ್ ಕಾರ್ಡ್‌ಗಳನ್ನು ಪಡೆದಿದ್ದಲ್ಲದೇ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಆರೋಗ್ಯ ಕವಚ ಸಿಬ್ಬಂದಿಗೆ ವೇತನ ವಿಚಾರ: ವಿಚಾರಣೆ ಗುರುವಾರಕ್ಕೆ ಮುಂದೂಡಿದ ಹೈಕೋರ್ಟ್ - High Court adjourned the hearing
ಕಲಬುರಗಿ - ಎಲೆಕ್ಟ್ರಿಕ್ ಬೈಕ್ ಕೈಕೊಟ್ಟಿತೆಂದು ಆಕ್ರೋಶ: ಶೋರೂಂಗೆ ಬೆಂಕಿ ಇಟ್ಟ ಗ್ರಾಹಕ - Fire to Bike Showroom