ETV Bharat / bharat

ಬಡವರಿಗೆ ಸೂರು ಯೋಜನೆ ವಿಸ್ತರಣೆ: 5 ವರ್ಷದಲ್ಲಿ 2 ಕೋಟಿ ಹೆಚ್ಚುವರಿ ಮನೆ ನಿರ್ಮಾಣ

ಗ್ರಾಮೀಣ ಭಾಗದಲ್ಲಿನ ಜನರಿಗೆ ಸೂರು ಒದಗಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮುಂದಿನ 5 ವರ್ಷದಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆ ನಿರ್ಮಾಣಕ್ಕೆ ಬಜೆಟ್​ನಲ್ಲಿ ಘೋಷಿಸಲಾಗಿದೆ.

ಹೆಚ್ಚುವರಿ ಮನೆ ನಿರ್ಮಾಣ
ಹೆಚ್ಚುವರಿ ಮನೆ ನಿರ್ಮಾಣ
author img

By ETV Bharat Karnataka Team

Published : Feb 1, 2024, 1:29 PM IST

ನವದೆಹಲಿ: ಮುಂದಿನ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆಗಳ ನಿರ್ಮಾಣವನ್ನು ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಘೋಷಿಸಿದರು.

ಲೋಕಸಭೆಯಲ್ಲಿ 2024-25 ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಅವರು, ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅನುಷ್ಠಾನವನ್ನು ಮುಂದುವರೆಸಲಾಗಿದೆ. ಈಗಾಗಲೇ ಘೋಷಿಸಿದಂತೆ ದೇಶದ ಗ್ರಾಮೀಣ ಭಾಗದಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಗುರಿಯನ್ನು ಶೀಘ್ರದಲ್ಲೇ ತಲುಪಲಿದ್ದೇವೆ ಎಂದು ಹೇಳಿದರು.

3 ಕೋಟಿ ಮನೆ ನಿರ್ಮಾಣ ಸದ್ಯದಲ್ಲೇ ಪೂರ್ಣ: ಕೊರೊನಾ ಕಾರಣದಿಂದಾಗಿ ಆರ್ಥಿಕತೆ ಮೇಲೆ ಪೆಟ್ಟು ಬಿದ್ದರೂ, ಸವಾಲುಗಳನ್ನು ಎದುರಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಯೋಜಿಸಿದಂತೆ 3 ಕೋಟಿ ಮನೆಗಳ ನಿರ್ಮಾಣ ಗುರಿಯನ್ನು ಸದ್ಯದಲ್ಲೇ ಮುಟ್ಟಲಿದ್ದೇವೆ. ಬಳಿಕ ಇನ್ನೂ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಿದರು.

ದೇಶದಲ್ಲಿ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳದಿಂದ ಉಂಟಾಗುವ ಅವಶ್ಯಕತೆಗಳನ್ನು ಪೂರೈಸಲು ಮುಂದಿನ 5 ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಇದು ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳಿಗೆ ನೆರವಾಗಲಿದೆ ಎಂದು ಅವರು ಚುನಾವಣಾ ಪೂರ್ವ ಬಜೆಟ್‌ನಲ್ಲಿ ತಿಳಿಸಿದರು.

ಪ್ರಧಾನ ಮಂತ್ರಿ ಆವಾಸ್​ ಯೋಜನೆ (ಪಿಎಂಎವೈ) ದೇಶದ ಗ್ರಾಮೀಣ ಬಡವರಿಗೆ ವಸತಿ ಕಲ್ಪಿಸುವ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಬಯಲು ಪ್ರದೇಶದಲ್ಲಿ 1.20 ಲಕ್ಷ ರೂಪಾಯಿ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೆ 1.30 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿದೆ. ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ 60:40 ಅನುಪಾತದಲ್ಲಿ ಭರಿಸುತ್ತವೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯಡಿ 11.8 ಕೋಟಿ ರೈತರಿಗೆ ವರ್ಷಕ್ಕೆ ₹ 6 ಸಾವಿರ ಆರ್ಥಿಕ ನೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.