ETV Bharat / bharat

ರಣಥಂಬೋರ್​​ ರಾಷ್ಟ್ರೀಯ ಉದ್ಯಾನವನದಲ್ಲಿ 25 ಹುಲಿಗಳು ಕಣ್ಮರೆ - RANTHAMBORE NATIONAL PARK

ಇದೇ ಮೊದಲ ಬಾರಿಗೆ ಈ ವರ್ಷ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹುಲಿಗಳು ಕಣ್ಮರೆಯಾಗಿವೆ ಎಂದು ಅಧಿಕೃತ ವರದಿ ತಿಳಿಸಿದೆ.

a-third-of-ranthambores-75-tigers-missing-say-officials
ಹುಲಿ (ANI)
author img

By PTI

Published : Nov 6, 2024, 10:42 AM IST

ಜೈಪುರ(ರಾಜಸ್ಥಾನ): ಬಂಗಾಳ ಹುಲಿ ಸಂತತಿಗೆ ಇಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಪ್ರಸಿದ್ಧಿ ಪಡೆದಿದೆ​. ಆದರೆ, ಈ ಉದ್ಯಾನವನದಲ್ಲಿ ಕಳೆದ ವರ್ಷ 75ರ ಪೈಕಿ 25 ಹುಲಿಗಳು ಕಣ್ಮರೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

2019ರಿಂದ 2022ರವರೆಗೆ ರಣಥಂಬೋರ್​ನಲ್ಲಿ 13 ಹುಲಿಗಳು ನಾಪತ್ತೆಯಾಗಿದ್ದವು.

ಈ ಕುರಿತು ತಿಳಿಯಲು ವನ್ಯಜೀವಿ ಇಲಾಖೆ ಮೂವರು ಸದಸ್ಯರ ಸಮಿತಿ ರಚಿಸಿದ್ದು, ಸಮಿತಿ ದಾಖಲೆಗಳ ಮೇಲ್ವಿಚಾರಣೆ ನಡೆಸಲಿದೆ. ಉದ್ಯಾನವನದ ಅಧಿಕಾರಿಗಳ ಲೋಪ ಕಂಡುಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕಳೆದ ಮೇ 17ರಿಂದ ಸೆಪ್ಟೆಂಬರ್​ 30ರವರೆಗೆ ಕಾಣಿಸದೇ ಇರುವ 14 ಹುಲಿಗಳ ಪತ್ತೆ ಕಾರ್ಯ ಸದ್ಯದ ಗುರಿಯಾಗಿದೆ. ನವೆಂಬರ್​ 4ರಿಂದ ಹೊರಬಿದ್ದ ವರದಿಗಳಲ್ಲಿ ರಣಥಂಬೋರ್​​ ಮೇಲ್ವಿಚಾರಣಾ ಮೌಲ್ಯಮಾಪನದ ಕುರಿತು ನಾಪತ್ತೆಯಾದ ಹುಲಿಗಳ ಬಗ್ಗೆ ತಿಳಿಸಲಾಗಿತ್ತು.

ಈ ಸಂಬಂಧ ಪಾರ್ಕ್​ನ ನಿರ್ದೇಶಕರಿಗೆ ಅನೇಕ ನೋಟಿಸ್​ ನೀಡಲಾಗಿದೆಯಾದರೂ ಯಾವುದೇ ಮಹತ್ವದ ಸುಧಾರಣೆಗಳು ಕಂಡುಬಂದಿಲ್ಲ. 2024ರ ಅಕ್ಟೋಬರ್​ 14ರ ವರದಿಯ ಪ್ರಕಾರ, ವರ್ಷದಿಂದ 11 ಹುಲಿಗಳು ಪತ್ತೆಯಾಗಿಲ್ಲ. 14 ಹುಲಿಗಳ ಕುರಿತು ಪುರಾವೆಗಳು ಸೀಮಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ರಣಥಂಬೋರ್​ನಲ್ಲಿ ನಾಪತ್ತೆಯಾಗಿರುವ ಹುಲಿಗಳ ತನಿಖೆಗಾಗಿ ತನಿಖಾ ತಂಡ ರಚಿಸಲಾಗಿದೆ.

ರಣಥಂಬೋರ್​ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿರುವುದರಿಂದ ಕಾದಾಟಕ್ಕೂ ಕೂಡ ಇದು ಕಾರಣವಾಗಿದೆ. ಇದರಲ್ಲಿ ಹುಲಿ ಮರಿ ಮರಿಗಳೂ ಸೇರಿವೆ. 2006-2014ರ ಭಾರತೀಯ ವನ್ಯಜೀವಿ ಸಂಸ್ಥೆ ಅಧ್ಯಯನದಂತೆ, ಉದ್ಯಾನವನದಲ್ಲಿ ಕೇವಲ 40 ವಯಸ್ಕ ಹುಲಿಗಳಿಗೆ ಮಾತ್ರ ಸುರಕ್ಷಿತವಾಗಿವೆ.

ಇದನ್ನೂ ಓದಿ: ಹೆಚ್.ಡಿ.ಕೋಟೆ ಜನನಿಬಿಡ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ: ಮುಂದುವರಿದ ಕಾರ್ಯಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.