ETV Bharat / bharat

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಮೊಳಗಲಿದೆ 50 ಸಂಗೀತ ವಾದ್ಯಗಳ 'ಮಂಗಳ ಧ್ವನಿ'

ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸಂಗೀತ ವಾದ್ಯಗಳಿಂದ ಮೊಳಗುವ 'ಮಂಗಳ ಧ್ವನಿ'ಯ ಮೂಲಕ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇಂದು ಆರಂಭವಾಗಲಿದೆ.

Ayodhya Shri Rama Mandira
ಅಯೋಧ್ಯೆ ಶ್ರೀ ರಾಮ ಮಂದಿರ
author img

By ETV Bharat Karnataka Team

Published : Jan 22, 2024, 10:06 AM IST

ಅಯೋಧ್ಯೆ: ಇಂದು ಮಧ್ಯಾಹ್ನ ಇಡೀ ದೇಶವೇ ಎದುರು ನೋಡುತ್ತಿರುವ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಎರಡು ಗಂಟೆಗಳ ಕಾಲ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50 ಸಂಗೀತ ವಾದ್ಯಗಳಿಂದ 'ಮಂಗಳ ವಾದ್ಯ' ಮೊಳಗಲಿದೆ. ಬೆಳಿಗ್ಗೆ 10 ಗಂಟೆಗೆ 'ಮಂಗಳ ಧ್ವನಿ' ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಯವರೆಗೂ ವಿವಿಧ ವಾದ್ಯಗಳ ಸಂಗೀತ ಮಾರ್ಧನಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ತಿಳಿಸಿದೆ.

  • Immersed in devotion, the Prana Pratishtha ceremony at Shri Ram Janmabhoomi in Ayodhya will be graced by the majestic 'Mangal Dhwani' at 10 AM. Witness over 50 exquisite instruments from different states come together for this auspicious occasion, resonating for nearly two hours.… pic.twitter.com/9YlmraFFLx

    — Shri Ram Janmbhoomi Teerth Kshetra (@ShriRamTeerth) January 21, 2024 " class="align-text-top noRightClick twitterSection" data=" ">

ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರತಿನಿಧಿಯಾಗಿ ವೀಣೆ, ಉತ್ತರ ಪ್ರದೇಶದ ಪಖ್ವಾಜ್​, ಕೊಳಲು, ಧೋಲಕ್​, ಆಂಧ್ರ ಪ್ರದೇಶದ ಘಟಂ, ಮಹಾರಾಷ್ಟ್ರದ ಸುಂದರಿ, ಪಂಜಾಬ್​ನ ಅಲ್ಗೋಜಾ, ಒಡಿಶಾದ ಮರ್ದಲ್, ಮಧ್ಯಪ್ರದೇಶದ ಸಂತೂರ್​, ಗುಜರಾತ್​ ಸಂತರ್​, ಬಿಹಾರದ ಪಖವಾಜ್​, ಮಣಿಪುರದ ಪುಂಗ್, ಅಸ್ಸಾಂನ ನಾಗಡಾ ಮತ್ತು ಕಾಳಿ, ಛತ್ತೀಸ್​ಗಢದ ತುಂಬೂರಾ, ದೆಹಲಿಯ ಶೆಹನಾಯಿ, ರಾಜಸ್ಥಾನದ ರಾವಣಹತ, ಪಶ್ಚಿಮ ಬಂಗಾಳದ ಶ್ರೀಖೋಲ್​ ಮತ್ತು ಸರೋದ್​, ಜಾರ್ಖಂಡ್​ನ ಸಿತಾರ್​, ಉತ್ತರಾಖಂಡದ ಹುಡ್ಕಾ, ತಮಿಳುನಾಡಿನ ನಾಗಸ್ವರಂ, ತವಿಲ್​, ಮೃದಂಗ ಸೇರಿ ಭಾರತೀಯ ಸಂಗೀತ ಸಂಪ್ರದಾಯದಲ್ಲಿ ಬಳಸುವ ಎಲ್ಲಾ ವಾದ್ಯಗಳನ್ನು ಶ್ರೀ ರಾಮ ಮಂದಿರದ ಪ್ರಾಂಗಣದಲ್ಲಿ ನುಡಿಸಲಾಗುತ್ತದೆ. ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ಈ ಭವ್ಯ ಸಂಗೀತ ಮೇಳವನ್ನು ಆಯೋಜಿಸಿದ್ದಾರೆ.

ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ಮಾತನಾಡಿ, "ವಿವಿಧ ರಾಜ್ಯಗಳ 50 ಸಂಗೀತೋಪಕರಣಗಳು ಶ್ರೀ ರಾಮ ಮಂದಿರದ ಆವರಣದಲ್ಲಿ ದೈವೀ ರಾಗದ ಅಲೆಗಳನ್ನು ಸೃಷ್ಟಿಸುವ ಮೂಲಕ ಅಲ್ಲಿನ ವಾತಾವರಣದಲ್ಲಿ ಭಕ್ತಿ ಭಾವ ಹೊಮ್ಮವಂತೆ ಮಾಡಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂತೋಷ ಹಾಗೂ ಶುಭ ಸೂಚಕವಾಗಿ ಮಂಗಳ ಧ್ವನಿಯನ್ನು ಮೊಳಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಗವಾನ್​ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದ್ದು, ಈ ಅದ್ಧೂರಿ ಕ್ಷಣಗಳನ್ನು ಗುರುತಿಸಲು ಭಾರತದ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಸಂಗೀತ ವಾದ್ಯಗಳನ್ನು ಶ್ರೀ ರಾಮನ ಮುಂದೆ ನುಡಿಸಿ, ಮಂಗಳ ಧ್ವನಿ ಮೊಳಗಿಸಲಾಗುವುದು" ಎಂದು ಹೇಳಿದರು.

ಅಯೋಧ್ಯೆ ನಗರಿ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಅದ್ಧೂರಿಯಾಗಿ ಶೃಂಗಾರಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಶತಮಾನದ ಕನಸು ನನಸಾಗುವ ಅಮೃತ ಘಳಿಗೆ: ಅಯೋಧ್ಯೆಗಾಗಿ 500 ವರ್ಷಗಳಲ್ಲಿ ನಡೆದಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.