ದ್ವಾರಕಾ (ಗುಜರಾತ್): ಪ್ರಸ್ತುತ ದ್ವಾರಕಾ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಜಿಲ್ಲಾ ಕೇಂದ್ರವಾದ ಖಂಭಾಲಿಯಾದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ನಗರದ ಮೇನ್ ಬಜಾರ್ ಬಳಿಯ ಗಗ್ವಾನಿ ಪಲ್ಲಿ ಪ್ರದೇಶದಲ್ಲಿ ಅಶ್ವಿನ್‌ಭಾಯ್ ಜೇಠಾಭಾಯ್ ಕಂಜಾರಿಯಾ ಅವರ ಮನೆ ಹತ್ತಾರು ವರ್ಷಗಳಷ್ಟು ಹಳೆಯದಾಗಿದ್ದು, ಈ ಕಟ್ಟಡ ಕುಸಿದು ದುರಂತ ಸಂಭವಿಸಿದೆ.
ಮೂರು ಅಂತಸ್ತಿನ ಕಟ್ಟಡ ಕುಸಿತ: ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ನಡೆದ ಈ ಗಂಭೀರ ಘಟನೆ ಇಡೀ ಖಂಬಲಿಯದಲ್ಲಿ ಸಂಚಲನ ಮೂಡಿಸಿತು. ಈ ಘಟನೆಯಲ್ಲಿ ಮೂವರು ಅವಶೇಷಗಳಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದು, ಏಳು ಮಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ರಕ್ಷಣಾ ಕಾರ್ಯಾಚರಣೆ: ಮೃತರನ್ನು 65 ವರ್ಷದ ಕೆಸರ್ಬೆನ್ ಜೆಥಾ ಕಂಜಾರಿಯಾ. 13 ವರ್ಷದ ಪ್ರೀತಿಬೆನ್ ಅಶ್ವಿನ್ ಕಂಜಾರಿಯಾ ಮತ್ತು 17 ವರ್ಷದ ಪಾಯಲ್ಬೆನ್ ಅಶ್ವಿನ್ ಕಂಜಾರಿಯಾ ಎಂದು ಗುರುತಿಸಲಾಗಿದೆ. ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದವರನ್ನು ಹೊರತೆಗೆಯಲು ಆಡಳಿತ ವ್ಯವಸ್ಥೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಮೂವರ ದುರಂತ ಸಾವು: ಅವಶೇಷಗಳಡಿ ಸಿಲುಕಿದ್ದ ಮೂವರನ್ನು ಎನ್‌ಡಿಆರ್‌ಎಫ್ ತಂಡ ಆರು ಗಂಟೆಗಳ ಪ್ರಯತ್ನದ ಬಳಿಕ ಹೊರತೆಗೆದಿದೆ. ಆದರೆ, ದುರದೃಷ್ಟವಶಾತ್ ಈ ಗಂಭೀರ ಘಟನೆಯಲ್ಲಿ ಮೂವರೂ ಸಾವನ್ನಪ್ಪಿದ್ದರು.
ಮಳೆಯ ನಡುವೆಯೇ ರಕ್ಷಣಾ ಕಾರ್ಯಾಚರಣೆ : ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ಜಿಲ್ಲೆಯ ಎಸ್‌ಡಿಎಂ, ಡಿವೈಎಸ್‌ಪಿ, ಪಿಐ, ಪಿಎಸ್‌ಐ, ಮಾಮಲದಾರ್, ಮುಖ್ಯಾಧಿಕಾರಿ ಸೇರಿದಂತೆ ಎಲ್ಲ ಉನ್ನತಾಧಿಕಾರಿಗಳು ಮಳೆಯ ನಡುವೆಯೂ ಹರಸಾಹಸ ಪಡುತ್ತಿದ್ದರು. ಕಾರ್ಯಾಚರಣೆ ಉದ್ದಕ್ಕೂ ಧಾರಾಕಾರ ಮಳೆಯಾಗುತ್ತಿದ್ದರಿಂದ ಕಾರ್ಯಾಚರಣೆ ಬಹಳ ಹೊತ್ತು ಸಾಗಿತ್ತು.
ಓದಿ: ಬೆಂಗಳೂರು: ಪಿಜಿಯೊಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ; ಡಿಸಿಪಿ ಹೇಳಿದ್ದೇನು? - Murder Inside PG Accommodation