ನವದೆಹಲಿ: ಬಿಜೆಪಿ ಸರ್ಕಾರ ರೈತರು, ಮಹಿಳೆಯರು, ಸೈನಿಕರು, ರೈತರು, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಭಯದ ಉಡುಗೊರೆಯನ್ನು ನೀಡಿದೆ. ನೀಟ್ ಇನ್ನು ಮುಂದೆ ವೃತ್ತಿಪರ ಪರೀಕ್ಷೆಯಲ್ಲ. ನೀಟ್ ಒಂದು ವಾಣಿಜ್ಯ ಪರೀಕ್ಷೆ. ಇದು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲದ ಕಾರಣ ಸರ್ಕಾರ ನೀಟ್ ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸತ್ಯವೆಂದರೆ ನೀಟ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಂಬುವುದಿಲ್ಲ, ಅವರು ಇದನ್ನು ಶ್ರೀಮಂತ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾವಿಸುತ್ತಾರೆ. ಈ ಪರೀಕ್ಷೆ ಪ್ರತಿಭಾವಂತರಿಗೆ ಅಲ್ಲ ವಾಗ್ದಾಳಿ ನಡೆಸಿದರು.
Rahul Gandhi Ji must immediately APOLOGISE to all Hindus for terming them as violent. This is the same person who was telling foreign diplomats that Hindus are terrorists. This intrinsic hate towards Hindus must stop. pic.twitter.com/gA4vDJuIHA
— Jagat Prakash Nadda (@JPNadda) July 1, 2024
ಸ್ಪೀಕರ್ ಆಗಿ ಮರು ಆಯ್ಕೆಯಾದ ದಿನದಂದು ಓಂ ಬಿರ್ಲಾ ಅವರು ಪ್ರಧಾನಿ ಮೋದಿ ಅವರೊಂದಿಗೆ ಕೈಕುಲುಕುವಾಗ ಏಕೆ ತಲೆಬಾಗಿ ನಮಸ್ಕರಿಸಿದ್ದೀರಿ. ಆದರೆ ನನ್ನ ಜೊತೆ ಕೈಕುಲುಕಿದಾಗ ನೀವು (ಬಿರ್ಲಾ) ನೇರವಾಗಿ ನಿಂತಿದ್ದೀರಿ ಎಂದು ರಾಹುಲ್ ಹೇಳಿದ ತಕ್ಷಣ, ಸದನದಲ್ಲಿ ಕೋಲಾಹಲ ಉಂಟಾಯಿತು. ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ಓಂ ಬಿರ್ಲಾ, ನನಗಿಂತ ಹಿರಿಯ ವ್ಯಕ್ತಿಗೆ ನಾನು ನಮಸ್ಕರಿಸಬೇಕೆಂದು ನನ್ನ ಸಂಸ್ಕೃತಿ ಹೇಳುತ್ತದೆ ಎಂದರು.
#WATCH | Leader of Opposition in Lok Sabha, Rahul Gandhi says, " all our great men have spoken about non-violence and finishing fear...but, those who call themselves hindu only talk about violence, hatred, untruth…aap hindu ho hi nahi…"
— ANI (@ANI) July 1, 2024
pm modi is present in the house. pic.twitter.com/mdHtPI9TvL
ಗುಜರಾತ್ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲಿದೆ: ನಾನು ಲೋಕಸಭೆಯ ಸದಸ್ಯನಾಗಿ ನನ್ನ ವೈಯಕ್ತಿಕ ಆಕಾಂಕ್ಷೆಗಳನ್ನು ಅರಿತುಕೊಂಡೆ, ಭಯವನ್ನು ಬದಿಗಿಟ್ಟು ನಾನು ಎಲ್ಲಾ ವಿರೋಧ ಪಕ್ಷಗಳನ್ನು ಪ್ರತಿನಿಧಿಸುತ್ತೇನೆ. ಗುಜರಾತ್ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸಲಿದೆ. ಮೋದಿ ಜೀ, ದಯವಿಟ್ಟು ಈ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.
ಶಿವನ ಫೋಟೋ ತೋರಿಸಿದಾಗಲೆಲ್ಲಾ ಸದನದ ಕಲಾಪಗಳನ್ನು ರೆಕಾರ್ಡ್ ಮಾಡುವ ಕ್ಯಾಮರಾ ನನ್ನನ್ನು ಏಕೆ ಚಿತ್ರೀಕರಿಸುವುದನ್ನು ನಿಲ್ಲಿಸಿದೆ. ಶಿವನ ಫೋಟೋ ಕೈಗೆತ್ತಿಕೊಂಡ ತಕ್ಷಣ ಕ್ಯಾಮರಾ ಹೇಗೆ ಬೇರೆ ಕಡೆ ತಿರುಗತ್ತದೆ ಎಂಬುದನ್ನು ರಾಹುಲ್ ಪ್ರದರ್ಶಿಸಿ, ಸರ್ ಕ್ಯಾಮರಾ ನನ್ನನ್ನು ಸೆರೆಹಿಡಿಯುತ್ತಿಲ್ಲ ನೋಡಿ ಹೇಳಿದರು. "ಸಂಸತ್ತಿನಲ್ಲಿ ಕ್ಯಾಮರಾ ಹೇಗೆ ಕೆಲಸ ಮಾಡುತ್ತದೆ, ಮ್ಯಾಜಿಕ್ ನೋಡಿ" ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ರಾಹುಲ್ ಗಾಂಧಿ ತಕ್ಷಣ ಕ್ಷಮೆಯಾಚಿಸಬೇಕು: ಲೋಕಸಭೆಯಲ್ಲಿ "ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕ" ಎಂದು ಕರೆದಿದ್ದಕ್ಕಾಗಿ ರಾಹುಲ್ ಗಾಂಧಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಒತ್ತಾಯಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿರುವ ಅವರು, ರಾಹುಲ್ ಗಾಂಧಿ ಸಂಸದೀಯ ನಿಯಮಗಳನ್ನು ಕಲಿತಿಲ್ಲ. ಮೊದಲ ದಿನ, ಕೆಟ್ಟ ಪ್ರದರ್ಶನ! ಸುಳ್ಳುಗಳು + ಹಿಂದೂ ದ್ವೇಷ = ಸಂಸತ್ತಿನಲ್ಲಿ ರಾಹುಲ್ ಗಾಂಧಿ ಜಿ. ಇಂದಿನ ಭಾಷಣದಲ್ಲಿ ಅವರು 2024ರ ಜನಾದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ (ಸತತ ಮೂರನೇ ಸೋಲು) ಅಥವಾ ಅವರಿಗೆ ಯಾವುದೇ ನಮ್ರತೆ ಇಲ್ಲ ಎಂದು ತೋರಿಸಿದೆ.
ಇದೇ ವ್ಯಕ್ತಿ ವಿದೇಶಿ ರಾಜತಾಂತ್ರಿಕರಿಗೆ ಹಿಂದೂಗಳನ್ನು ಭಯೋತ್ಪಾದಕರು ಎಂದು ಹೇಳುತ್ತಿದ್ದರು. ಹಿಂದೂಗಳ ಮೇಲಿನ ಈ ಅಂತರ್ಗತ ದ್ವೇಷ ನಿಲ್ಲಬೇಕು. ವಿರೋಧ ಪಕ್ಷದ ನಾಯಕ ಈಗ 5 ಬಾರಿ ಸಂಸದರಾಗಿದ್ದಾರೆ. ಆದರೆ ಅವರು ಸಂಸದೀಯ ನಿಯಮಗಳನ್ನು ಕಲಿತಿಲ್ಲ ಮತ್ತು ಅವರಿಗೆ ಸಭ್ಯತೆಯ ಅರ್ಥವೂ ಗೊತ್ತಿಲ್ಲ. ಇಂದು ಸಭಾಧ್ಯಕ್ಷರ ಬಗೆಗಿನ ಅವರ ಮಾತುಗಳು ಕೆಟ್ಟ ಅಭಿರುಚಿಯನ್ನು ಹೊಂದಿದ್ದವು. ಸ್ಪೀಕರ್ ಅವರ ಸಮಗ್ರತೆ ಮತ್ತು ವ್ಯಕ್ತಿತ್ವದ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ರಾಹುಲ್ ಅವರು ಸಭಾಧ್ಯಕ್ಷರಿಗೆ ಕ್ಷಮೆಯಾಚಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಸಿಎಂ ಪಟ್ಟ ಅಲಂಕರಿಸಿದ್ದ ಅಖಿಲೇಶ್ ಯಾದವ್ಗೆ ಜನ್ಮದಿನದ ಸಂಭ್ರಮ! - Akhilesh Yadav Birthday