ನವದೆಹಲಿ: ಮೌಲಾನಾ ಅಜಾದ್ ಮೆಡಿಕಲ್ ಕಾಲೇಜ್ (ಎಂಎಎಂಸಿ)ನ ಮೊದಲ ವರ್ಷದ ಎಂಡಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಯುವಕ ಕಾಲೇಜ್ ಹಾಸ್ಟೆಲ್ನಲ್ಲಿ ಈ ಕೃತ್ಯ ಮಾಡಿಕೊಂಡಿದ್ದಾನೆ. ಸಾವನ್ನಪ್ಪಿದ ಯುವಕ 30 ವರ್ಷದ ಅಮಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಹರಿಯಾಣದ ಬಹುದುರ್ಗಢನ ನಿವಾಸಿ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದ ಎಂಬುದಾಗಿ ತಿಳಿದು ಬಂದಿದೆ. ಮೃತ ವಿದ್ಯಾರ್ಥಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಗೆ ಕುಟುಂಬಸ್ಥರ ವಿಚಾರಣೆಗೆ ಮುಂದಾಗಿದ್ದಾರೆ.
Information was received regarding suicide in the Old Resident Doctors' Hostel at MAMC. It was found that a 30-year-old male Amit Kumar who was a student at Maulana Azad Medical College studying in MD in 1st year has committed suicide. He was under treatment for psychiatric…
— ANI (@ANI) August 27, 2024
ಅಮಿತ್ರ ಸಂಬಂಧಿ ಪ್ರತಿನಿತ್ಯ ಸಂಜೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುತ್ತಿದ್ದರು. ಮಂಗಳವಾರ ಕೂಡ ಆತನ ಭೇಟಿಗೆ ಅಮಿತ್ ಹಾಸ್ಟೆಲ್ಗೆ ಬಂದಿದ್ದಾರೆ, ಆತ ರೂಮ್ ಬಾಗಿಲನ್ನು ತೆಗೆಯದಿದ್ದಾಗ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾದ ನರ ರೋಗತತಜ್ಞ: ದೆಹಲಿ ಏಮ್ಸ್ನಲ್ಲಿ ಕೂಡ ನರರೋಗ ತಜ್ಞರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಓವರ್ಡೋಸ್ ಔಷಧ ಪಡೆಯುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 34 ವರ್ಷದ ವೈದ್ಯ ತಮ್ಮ ಹೆಂಡತಿಯೊಂದಿಗೆ ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಖಿನ್ನತೆ ಹಿನ್ನೆಲೆಯುಲ್ಲಿ ವೈದ್ಯ ಚಿಕಿತ್ಸೆ ಪಡೆಯುತ್ತಿದ್ದರು ಎಂದೂ ಕೂಡಾ ತಿಳಿದು ಬಂದಿದೆ.
ನರ್ಸಿಂಗ್ ವಿದ್ಯಾರ್ಥಿ ಆತ್ಮಹತ್ಯೆ: ಇನ್ನು ಪೂರ್ವ ದೆಹಲಿಯ ಹೊಸ ಅಶೋಕ್ನಗರ ಪ್ರದೇಶದಲ್ಲಿ ಅನುಮಾನಸ್ಪದ ಪರಿಸ್ಥಿತಿಯಲ್ಲಿ ನರ್ಸಿಂಗ್ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಆಕೆ ನೆಲೆಸಿದ್ದ ಪಿಜಿಯಲ್ಲಿ ಮೃತದೇಹ ಪತ್ತೆಯಾಗಿದೆ. 22 ವರ್ಷದ ನಿಖಿತಾ ಸಾವನ್ನಪ್ಪಿದ ವಿದ್ಯಾರ್ಥಿನಿ ಆಗಿದ್ದಾರೆ. ಮಧ್ಯಪ್ರದೇಶ ಮೂಲಕ ನಿಖಿತ ನರ್ಸಿಂಗ್ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಹೊಸ ಅಶೋಕ್ ನಗರದ ಪ್ರದೇಶದ ಪಿಜಿಯಲ್ಲಿ ಇವರು ನೆಲೆಸಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಡ್ರಿಪ್ಗೆ ವಿಷಕಾರಿ ಅಂಶವನ್ನು ಸೇರಿಸಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಮರಿಗೆ ಉರುಳಿ ಬಿದ್ದ ಸೇನಾ ಟ್ರಕ್: ಮೂವರು ಯೋಧರ ದುರ್ಮರಣ