ಅಹಮದಾಬಾದ್ (ಗುಜರಾತ್): ಜೀವನ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿರುವಾಗ ಕೆಲವೊಂದು ಹಿನ್ನಡೆಗಳು ಎದುರಾಗುತ್ತವೆ ತಡೆಯೊಡ್ಡುತ್ತವೆ. ಇಂತಹವುಗಳಿಗೆ ಅಂಜದೆ ನಾವು ಧೈರ್ಯವಾಗಿ ನಿಂತರೆ ಮಾತ್ರ ಜೀವನದ ಬಂಡಿಯನ್ನು ಎಳೆಯಬಹುದು. ಪತಿ ಅನಾರೋಗ್ಯಕ್ಕೆ ಒಳಗಾದಾಗ ಮಹಿಳೆಯು ಕುಟುಂಬದ ಭಾರವನ್ನು ಹೊತ್ತು ಸಾಗುತ್ತಿದ್ದಾರೆ. ಕಷ್ಟಗಳಿಗೆ ಎದೆಗುಂದದೆ ನಗುನಗುತ್ತಲೇ ಸವಾಲುಗಳನ್ನು ಸ್ವೀಕರಿಸಿದರು. ಬೈಸಿಕಲ್ನ ಹ್ಯಾಂಡಲ್ ಅನ್ನು ಸಹ ಹಿಡಿಯಲು ಆಗದ ಆಕೆ ಈಗ ಏಕಾಏಕಿ ಕಾರಿನ ಸ್ಟೀರಿಂಗ್ ಹಿಡಿದು ಕುಟುಂಬದ ರಥವನ್ನು ಎಳೆಯುತ್ತಿದ್ದಾರೆ.
ನಡೆದಿದ್ದೇನು?: ಗುಜರಾತ್‌ನ ಅಹಮದಾಬಾದ್‌ನ ವ್ಯಕ್ತಿಯೊಬ್ಬರು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಂದ ಸಂಬಳದಲ್ಲಿ ತಮ್ಮ ಕುಟುಂಬದ ಜವಾಬ್ದಾರಿಯನ್ನು ಸುಖವಾಗಿಯೇ ನಿಭಾಯಿಸುತ್ತಿದ್ದರು. ಆದರೆ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈಗ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಇದರಿಂದ ಅವರು ಸಂಸಾರ ಸಾಗಿಸಲು ತುಂಬಾ ಕಷ್ಟವಾಯಿತು. ಇನ್ನು ಗಂಡನ ಸ್ಥಿತಿ ಅರಿತ ಪತ್ನಿ ಅರ್ಚನಾ ಪಟೇಲ್ ಅವರು ಕ್ಯಾಬ್ ಓಡಿಸಲು ನಿರ್ಧರಿಸಿದ್ದರು. ಅವರು ಡ್ರೈವಿಂಗ್ ಕಲಿತು ಕೆಲವೇ ದಿನಗಳಲ್ಲಿ ಲೈಸೆನ್ಸ್ ಸಹ ಪಡೆದರು. ಒಂದು ದಿನ ತನ್ನ ಕ್ಯಾಬ್ ಬುಕ್ ಮಾಡಿದ ಗ್ರಾಹಕರೊಬ್ಬರು ಆ ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಗ ಅವರ ಜೀವನ ಕಥೆ ಜಗತ್ತಿಗೆ ತಿಳಿಯಿತು.
ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರು ತಮ್ಮ ಕುಟುಂಬವನ್ನು ಪೋಷಿಸಲು ಆಟೋ ಮತ್ತು ರಿಕ್ಷಾಗಳನ್ನು ಓಡಿಸುವುದನ್ನು ನಾವು ನೋಡುತ್ತೇವೆ. ಇದರಲ್ಲಿ ಅಂತಾದೇನಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ, ಕಷ್ಟಗಳು ಅವರನ್ನು ಕಾಡುತ್ತಿರುವಾಗ ಆ ಸಮಸ್ಯೆಗಳನ್ನು ಎದೆಗುಂದದೆ ಧೈರ್ಯದಿಂದ ಎದುರಿಸುತ್ತಾರೆ. ಇದು ನಿಜಕ್ಕೂ ದೊಡ್ಡ ವಿಷಯ. ಮಹಿಳೆಯರಿಗೆ ಚಾಲಕಿ ಅರ್ಚನಾ ಅವರ ಮಾದರಿ ಜೀವ ಉದಾಹರಣೆ ಆಗಿದೆ. ದುರದೃಷ್ಟವನ್ನು ಎದುರಿಸಿ ಮುಂದೆ ಸಾಗುತ್ತಿರುವ ವ್ಯಕ್ತಿಯನ್ನು ಭೇಟಿಯಾಗಲು ನಿಜವಾಗಿಯೂ ನನಗೆ ಸಂತೋಷವಾಗಿದೆ ಎಂದು ಆ ಕ್ಯಾಬ್ ಗ್ರಾಹಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಆತ ಮಾಡಿರುವ ಪೋಸ್ಟ್‌ಗೆ ಆಕೆಯ ಫೋಟೋವನ್ನು ಲಗತ್ತಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿತು."ಅವಳು ಸೂಪರ್ ವುಮನ್", "ನಿಮ್ಮ ಕಥೆ ಅನೇಕ ಮಹಿಳೆಯರಿಗೆ ಸ್ಫೂರ್ತಿ", "ಕಷ್ಟಗಳನ್ನು ನಿರ್ಭಯವಾಗಿ ಎದುರಿಸಬಲ್ಲಳು ಎಂದು ಅವಳು ಸಾಬೀತುಪಡಿಸಿದ್ದಾಳೆ", "ನಿಮ್ಮ ಸಂಕಟಕ್ಕೆ ಸೆಲ್ಯೂಟ್, ನೀವು ಜೀವನದಲ್ಲಿ ಉನ್ನತ ಮಟ್ಟಕ್ಕೇರುತ್ತೀರಿ ಎಂದು ನಾವು ಭಾವಿಸುತ್ತೇವೆ" ಎಂದು ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
ಓದಿ: ದಾನಕ್ಕಾಗಿ ಮಿಡಿಯುತ್ತಿರುವ 283 ಜನರ ಹೃದಯ: ಮರಣದ ನಂತರವೂ ಜೀವಿಸಲು ಇಲ್ಲಿದೆ ಮಾರ್ಗ! - organ donation