ETV Bharat / bharat

ಲಾರಿ, ಟ್ರಕ್​​ ಮಧ್ಯೆ ಸಿಕ್ಕ ಸೇನಾ ವಾಹನ ನುಜ್ಜುಗುಜ್ಜು: ಏಳು ಮಂದಿ ಸೈನಿಕರಿಗೆ ಗಂಭೀರ ಗಾಯ - army truck terrible accident

author img

By ETV Bharat Karnataka Team

Published : Jul 20, 2024, 6:27 PM IST

ಪಂಜಾಬ್​ನಲ್ಲಿ ಲಾರಿ ಮತ್ತು ಟ್ರಕ್​ ಮಧ್ಯೆ ಸಿಕ್ಕ ಸೇನಾ ವಾಹನ ನುಜ್ಜುಗುಜ್ಜಾಗಿದೆ. ಇದರಲ್ಲಿದ್ದ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.

ಲಾರಿ, ಟ್ರಕ್​​ ಮಧ್ಯೆ ಸಿಕ್ಕ ಸೇನಾ ವಾಹನ ನುಜ್ಜುಗುಜ್ಜು
ಲಾರಿ, ಟ್ರಕ್​​ ಮಧ್ಯೆ ಸಿಕ್ಕ ಸೇನಾ ವಾಹನ ನುಜ್ಜುಗುಜ್ಜು (ETV Bharat)

ಜಲಂಧರ್ (ಪಂಜಾಬ್​): ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ಟ್ರಕ್​ ಮತ್ತು ಗೂಡ್ಸ್​ ಲಾರಿ ನಡುವಿನ ಭೀಕರ ಅಪಘಾತದಲ್ಲಿ ಏಳು ಮಂದಿ ಸೇನಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರನ್ನೂ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ನಡೆದಿದೆ.

ಅಪಘಾತ ಹೇಗಾಯ್ತು?: ಜಲಂಧರ್‌ನ ಸುಚಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ಇಂಡಿಯಾ ಆಯಿಲ್ ಬಂಕ್​​ ಬಳಿ ಸೇನಾ ವಾಹನ ಮತ್ತು ಮತ್ತೆರಡು ವಾಹನಗಳು ಒಟ್ಟಿಗೆ ವೇಗವಾಗಿ ಆಗಮಿಸಿದೆ. ಈ ವೇಳೆ, ಮುಂದಿದ್ದ ಟ್ಯಾಂಕರ್​ ವಾಹನ ನಿಧಾನವಾಗಿ ಚಲಿಸುತ್ತಿದ್ದಾಗ, ಹಿಂದಿನಿಂದ ಸೇನಾ ವಾಹನ ವೇಗವಾಗಿ ಬಂದಿದೆ. ಇದರ ಹಿಂದೆಯೇ ಲೋಡ್​ ಆಗಿದ್ದ ಲಾರಿಯೂ ಬಂದಿದೆ.

ಈ ವೇಳೆ, ಮುಂದಿದ್ದ ಟ್ಯಾಂಕರ್​ ಅನ್ನು ತಪ್ಪಿಸಲು ಸೇನಾ ವಾಹನ ಚಾಲಕ ಮುಂದಾದಾಗ ಹಿಂದಿದ್ದ ಲಾರಿ ಗುದ್ದಿದೆ. ಇದರಿಂದ ಸೇನಾ ವಾಹನ ಮಧ್ಯದಲ್ಲಿ ಸಿಲುಕಿ ಅಪ್ಪಚ್ಚಿಯಾಗಿದೆ. ರಭಸಕ್ಕೆ ಸೇನಾ ವಾಹನ ಒಂದು ಲೇನ್​ ಬಿಟ್ಟು ಲೇನ್​​ ಕಡೆಗೆ ಸಾಗಿ ಪಲ್ಟಿಯಾಗಿದೆ. ಲಾರಿ ಮುಂಭಾಗ ಫೂರ್ಣ ಜಖಂ ಆಗಿದೆ.

ಲಾರಿ ಮತ್ತು ಟ್ಯಾಂಕರ್​ ನಡುವೆ ಸಿಕ್ಕ ಸೇನಾ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಇದರಲ್ಲಿ ಏಳು ಮಂದಿ ಸೇನಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದವರು ರಕ್ಷಿಸಿ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಲಂಧರ್ ಕಂಟೋನ್ಮೆಂಟ್ ಸೇನಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಮುರಿದು ತುಂಡಾದ ಡಿವೈಡರ್​​: ಅಫಘಾತದ ತೀವ್ರತೆ ಎಷ್ಟಿತ್ತು ಎಂದರೆ, ಲಾರಿ ಮತ್ತು ಸೇನಾ ವಾಹನ ಉಜ್ಜಿಕೊಂಡು ಒಂದು ಲೇನ್​​ನಿಂದ ಇನ್ನೊಂದು ಲೇನ್​ಗೆ ನುಗ್ಗಿದ್ದರಿಂದ ನಡುವಿದ್ದ ಕಬ್ಬಿಣದ ಡಿವೈಡರ್​​ ಕಿತ್ತು ಹೋಗಿದೆ. ನಿಯಂತ್ರಣ ಕಳೆದುಕೊಂಡ ಸೇನಾ ವಾಹನ ಹಲವು ಬಾರಿ ಪಲ್ಟಿಯಾಗಿದ್ದರಿಂದ ರಸ್ತೆಯೂ ಹಾಳಾಗಿದೆ. ವಾಹನವು ಬಿಡಿಭಾಗಗಳಾಗಿ ಬಿದ್ದಿವೆ.

ಈ ಘಟನೆಯಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್​ ಕೂಡ ಗಾಯಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಘಟನೆ ತಿಳಿದ ತಕ್ಷಣ ರಾಜ್ಯ ರಸ್ತೆ ಭದ್ರತಾ ಪಡೆ ತಂಡಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿವೆ. ರಸ್ತೆಯ ಮೇಲೆ ಸೇನಾ ವಾಹನವು ಅಡ್ಡವಾಗಿ ಬಿದ್ದಿದ್ದರಿಂದ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಜನರು ತುಂಡಾದ ಸೇನಾ ಟ್ರಕ್ ಅನ್ನು ಕ್ರೇನ್ ಸಹಾಯದಿಂದ ಬದಿಗೆ ಎಳೆದು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: ಮುಂಬೈನ ಗ್ರ್ಯಾಂಟ್ ರಸ್ತೆಯಲ್ಲಿ ಕಟ್ಟಡ ಕುಸಿತ: ಮಹಿಳೆ ಸಾವು, ಮೂವರಿಗೆ ಗಾಯ - Building Collapse In Mumbai

ETV Bharat Logo

Copyright © 2024 Ushodaya Enterprises Pvt. Ltd., All Rights Reserved.