ಚಿನ್ನದ ಎಳೆಯಲ್ಲಿ ಸೀರೆ ನೇಯ್ದ ನೇಕಾರ: ಉದ್ಯಮಿ ಮಗಳ ಮದುವೆಗೆ ₹18 ಲಕ್ಷ ಚಿನ್ನದ ಸೀರೆ ತಯಾರಿ - GOLDEN SAREE - GOLDEN SAREE
ಸುಮಾರು 10 ರಿಂದ 12 ದಿನಗಳಲ್ಲಿ 200 ಗ್ರಾಮ ಚಿನ್ನದಿಂದ ನೂಲುಗಳನ್ನು ತಯಾರಿಸಿ, ಐದೂವರೆ ಮೀಟರ್ ಉದ್ದದ ಚಿನ್ನದ ಸೀರೆಯನ್ನು ಹೈದರಾಬಾದ್ನ ನೇಕಾರ ವಿಜಯ್ ಕುಮಾರ್ ನೇಯ್ದಿದ್ದಾರೆ.
Published : Sep 29, 2024, 4:34 PM IST
|Updated : Sep 29, 2024, 6:04 PM IST
ಹೈದರಾಬಾದ್: ತೆಲಂಗಾಣ ರಾಜ್ಯವು ಅನೇಕ ಜಾನಪದ ಕಲೆಗಳು ಮತ್ತು ಕರಕುಶಲ ವಸ್ತುಗಳಿಗೆ ನೆಲೆಯಾಗಿದೆ. ರಾಜ್ಯದ ಕೈಮಗ್ಗ ಉದ್ಯಮ ಬಹಳ ಪ್ರಸಿದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಕೈಮಗ್ಗದಲ್ಲಿ ಚಿನ್ನದ ಸೀರೆಯನ್ನು ನೇಯುವ ಮೂಲಕ ಹೈದರಾಬಾದ್ನ ನೇಕಾರರೊಬ್ಬರು ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಸಿರಿಸಿಲ್ಲ ಪಟ್ಟಣದ ಕೈಮಗ್ಗ ಕಲಾವಿದ ನಲ್ಲ ವಿಜಯ್ ಕುಮಾರ್ ಅವರು 200 ಗ್ರಾಂ ಚಿನ್ನದಿಂದ ಚಿನ್ನದ ಸೀರೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ತಮ್ಮ ಮಗಳ ಮದುವೆಗೆ ಚಿನ್ನದ ಸೀರೆ ಕೊಡಿಸಲು ಆರು ತಿಂಗಳ ಹಿಂದೆ ನಲ್ಲ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದ್ದರು. ಚಿನ್ನದ ನೂಲು ತೆಗೆದು ಹೊಸ ವಿನ್ಯಾಸವನ್ನು ರಚಿಸಲು ಅವರು 10 ರಿಂದ 12 ದಿನಗಳನ್ನು ತೆಗೆದುಕೊಂಡಿದ್ದಾರೆ.
200 ಗ್ರಾಂ ಚಿನ್ನ ಬಳಕೆ; ಈ ಚಿನ್ನದ ಸೀರೆ ಐದೂವರೆ ಮೀಟರ್ ಉದ್ದ, 49 ಇಂಚು ಅಗಲ, 900 ಗ್ರಾಂ ತೂಕವಿದೆ. ಅ.17ರಂದು ನಡೆಯಲಿರುವ ವ್ಯಾಪಾರಿಯ ಮಗಳ ಮದುವೆಗಾಗಿ ಈ ಸೀರೆಯನ್ನು ತಯಾರಿಸಲಾಗಿದೆ. ಈ ಸೀರೆಯಲ್ಲಿ 200 ಗ್ರಾಂ ಚಿನ್ನವನ್ನು ಬಳಸಲಾಗಿದೆ. ಎಲ್ಲಾ ಸೇರಿ 18 ಲಕ್ಷ ರೂಪಾಯಿ ವೆಚ್ಚವಾಗಿದೆ. ಚಿನ್ನದಿಂದ ಸೀರೆಯನ್ನು ತಯಾರಿಸುತ್ತಿರುವುದು ಹೆಮ್ಮೆಯ ಸಂಗತಿ" ಎಂದು ವಿಜಯ್ ಕುಮಾರ್ ಖುಷಿ ಹಂಚಿಕೊಂಡರು.
ವಿಜಯ್ ಕುಮಾರ್ ಹಿನ್ನೆಲೆ: ತಂದೆಯ ಪರಂಪರೆಯನ್ನೇ ಮುಂದುವರಿಸಿಕೊಂಡು ಬಂದಿರುವ ನಲ್ಲ ವಿಜಯ್ ಕುಮಾರ್ ಅವರು ಚಿನ್ನದ ಸೀರೆಗಳನ್ನು ಮಾತ್ರವಲ್ಲದೆ ಬಣ್ಣ ಬದಲಾಯಿಸುವ 3ಡಿ ಸೀರೆಯನ್ನೂ ವಿನ್ಯಾಸಗೊಳಿಸಿದ್ದಾರೆ. ಶ್ರೀರಾಮನವಮಿಯ ಸಂದರ್ಭದಲ್ಲಿ, ಭದ್ರಾಚಲಂನಲ್ಲಿ ಸೀತಾ ದೇವಿಗೆ ಬಣ್ಣಗಳನ್ನು ಬದಲಾಯಿಸುವ ಮೂರು ಆಯಾಮದ ಸೀರೆಯನ್ನು ವಿನ್ಯಾಸಗೊಳಿಸಲಾಗಿದೆ. ಈ 3ಡಿ ಸೀರೆಯು 5.5 ಮೀಟರ್ ಉದ್ದ ಮತ್ತು 48 ಇಂಚು ಅಗಲ ಮತ್ತು 600 ಗ್ರಾಂ ತೂಕವಿದೆ. 18 ದಿನ ಕಷ್ಟಪಟ್ಟು ಚಿನ್ನ, ಬೆಳ್ಳಿ, ಕೆಂಪು ಬಣ್ಣಗಳಿಂದ ಮಾಡಿದ್ದೇನೆ. 48 ಸಾವಿರ ರೂ. ವೆಚ್ಚವಾಗಿದೆ ಎಂದು ವಿಜಯ್ ಹೇಳಿದರು.
ಈ ಹಿಂದೆ ಬೆಂಕಿ ಪೊಟ್ಟಣದೊಳಗೆ ಮಡಚಿಡುವಂತಹ ಸೀರೆ, ಹಾಗೂ ಉಂಗುರದ ಒಳಗೆ ಹಾಕಿ ತೆಗೆಯಬಹುದಾದಂತ ತೆಳುವಾದ ಸೀರೆಯನ್ನು ನೇಯ್ದು ಪ್ರಶಂಸೆಗೆ ಪಾತ್ರರಾಗಿದ್ದರು ವಿಜಯ್ ಕುಮಾರ್.