ETV Bharat / bharat

ಭಾರತೀಯ ವಾಯುಸೇನೆ ವಿಮಾನ ಪತನವಾಗಿ 56 ವರ್ಷಗಳ ಬಳಿಕ ಪತ್ತೆಯಾದ ನಾಲ್ವರು ಯೋಧರ ಮೃತದೇಹಗಳು! - 4 soldiers bodies recovered - 4 SOLDIERS BODIES RECOVERED

ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿಟಿಯಲ್ಲಿ ಭಾರತೀಯ ವಾಯುಪಡೆಯ ವಿಮಾನ ಪತನಗೊಂಡು 56 ವರ್ಷಗಳ ಬಳಿಕ 4 ಯೋಧರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳನ್ನು ಲಾಹೌಲ್-ಸ್ಪಿಟಿಯಲ್ಲಿರುವ ಲೋಸರ್‌ಗೆ ತರಲಾಗುತ್ತಿದೆ.

4 SOLDIERS BODIES RECOVERED
ನಾಲ್ವರು ಸೈನಿಕರ ಮೃತದೇಹ ಪತ್ತೆ (Lahaul Spiti Police)
author img

By ETV Bharat Karnataka Team

Published : Oct 1, 2024, 11:12 AM IST

ನವದೆಹಲಿ: ಭಾರತೀಯ ವಾಯುಪಡೆ ವಿಮಾನ ಎಎನ್​-12 ಪತನಗೊಂಡು 56 ವರ್ಷಗಳ ಬಳಿಕ ವಿಮಾನದ ಅವಶೇಷಗಳಲ್ಲಿ ನಾಲ್ವರು ಯೋಧರ ಮೃತದೇಹಗಳು ಪತ್ತೆಯಾಗಿವೆ. ಭಾರತೀಯ ಸೇನೆಯು ಹಿಮಾಚಲ ಪ್ರದೇಶದ ಲಾಹೌಲ್​- ಸ್ಪಿಟಿ ಜಿಲ್ಲೆಯ ಬೆಟ್ಟಗಳಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ 1968 ಫೆಬ್ರವರಿ 7 ರಂದು ಪತನಗೊಂಡ ಎಎನ್​- 12 ವಿಮಾನದ ಅವಶೇಷಗಳಿಂದ ನಾಲ್ಕು ಸೈನಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಭಾರತೀಯ ವಾಯಪಡೆಗೆ ಸೇರಿದ್ದ ಈ ವಿಮಾನ ಇದಾಗಿದ್ದು, ಚಂಡೀಗಢದಿಂದ ಲೇಹ್​ಗೆ ತೆರಳುತ್ತಿದ್ದ ವೇಳೆ ರೋಹ್ಟಾಂಗ್​ ಪಾಸ್​ ಬಳಿಕ ವಿಮಾನ ಅಪಘಾತಕ್ಕೀಡಾಗಿತ್ತು. ಪತನಗೊಂಡಂತಹ ಸಂದರ್ಭದಲಲ್ಲಿ ಇದರಲ್ಲಿ 102 ಸೇನಾ ಸಿಬ್ಬಂದಿ ಇದ್ದರು.

ಲಹೌಲ್​- ಸ್ಪಿಟಿ ಪೊಲೀಸ್​ ವರಿಷ್ಠಾಧಿಕಾರಿ ಮಯಾಂಕ್​ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದು, "ತಂಡ ಲಾಹೌಲ್​- ಸ್ಪಿಟಿಯ ಚಂದ್ರಭಾಗ 13 ಶಿಖರದ ಬಳಿಯ ಬಟಾಲ್​ನಲ್ಲಿ ಪರ್ವತಾರೋಹಣ ನಡೆಸುತ್ತಿತ್ತು. ಉಪಗ್ರಹ ಸಂವಹನ ಮೂಲಕ ಪಡೆದ ಮಾಹಿತಿ ಆಧರಿಸಿ, ಈ ಮೃತದೇಹಗಳನ್ನು ಪತ್ತೆ ಹಚ್ಚಲಾಯಿತು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈ ದೇಹಗಳು 1968ರ ಭಾರತೀಯ ವಾಯುಪಡೆಯ ಎಎನ್​-12 ವಿಮಾನ ಅಪಘಾತಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾಗಿದೆ" ಎಂದು ತಿಳಿಸಿದರು.

1968ರಲ್ಲಿ ವಿಮಾನ ಅಪಘಾತದಲ್ಲಿ ಮಡಿದ ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಈ ಅಪಘಾತ ಭಾರತೀಯ ಸೇನಾ ವಾಯುಪಡೆಯ ಇತಿಹಾಸದಲ್ಲಿ ಅತ್ಯಂತ ದುರಂತ ಘಟನೆಗಳಲ್ಲಿ ಒಂದಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನವು ಲಾಹೌಲ್​ ಕಣಿವೆಯ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತ್ತು. ನಂತರದ ವರ್ಷಗಳಲ್ಲಿ ನಡೆದ ಹಲವಾರು ಶೋಧ ಕಾರ್ಯಾಚರಣೆಗಳಲ್ಲಿ ಕೆಲವು ಮೃತದೇಹಗಳು ಮಾತ್ರ ದೊರಕಿವೆ. ಇನ್ನೂ ಅನೇಕ ಮೃತದೇಹಗಳು ಹಾಗೂ ಅವಶೇಷಗಳು ಹಿಮಭರಿತ ಮತ್ತು ಎತ್ತರದ ಭೂಪ್ರದೇಶದಲ್ಲಿ ಕಳೆದುಹೋಗಿವೆ" ಎಂದು ತಿಳಿಸಿದರು.

2018ರಲ್ಲಿ ಯೋಧನ ಮೃತದೇಹ ಪತ್ತೆ: "2018ರ ಈ ವಿಮಾನದ ಅವಶೇಷಗಳು ಹಾಗೂ ಯೋಧನೋರ್ವನ ಮೃತದೇಹ 6,200 ಮೀಟರ್​ ಎತ್ತರದಲ್ಲಿರುವ ಢಾಕಾ ಗ್ಲೇಸಿಯರ್​ ಬೇಸ್​ ಕ್ಯಾಂಪ್​ನಲ್ಲಿ ಪತ್ತೆಯಾಗಿತ್ತು. ಚಂದ್ರಭಾಗ -13 ಶಿಖರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪರ್ವತಾರೋಹಿಗಳ ತಂಡ ಮೃತದೇಹವನ್ನು ಪತ್ತೆ ಹಚ್ಚಿತ್ತು. ಇದೀಗ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವಾಗುತ್ತಿದೆ" ಎಂದರು.

"ಸೇನಾ ಕಾರ್ಯಾಚರಣೆ ತಂಡವು ಮೃತದೇಹಗಳನ್ನು ಗುರುತಿಸಲು ಹಾಗೂ ಇತರ ವಿಧಿವಿಧಾನಗಳಿಗಾಗಿ ಲೊಸಾರ್​ ನೆಲೆಗೆ ತರುತ್ತಿದೆ. ಮೃತದೇಹಗಳು ಪತ್ತೆಯಾದ ಪ್ರದೇಶ ಅತ್ಯಂತ ಕಷ್ಟಕರವಾಗಿದೆ. ಅಲ್ಲಿಗೆ ತಲುಪುವುದು, ಹುಡಕಾಟ ನಡೆಸುವುದು ತುಂಬಾ ಸವಾಲಿನ ಕೆಲಸವಾಗಿತ್ತು.

ಇದನ್ನೂ ಓದಿ: ಯುದ್ಧಭೂಮಿಯಲ್ಲಿ ಎಫ್16 ಫೈಟರ್ ಜೆಟ್‌ ಪತನ: ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನದ ವಿಶೇಷತೆ ಏನು? - F16 fighter Plane Specialization

ETV Bharat Logo

Copyright © 2025 Ushodaya Enterprises Pvt. Ltd., All Rights Reserved.