ETV Bharat / bharat

ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಲಖನೌದಿಂದ 350 ಮುಸ್ಲಿಮರಿಂದ 6 ದಿನಗಳ ಪಾದಯಾತ್ರೆ

ಅಯೋಧ್ಯೆ ಶ್ರೀರಾಮನ ದರ್ಶನಕ್ಕಾಗಿ ಮುಸ್ಲಿಮರ ಗುಂಪೊಂದು ಲಖನೌದಿಂದ ಅಯೋಧ್ಯೆಗೆ ಪಾದಯಾತ್ರೆ ನಡೆಸಿದೆ.

ಅಯೋಧ್ಯೆಗೆ ಮುಸ್ಲಿಮರ ಪಾದಯಾತ್ರೆ
ಅಯೋಧ್ಯೆಗೆ ಮುಸ್ಲಿಮರ ಪಾದಯಾತ್ರೆ
author img

By PTI

Published : Feb 1, 2024, 10:03 AM IST

ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯಾಧೀಶ ಶ್ರೀರಾಮನ ಕಾಣಲು ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಹರಿದುಬರುತ್ತಿದ್ದಾರೆ. ಜಾತಿ-ಧರ್ಮ ಮೀರಿ ಬೆಳೆಯುತ್ತಿರುವ ಧರ್ಮಕ್ಷೇತ್ರ ಅಯೋಧ್ಯೆಗೆ ಲಖನೌದಿಂದ 350 ಮುಸ್ಲಿಮರ ಗುಂಪು ಪಾದಯಾತ್ರೆ ಮೂಲಕ ಬಂದು ಬಾಲರಾಮನ ದರ್ಶನ ಪಡೆದಿದ್ದಾರೆ.

ಆರ್​ಎಸ್​​ಎಸ್​ನ ಅಂಗಸಂಸ್ಥೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್​ಎಂ) ನೇತೃತ್ವದ ಗುಂಪು ಜನವರಿ 25ರಂದು ಲಖನೌದಿಂದ ಪ್ರಯಾಣ ಪ್ರಾರಂಭಿಸಿತು. 6 ದಿನಗಳ ಕಾಲ ನಡೆದುಕೊಂಡೇ ಪ್ರಭು ಶ್ರೀರಾಮನ ಜಪಿಸುತ್ತಾ ಜನವರಿ 31ರಂದು ಅಯೋಧ್ಯೆ ತಲುಪಿತು. ಬಳಿಕ ಭವ್ಯ ರಾಮಮಂದಿರದಲ್ಲಿ ವಿರಾಜಮಾನನಾದ 'ಬಾಲಕ್​ ರಾಮ'ನಿಗೆ ಪೂಜೆ ಸಲ್ಲಿಸಿದ್ದಾರೆ.

ಮುಸ್ಲಿಮರಿಂದ ರಾಮ ಪೂಜೆ: ಮುಸ್ಲಿಂ ಭಕ್ತರ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕೊರೆಯುವ ಚಳಿಯ ನಡುವೆ ಸುಮಾರು 150 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಅಯೋಧ್ಯೆಗೆ ತಲುಪಿದೆ. ಪ್ರತಿದಿನ 25 ಕಿಲೋ ಮೀಟರ್ ಕ್ರಮಿಸಿ, ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಅಲ್ಲಿಂದ ಮತ್ತೆ ಪಾದಯಾತ್ರೆ ಆರಂಭಿಸಿ ಅಯೋಧ್ಯೆಗೆ ತೆರಳಿದ್ದಾರೆ. ಮಂದಸ್ಮಿತ ರಾಮಚಂದ್ರನಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್​ನ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ತಿಳಿಸಿದ್ದಾರೆ.

ಇಮಾಮ್ ಎ ಹಿಂದ್ ಭಕ್ತರ ಗುಂಪು ರಾಮನ ಈ ದರ್ಶನವನ್ನು ಮಾಡಲೇಬೇಕಾದ ಕಾರ್ಯ ಎಂದು ಪರಿಗಣಿಸಿದ್ದಾರೆ. ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶ ಸಾರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾದಯಾತ್ರೆಯಲ್ಲಿ ಸಾಗಿಬಂದು ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಎಂಆರ್​ಎಂನ ಸಂಚಾಲಕ ರಾಜಾ ರಯೀಸ್ ಮತ್ತು ಗುಂಪಿನ ನೇತೃತ್ವ ವಹಿಸಿದ್ದ ಪ್ರಾಂತೀಯ ಸಂಯೋಜಕ ಶೇರ್ ಅಲಿ ಖಾನ್ ಅವರು ಭಗವಾನ್ ರಾಮನು ಎಲ್ಲರಿಗೂ ಪೂರ್ವಜ. ಧರ್ಮ, ಜಾತಿ ಮತ್ತು ಮತಕ್ಕಿಂತ ದೇಶ ಭಕ್ತಿ ಮತ್ತು ಮಾನವೀಯತೆ ದೊಡ್ಡದು. ಯಾವುದೇ ಧರ್ಮವೂ ಇತರರನ್ನು ಟೀಕಿಸುವ, ಅಪಹಾಸ್ಯ ಮಾಡುವುದನ್ನು ಕಲಿಸುವುದಿಲ್ಲ ಎಂದು ಹೇಳಿದ್ದಾರೆ.

ಲಕ್ಷಾಂತರ ಭಕ್ತರಿಂದ ರಾಮನ ದರ್ಶನ: ತೀವ್ರ ಚಳಿ ಇದ್ದರೂ, ರಾಮಮಂದಿರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಕಡಿಮೆಯಾಗಿಲ್ಲ. ಮಂದಿರ ಉದ್ಘಾಟನೆಯಾದ 6 ದಿನಗಳಲ್ಲಿ 18 ಲಕ್ಷಕ್ಕೂ ಅಧಿಕ ಭಕ್ತರು ರಾಮನ ದರ್ಶನ ಪಡೆದಿದ್ದರು. ಇದೀಗ ಅದು 20 ಲಕ್ಷಕ್ಕೂ ಅಧಿಕವಾಗಿದೆ ಎಂದು ತಿಳಿದುಬಂದಿದೆ. ಹೃದಯದಲ್ಲಿ ರಾಮಭಕ್ತಿಯೆಂಬ ಬೆಚ್ಚನೆಯ ಭಾವ ಮೈ ನಡುಗಿಸುವ ಚಳಿ ಭಕ್ತರಿಗೆ ಸವಾಲಾಗುತ್ತಿಲ್ಲ.

ಇದನ್ನೂ ಓದಿ: ರಾಮ ನಾಮದ ಮುಂದೆ ಥರಗುಟ್ಟಿದ 'ಚಳಿ': 6 ದಿನದಲ್ಲಿ 19 ಲಕ್ಷ ಜನರಿಂದ ಬಾಲರಾಮನ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.