ETV Bharat / bharat

ಕೇಂದ್ರ ಸರ್ಕಾರದಿಂದ 5.8 ಲಕ್ಷ ಸಿಮ್​ ಕಾರ್ಡ್​, 1 ಲಕ್ಷಕ್ಕೂ ಹೆಚ್ಚು IMEI ನಂಬರ್​ ಬ್ಲಾಕ್ - sim cards and imei blocked - SIM CARDS AND IMEI BLOCKED

"ಇಲ್ಲಿಯವರೆಗೆ ಪೊಲೀಸ್ ಅಧಿಕಾರಿಗಳು ವರದಿ ಮಾಡಿದಂತೆ 5.8 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 1,08,000 IMEI ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ" ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ 5.8 ಲಕ್ಷ ಸಿಮ್​ ಕಾರ್ಡ್​, 1 ಲಕ್ಷಕ್ಕೂ ಹೆಚ್ಚು IMEI ನಂಬರ್​ ಬ್ಲಾಕ್
ಕೇಂದ್ರ ಸರ್ಕಾರದಿಂದ 5.8 ಲಕ್ಷ ಸಿಮ್​ ಕಾರ್ಡ್​, 1 ಲಕ್ಷಕ್ಕೂ ಹೆಚ್ಚು IMEI ನಂಬರ್​ ಬ್ಲಾಕ್ (ETV Bharat)
author img

By ETV Bharat Karnataka Team

Published : Jul 24, 2024, 10:57 PM IST

ನವದೆಹಲಿ: ಕೇಂದ್ರ ಸರ್ಕಾರದಿಂದ 5.8 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 1 ಲಕ್ಷ 8 ಸಾವಿರ ಐಎಂಇಐ ನಂಬರ್​ಗಳನ್ನು ನಿರ್ಬಂಧಿಸಲಾಗಿದೆ​ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ. ಇಲ್ಲಿಯವರೆಗೆ, ಪೊಲೀಸ್ ಅಧಿಕಾರಿಗಳು ವರದಿ ಮಾಡಿದಂತೆ 5.8 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಮತ್ತು 1,08,000 IMEI ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ" ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸಂವಿಧಾನದ ಏಳನೇ ಶೆಡ್ಯೂಲ್ ಪ್ರಕಾರ ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ರಾಜ್ಯ ವಿಷಯಗಳಾಗಿವೆ ಎಂದು ಹೇಳಿದ ಕುಮಾರ್, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕಾನೂನು ಜಾರಿ ಸಂಸ್ಥೆಗಳ ( Law Enforcement Agencies) ಸಾಮರ್ಥ್ಯ ವರ್ಧನೆಗಾಗಿ ವಿವಿಧ ಯೋಜನೆಗಳ ಅಡಿ ಸಲಹೆಗಳು ಮತ್ತು ಆರ್ಥಿಕ ಸಹಾಯ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಏಜೆನ್ಸಿಗಳ ಮೂಲಕ ಸೈಬರ್ ಅಪರಾಧ ಸೇರಿದಂತೆ ಇತರ ಅಪರಾಧಗಳನ್ನು ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಕಾನೂನು ಕ್ರಮಕ್ಕೆ ಪ್ರಾಥಮಿಕವಾಗಿ ಜವಾಬ್ದಾರರಾಗಿರುತ್ತವೆ" ಎಂದು ಹೇಳಿದ್ದಾರೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್​ ತನಿಖಾಧಿಕಾರಿಗಳಿಗೆ (ಐಒಎಸ್​) ಆರಂಭಿಕ ಹಂತದ ಸೈಬರ್ ಫೋರೆನ್ಸಿಕ್ ನೆರವು ನೀಡಲು ನವದೆಹಲಿಯಲ್ಲಿ ಐ4ಸಿ ಯ ಭಾಗವಾಗಿ ಅತ್ಯಾಧುನಿಕ 'ನ್ಯಾಷನಲ್ ಸೈಬರ್ ಫೋರೆನ್ಸಿಕ್ ಲ್ಯಾಬೊರೇಟರಿ (Investigation)' ಸ್ಥಾಪಿಸಲಾಗಿದೆ. ಇದುವರೆಗೆ, ರಾಷ್ಟ್ರೀಯ ಸೈಬರ್ ಫೋರೆನ್ಸಿಕ್ಸ್ ಲ್ಯಾಬೊರೇಟರಿ (ತನಿಖೆ) ಮೊಬೈಲ್ ಫೋರೆನ್ಸಿಕ್ಸ್, ಮೆಮೊರಿ ಫೋರೆನ್ಸಿಕ್ಸ್, ಸಿಡಿಆರ್ ಅನಾಲಿಸಿಸ್ ಮುಂತಾದ ಸುಮಾರು 10,200 ಸೈಬರ್ ಫೋರೆನ್ಸಿಕ್ಸ್‌ನಲ್ಲಿ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸಹಾಯ ಮಾಡಲು ರಾಜ್ಯ ಕಾನೂನು ಜಾರಿ ಸಂಸ್ಥೆಗಳಿಗೆ ತನ್ನ ಸೇವೆಗಳನ್ನು ಒದಗಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಹಣಕಾಸಿನ ವಂಚನೆಗಳನ್ನು ತಕ್ಷಣವೇ ವರದಿ ಮಾಡಲು ಮತ್ತು ವಂಚಕರು ಹಣ ದೋಚುವುದನ್ನು ತಡೆಯಲು ಐ4ಸಿ ಅಡಿಯಲ್ಲಿ 'ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಅಂಡ್ ಮ್ಯಾನೇಜ್​ಮೆಂಟ್ ಸಿಸ್ಟಮ್' ಪ್ರಾರಂಭಿಸಲಾಗಿದೆ. ಇದುವರೆಗೆ 7.6 ಲಕ್ಷಕ್ಕೂ ಹೆಚ್ಚು ದೂರುಗಳಿಗೆ ಸಂಬಂಧಿಸಿದಂತೆ ಒಟ್ಟು 2,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ಉಳಿಸಲಾಗಿದೆ. ಆನ್‌ಲೈನ್ ಸೈಬರ್ ದೂರುಗಳನ್ನು ಸಲ್ಲಿಸಲು ಸಹಾಯ ಪಡೆಯಲು ಟೋಲ್ - ಫ್ರೀ ಸಹಾಯವಾಣಿ ಸಂಖ್ಯೆ '1930' ಅನ್ನು ಕಾರ್ಯಗತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೈಬರ್ ವಿಧಿವಿಜ್ಞಾನ ಮತ್ತು ತರಬೇತಿ ಪ್ರಯೋಗಾಲಯಗಳ ಸ್ಥಾಪನೆ, ಸೈಬರ್ ಸಲಹೆಗಾರರ ನೇಮಕ ಮತ್ತು ಎಲ್ಇಎ ಸಿಬ್ಬಂದಿಗೆ ತರಬೇತಿ ನೀಡಲು ಗೃಹ ಸಚಿವಾಲಯವು 'ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಸೈಬರ್ ಅಪರಾಧ ತಡೆಗಟ್ಟುವಿಕೆ (CCPWC) ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 131.60 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೈಬರ್ ಫೋರೆನ್ಸಿಕ್-ಕಮ್-ತರಬೇತಿ ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದೆ ಮತ್ತು 24,600 ಕ್ಕೂ ಹೆಚ್ಚು LEA ಸಿಬ್ಬಂದಿ, ನ್ಯಾಯಾಂಗ ಅಧಿಕಾರಿಗಳು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಸೈಬರ್ ಅಪರಾಧದ ಕುರಿತು ಜಾಗೃತಿ, ತನಿಖೆ, ಫೋರೆನ್ಸಿಕ್ಸ್ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆ ಉಲ್ಲಂಘನೆ ಆರೋಪ: ಸಂಸತ್ತಿನಲ್ಲಿ ಬಜೆಟ್​ ವಿರುದ್ಧ ಕದನಕ್ಕೆ I.N.D.I.A ಕೂಟ ಪ್ಲಾನ್​ - Federalism Fight

ETV Bharat Logo

Copyright © 2025 Ushodaya Enterprises Pvt. Ltd., All Rights Reserved.