ನವದೆಹಲಿ: ಹಿಮಚಿರತೆಗಳ ಸಂಖ್ಯೆ, ಜೀವನ ಕ್ರಮ, ಆಹಾರ ವಿಧಾನ ಹಾಗೂ ಆವಾಸ ಸ್ಥಾನಗಳ ಬಗ್ಗೆ 2023ರಲ್ಲಿ ನಡೆಸಿದ ಅಧ್ಯಯನ ಹಾಗೂ ಗಣತಿಯ ವರದಿಯನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿಗದೆ. ಈ ವರದಿಯ ಪ್ರಕಾರ ಸದ್ಯ ದೇಶದಲ್ಲಿ ಒಟ್ಟು 718 ಹಿಮಚಿರತೆಗಳಿವೆ. ಅವುಗಳಲ್ಲಿ ಗರಿಷ್ಠ ಸಂಖ್ಯೆಯ ಹಿಮಚಿರತೆಗಳು ಲಡಾಖ್ನಲ್ಲಿವೆ ಎಂದು ಕೇಂದ್ರ ಪರಿಸರ ಸಚಿವಾಲಯ ಮಂಗಳವಾರ ಅಂಕಿಅಂಶ ನೀಡಿದೆ.
ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಸಚಿವ ಭೂಪೇಂದರ್ ಯಾದವ್, ದೇಶದಲ್ಲಿ ಹಿಮಚಿರತೆಗಳ ಸ್ಥಿತಿಗತಿ ವರದಿಯನ್ನು ಬಿಡುಗಡೆ ಮಾಡಿದರು. ವೈಜ್ಞಾನಿಕ ವಿಧಾನಗಳ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ನಡೆದ ಹಿಮ ಚಿರತೆಗಳ ಜನಸಂಖ್ಯೆಯ ವರದಿ ಇದಾಗಿದೆ ಎಂದು ಸಚಿವಾಲಯ ಹೇಳಿದೆ.
-
Presided over the meeting of the Standing Committee of the National Board for Wildlife in New Delhi today.
— Bhupender Yadav (@byadavbjp) January 30, 2024 " class="align-text-top noRightClick twitterSection" data="
During the meeting, released the Status Report of Snow Leopards in India. The Snow Leopard Population Assessment in India Program is the first-ever scientific exercise… pic.twitter.com/m62q1FVLBB
">Presided over the meeting of the Standing Committee of the National Board for Wildlife in New Delhi today.
— Bhupender Yadav (@byadavbjp) January 30, 2024
During the meeting, released the Status Report of Snow Leopards in India. The Snow Leopard Population Assessment in India Program is the first-ever scientific exercise… pic.twitter.com/m62q1FVLBBPresided over the meeting of the Standing Committee of the National Board for Wildlife in New Delhi today.
— Bhupender Yadav (@byadavbjp) January 30, 2024
During the meeting, released the Status Report of Snow Leopards in India. The Snow Leopard Population Assessment in India Program is the first-ever scientific exercise… pic.twitter.com/m62q1FVLBB
ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII), ಹಿಮ ಚಿರತೆಗಳಿರುವ ಭಾರತದ ಶ್ರೇಣಿಯ ರಾಜ್ಯಗಳು, ಮೈಸೂರಿನ ನೇಚರ್ ಕನ್ಸರ್ವೇಶನ್ ಫೌಂಡೇಶನ್ ಹಾಗೂ WWFಗಳ ಸಹಕಾರದೊಂದಿಗೆ 2019ರಿಂದ 2023ರ ನಡುವೆ ಭಾರತದಲ್ಲಿ ಮೊದಲ ಬಾರಿಗೆ 'ಹಿಮ ಚಿರತೆಗಳ ಜನಸಂಖ್ಯೆಯ ಮೌಲ್ಯಮಾಪನ' (SPAI- Snow Leopard Population Assessment in India) ನಡೆಸಿದೆ.
ಈ ವರದಿಯು ಭಾರತದಲ್ಲಿ ಸಂಭಾವ್ಯ ಹಿಮಚಿರತೆಗಳಿರುವ ಶ್ರೇಣಿಯ ಶೇಕಡಾ 70ರಷ್ಟು ಭಾಗಗಳಲ್ಲಿ ಅಧ್ಯಯನ ನಡೆಸಿದೆ. ಅರಣ್ಯ ಮತ್ತು ವನ್ಯಜೀವಿ ಸಿಬ್ಬಂದಿ, ಸಂಶೋಧಕರು, ಸ್ವಯಂಸೇವಕರು ಮತ್ತು ಜ್ಞಾನ ಪಾಲುದಾರರು ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಎರಡು ಹಂತಗಳಲ್ಲಿ ಹಿಮ ಚಿರತೆಗಳ ಸಂಖ್ಯೆಯ ಮೌಲ್ಯಮಾಪನ ನಡೆದಿದೆ.
ಭಾರತ ಶ್ರೇಣಿ ರಾಜ್ಯಗಳಾದ ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸೇರಿದಂತೆ ಹಿಮಾಲಯ ಪ್ರದೇಶದಾದ್ಯಂತ ಸುಮಾರು 1,20,000 ಕಿ.ಮೀ. ಪ್ರದೇಶಗಳ ಸಂಭಾವ್ಯ ಹಿಮಚಿರತೆಗಳ ಆವಾಸಸ್ಥಾನಗಳಲ್ಲಿ ಈ ಅಧ್ಯಯನ, ಗಣತಿ ನಡೆಸಲಾಗಿದೆ.
ಅಧ್ಯಯನದ ಮೊದಲ ಹಂತ: ಹಿಮಚಿರತೆಗಳ ಪ್ರಾದೇಶಿಕ ವಿತರಣೆಯನ್ನು ಮೌಲ್ಯಮಾಪನ ಮಾಡುವುದು, ಆವಾಸಸ್ಥಾನದ ಕೋವೇರಿಯಟ್ಗಳನ್ನು ವಿಶ್ಲೇಷಣೆಗೆ ಸೇರಿಸುವುದು, 2019ರಲ್ಲಿ ಪರಿಸರ ಸಚಿವಾಲಯದಿಂದ ಬಿಡುಗಡೆಯಾದ ಹಿಮಚಿರತೆಗಳ ರಾಷ್ಟ್ರೀಯ ಸಂಖ್ಯೆಯ ಮೌಲ್ಯಮಾಪನದ ಮಾರ್ಗಸೂಚಿಗಳೊಂದಿಗೆ ಹೊಂದಾಣಿಕೆ ಮಾಡುವುದು ಒಳಗೊಂಡಿತ್ತು. ಈ ವ್ಯವಸ್ಥಿತ ವಿಧಾನದಲ್ಲಿ ಸಂಭಾವ್ಯ ವಿತರಣಾ ಶ್ರೇಣಿಯಲ್ಲಿ ಆಕ್ಯುಪೆನ್ಸಿ ಆಧಾರಿತ ಮಾದರಿ ವಿಧಾನದ ಮೂಲಕ ಪ್ರಾದೇಶಿಕ ವಿತರಣೆಯನ್ನು ನಿರ್ಣಯಿಸಲಾಯಿತು.
ಎರಡನೇ ಹಂತ: ಈ ಹಂತದಲ್ಲಿ ಗುರುತಿಸಲಾದ ಪ್ರತಿಯೊಂದು ಶ್ರೇಣೀಕೃತ ಪ್ರದೇಶದಲ್ಲಿ ಕ್ಯಾಮರಾ ಟ್ರ್ಯಾಪ್ಗಳನ್ನು ಬಳಸಿಕೊಂಡು ಹಿಮಚಿರತೆಗಳ ಸಮೃದ್ಧಿಯನ್ನು ಅಂದಾಜಿಸಲಾಗಿದೆ. ಹಿಮಚಿರತೆಗಳ ಇರುವಿಕೆಯನ್ನು ಪತ್ತೆ ಹಚ್ಚಲು ಸಂಶೋಧಕರು ಸುಮಾರು 13,450 ಕಿ.ಮೀ.ನಷ್ಟು ದೂರ ಕ್ರಮಿಸಿದ್ದರು. 1971 ಕಡೆಗಳಲ್ಲಿ ಟ್ರ್ಯಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.
ಟ್ರ್ಯಾಪ್ ಕ್ಯಾಮರಾಗಳಲ್ಲಿ ಒಟ್ಟು 241 ವಿಶಿಷ್ಟ ರೀತಿಯ ಹಿಮಚಿರತೆಗಳ ಫೋಟೋಗಳು ಸೆರೆಯಾಗಿವೆ. ಅಧ್ಯಯನದ ವೇಳೆ ದೊರೆತ ಡೇಟಾ ವಿಶ್ಲೇಷಣೆಯ ಪ್ರಕಾರ ಲಡಾಖ್‌ನಲ್ಲಿ ಅಂದಾಜು 477 ಹಿಮಚಿರತೆಗಳು, ಉತ್ತರಾಖಂಡದಲ್ಲಿ 124, ಹಿಮಾಚಲ ಪ್ರದೇಶದಲ್ಲಿ 51, ಅರುಣಾಚಲ ಪ್ರದೇಶದಲ್ಲಿ 36, ಸಿಕ್ಕಿಂನಲ್ಲಿ 21 ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ 9 ಹಿಮಚಿರತೆಗಳು ಇರುವುದು ತಿಳಿದು ಬಂದಿದೆ.
ಜಾಗತಿಕವಾಗಿ, ಈ ಹಿಮಚಿರತೆಯನ್ನು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ. ನಮ್ಮ ಭಾರತದಲ್ಲಿ ಹಿಮಚಿರತೆಗೆ ಅತ್ಯುನ್ನತ ವನ್ಯಜೀವಿ ಸಂರಕ್ಷಣಾ ಸ್ಥಾನಮಾನ ನೀಡಲಾಗಿದೆ.
ಇದನ್ನೂ ಓದಿ: Tiger Mortality Rate: ಹುಲಿಗಳ ಬೀಡು ಕರುನಾಡು: ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಮರಣ ಪ್ರಮಾಣದ ಆತಂಕ