ಜಶ್ಪುರ್: ಚತ್ತೀಸ್ಗಢದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಳೆದ ರಾತ್ರಿ ನಡೆದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಒಂದೇ ಕುಟುಂಬದ ಮೂವರು ಅಸುನೀಗಿದ್ದು, ಮತ್ತೋರ್ವರು ನೆರೆಮನೆಯವರು.
ಸಲಗವೊಂದು ಶುಕ್ರವಾರ ರಾತ್ರಿ ಬಗಿಚಾ ನಗರ್ ಪಂಚಾಯತ್ನ ಗುಮ್ಹರಿಯಾ ವಾರ್ಡ್ ನಂ 9ರಲ್ಲಿ ದಾಳಿ ನಡೆಸಿದೆ. ತಡರಾತ್ರಿಯಲ್ಲಿ ಗ್ರಾಮಕ್ಕೆ ಪ್ರವೇಶಿಸಿದ ಆನೆ ಮನೆಯನ್ನು ಧ್ವಂಸ ಮಾಡಿ. ಮನೆಯಲ್ಲಿ ಮಲಗಿದ್ದ ಮಗು ಸೇರಿದಂತೆ ಇಬ್ಬರನ್ನು ತುಳಿದು ಹಾಕಿದೆ. ಈ ಸದ್ದುಗಳನ್ನು ಆಲಿಸಿದ ನೆರೆ ಮನೆಯ ವ್ಯಕ್ತಿ ಏನಾಗುತ್ತಿದೆ ಎಂದು ನೋಡಲು ಬಂದಾಗ ಆತನ ಮೇಲೆ ಆನೆ ದಾಳಿ ಮಾಡಿದೆ. ರಾಮ್ಕೇಶ್ವರ್ ಸೋನಿ (35), ರಬಿತಾ ಸೋನಿ (9) ಅಜಯ್ ಸೋನಿ (25) ಮತ್ತು ನೆರೆಹೊರೆ ಅಶ್ವಿನಿ ಕುಜೂರು (28) ಸಾವನ್ನಪ್ಪಿದ್ದಾರೆ.
ಮಾಹಿತಿ ಪ್ರಕಾರ ರಾತ್ರಿ 12 ಸುಮಾರಿನಲ್ಲಿ ಆನೆ ದಾಳಿ ನಡೆಸಿದ್ದು, ಮೊದಲಿಗೆ ತಂದೆ ಮತ್ತು ಮಗಳನ್ನು ಕೊಂದುಹಾಕಿದೆ. ಈ ವೇಳೆ ಕಿರುಚಾಟ ಕೇಳಿಸಿದ ನೆರೆ ಮನೆಯಾದ ಮನೆಯಲ್ಲಿ ಜಗಳ ಆಗುತ್ತಿದೆ ಎಂದು ಆಗಮಿಸಿದ್ದಾರೆ. ಆನೆ ನೋಡಿದ ಆತ ಸಹಾಯಕ್ಕಾಗಿ ಜೋರಾಗಿ ಅಂಗಲಾಚಿದ್ದಾರೆ. ತಕ್ಷಣಕ್ಕೆ ಏನಾಯಿತು ಎಂದು ನೋಡಲು ಹೋಗುವಷ್ಟರಲ್ಲಿ ನನ್ನ ಗಂಡನ ಮೇಲೆ ಆನೆ ದಾಳಿ ನಡೆಸಿತು ಎಂದು ಮೃತನ ಪತ್ನಿ ಘಟನೆ ನೆನೆದು ಕಣ್ಣೀರಿಟ್ಟರು.
ವಿದ್ಯುತ್ ಕೊರತೆಯಿಂದ ಪದೇ ಪದೇ ಗ್ರಾಮಕ್ಕೆ ಆಗಮಿಸುತ್ತಿರುವ ಆನೆ: ಗ್ರಾಮದಲ್ಲಿ ಪದೇ ಪದೇ ಆನೆ ದಾಳಿ ನಡೆಯುತ್ತಿದೆ. ಇಡೀ ಗ್ರಾಮವೇ ಆನೆ ದಾಳಿಯ ಭೀತಿಯಲ್ಲಿದೆ. ರಾತ್ರಿ ಸಮಯದಲ್ಲಿ ಆನೆಗಳ ಹಿಂಡು ದಾಳಿ ಮಾಡುತ್ತಿದೆ. ರಾತ್ರಿ ಸಮಯದಲ್ಲಿ ಯಾವುದೇ ವಿದ್ಯುತ್ ಸಂಪರ್ಕ ಇಲ್ಲ. ನಿರಂತರ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಆನೆಗಳ ದಾಳಿ ಹೆಚ್ಚುತ್ತಿದೆ. ಕಳೆದೊಂದು ತಿಂಗಳಿನಲ್ಲಿ 9 ಜನರು ಸಾವನ್ನಪ್ಪಿದ್ದಾರೆ.
ಆನೆ ಸ್ಥಳಾಂತರಕ್ಕೆ ಯೋಜನೆ: ದಾಯಿಂದ ಒಳಗಾದ ಕುಟುಂಬಕ್ಕೆ ಅರಣ್ಯ ಇಲಾಖೆ ಆರ್ಥಿಕ ಸಹಾಯ ನೀಡಲಾಗಿದೆ. ಈ ಕುರಿತು ಮಾತನಾಡಿದ ಡಿಎಫ್ಒ ಜಿತೇಂದ್ರ ಉಪಾಧ್ಯಾಯ, ಕಳೆದ ರಾತ್ರಿ ಆನೆ ದಾಳಿ ನಡೆದಿದೆ. ಶನಿವಾರ ಬೆಳಗಿನಜಾವ 3.30ರಿಂದ ಆನೆ ಪತ್ತೆ ಕಾರ್ಯ ನಡೆಸುತ್ತಿದೆ. ಆನೆ ಸೆರೆಗೆ ನಾಲ್ಕು ತಂಡ ಕೂಡ ನಿರಂತರವಾಗಿದೆ. ಗ್ರಾಮದ ಪಕ್ಕದಲ್ಲಿರುವ ನದಿ ದಾಟಿ, ಕತ್ತಲಲ್ಲಿರುವ ಗ್ರಾಮಕ್ಕೆ ಅವು ನುಗ್ಗುತ್ತಿದೆ.
ಈ ಆನೆಗಳ ತಂಡದಲ್ಲಿ 40 ಆನೆಗಳಿವೆ. ಆದರೆ, ಒಂದು ಆನೆ ಮಾತ್ರ ಈ ದಾಳಿ ನಡೆಸುತ್ತಿದೆ. ಈ ಆನೆಯ ಚಲನವಲವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ: ಪತಿ, ಪತ್ನಿ, ಮಗಳ ಕತ್ತು ಸೀಳಿ ಕೊಲೆ, ಮಗನ ಸ್ಥಿತಿ ಚಿಂತಾಜನಕ